ರಾಜ್ಯದ ನಾಲ್ವರು ಸಂಸದರು ಕೇಂದ್ರ ಸಚಿವರಾಗಬಹುದು ಎಂದ ಬಿಜೆಪಿ ಹಿರಿಯ ನಾಯಕ

By Suvarna News  |  First Published Jul 4, 2021, 5:03 PM IST

* ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ 
* ಮೈಸೂರಿನಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ
* ರಾಜ್ಯದ ನಾಲ್ವರು ಸಂಸದರು ಕೇಂದ್ರ ಸಚಿವರಾಗಬಹುದು ಎಂದ ಬಿಜೆಪಿ ಹಿರಿಯ ನಾಯಕ


ಮೈಸೂರು, (ಜುಲೈ.04): ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ ನಡೆಯುತ್ತಿದೆ.

 ಇದರ ಮಧ್ಯೆ ರಾಜ್ಯದ ನಾಲ್ವರು ಸಂಸದರು ಕೇಂದ್ರ ಸಚಿವರಾಗಬಹುದು ಎಂದು ವಿ.ಶ್ರೀನಿವಾಸ ಪ್ರಸಾದ್ ಭವಿಷ್ಯ ನುಡಿದಿದ್ದಾರೆ.

Latest Videos

undefined

ಮೈಸೂರಿನಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಾಜ್ಯದ ನಾಲ್ವರು ಸಂಸದರು ಸಚಿವರಾಗಬಹುದು. ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾದರೆ ಉತ್ತಮ. ಅನಾರೋಗ್ಯದ ಕಾರಣ ನಾನು ಸಚಿವನಾಗಲು ಆಗಲ್ಲ. ಆದರೆ ಉಳಿದವರು ಸಚಿವರಾಗಲಿ ಎಂದು ಹೇಳಿದರು.

ಜು.7ರೊಳಗೆ ಪ್ರಧಾನಿ ಮೋದಿ ಸಂಪುಟ ವಿಸ್ತರಣೆ..?

ರಾಜ್ಯದಲ್ಲಿ ನಾಲ್ಕು ಸಂಸದರ ಹೆಸರು ಕೇಳಿ ಬರುತ್ತಿದೆ. ಈ ಪೈಕಿ ಸಂಸದ ಉಮೇಶ್  ಜಾದವ್ ಹೆಸರು ಕೇಳಿ ಬರುತ್ತಿದೆ. ಜಾದವ್ ಗೆ ಸ್ಥಾನ ನೀಡಬೇಕು. ಅದರಂತೆ ರಾಜ್ಯದಲ್ಲಿ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆ ಗೆ ಸಚಿವ ಸ್ಥಾನ ನೀಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ವಿಸ್ತರಣೆಯ ಚಟುವಟಿಕೆ ನಡೆಯುತ್ತಿದೆ. ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆ ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟದಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ನಾಯಕರು ಮುಂದಾಗಿದ್ದಾರೆ.

click me!