Karnataka Politics: 'ಜೆಡಿಎಸ್‌ ರಾಜ್ಯಾಧ್ಯಕ್ಷ ಇಬ್ರಾಹಿಂ ಒಬ್ಬ ಬಫೂನ್‌'

By Girish Goudar  |  First Published May 22, 2022, 12:26 PM IST

*   ಭಿನ್ನಾಭಿಪ್ರಾಯ ಬಿಟ್ಟು ಜಿಲ್ಲೆಯಲ್ಲಿ ಬಿಜೆಪಿ ಕಟ್ಟೋಣ
*  ಸಿಎಂ ಇಬ್ರಾಹಿಂ ಯಾರನ್ನ ಹೊಗಳುತ್ತಾರೆ, ಯಾರನ್ನು ತೆಗಳುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ
*  ಎತ್ತಿನಹೊಳೆ ಆರಂಭಿಸಿದ್ದು ಬಿಜೆಪಿ
 


ಕೋಲಾರ(ಮೇ.22):  ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಫೂನ್‌. ಯಾವಾಗ ಎಲ್ಲಿ ಬೇಕಾದರೂ ಇರುತ್ತಾರೆ, ಯಾವ ಯಾವ ಪಕ್ಷದಲ್ಲಿ ಇರುತ್ತಾರೆ, ಯಾರನ್ನ ಹೊಗಳುತ್ತಾರೆ, ಯಾರನ್ನು ತೆಗಳುತ್ತಾರೆ ಎನ್ನುವುದೇ ಗೊತ್ತಾಗುವುದಿಲ್ಲ. ರಾಜಕೀಯವಾಗಿ ಹತಾಶರಾಗಿದ್ದಾರೆ. ಇಲ್ಲಿ ಸಲ್ಲದವನು ಎಲ್ಲಿಯೂ ಸಲ್ಲನಯ್ಯ ಎಂದು ವಚನಗಳನ್ನು ಹೇಳಿಕೊಳ್ಳುವ ಇಬ್ರಾಹಿಂ ಅದರ ವಿರುದ್ಧದ ಕೆಲಸ ಮಾಡುತ್ತಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ಲೇವಡಿ ಮಾಡಿದರು.

ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಬೇಕಾದಷ್ಟುಕೆರೆಗಳು ತುಂಬಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಜಿಲ್ಲೆಯ ಜನತೆಯ ಆಶಯ ಪೂರೈಕೆಯಾಗಿದೆ ನೀರಿನ ವಿಚಾರದಲ್ಲಿ. ಸಿಎಂ ಇಬ್ರಾಹಿಂ ಬಂದು ಜಲಧಾರೆ ಹರಿಸುವ ಅವಶ್ಯಕತೆಯಿಲ್ಲ ಎಂದರು.

Latest Videos

undefined

ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಕಾರ್ಡ್ ಹೋಲ್ಡರ್, ಸ್ಪಷ್ಟನೆ ಕೊಟ್ಟ MLA

ಬೆಂಕಿಯನ್ನು ತಣ್ಣಗೆ ಮಾಡಿದ್ದೇನೆ

ಇಲ್ಲಿ ಬಂದು ನಮ್ಮ ವಿಚಾರವನ್ನಿಟ್ಟುಕೊಂಡು ಮುಸ್ಲಿಂ ಮತಗಳ ಓಲೈಕೆಗೆ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ನಮ್ಮ ಜತೆಗೂ ಮುಸ್ಲಿಂ ಮತದಾರರು ಇದ್ದಾರೆ. ನಾನು ಕೋಲಾರಕ್ಕೆ ಬಂದು ಬೆಂಕಿ ಹಚ್ಚಿಲ್ಲ. ಬೆಂಕಿಯಂತಿದ್ದ ಕೋಲಾರವನ್ನು ತಣ್ಣಗೆ ಮಾಡಿದ್ದೇವೆ. ಆದರೆ ನೀವು ಬೆಂಕಿ ಇಡುವುದಕ್ಕೆ ಬಂದಿರುವುದು ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಉತ್ತಮ ಆಡಳಿತವಿದ್ದು, ಭ್ರಷ್ಟಾಚಾರ ಎಲ್ಲಿ ಆಗಿದೆ ಎನ್ನುವುದನ್ನು ತೋರಿಸಲಿ. ಕೊರೋನಾ ಸಮಯದಲ್ಲಿ ಉಚಿತ ಲಸಿಕೆ ಹಾಗೂ ಪಡಿತರವನ್ನು ನೀಡಲಾಗಿದೆ. ಇದೆಲ್ಲವನ್ನೂ ಬಿಟ್ಟು ಬೆಲೆ ಏರಿಕೆ ಅದೂ ಇದು ಎಂದರೆ ಹೇಗೆ. ದೇಶ-ಧರ್ಮ-ದೇವಾಲಯದ ವಿರೋಧಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಕ್ಲಾಕ್‌ ಟವರ್‌ನಲ್ಲಿ ಭಾರತ ಧ್ವಜ ಹಾರಿಸಿದ್ದೇವೆ. ಮುಂದಿನ ದಿನಗಳಲ್ಲಿ ಲೋಕಸಭಾ ಕ್ಷೇತ್ರದಲ್ಲಿಯೂ ದೇವಾಲಯಗಳನ್ನು ಕೆಡವಿ ಅಕ್ರಮವಾಗಿ ಮಸೀದಿಗಳನ್ನು ಕಟ್ಟಿರುವುದನ್ನು ಕಾನೂನು ಮುಖಾಂತರ ತೆರವುಗೊಳಿಸುತ್ತೇವೆ ಎಂದರು.

ಭಿನ್ನಾಭಿಪ್ರಾಯ ಬಿಟ್ಟು ಜಿಲ್ಲೆಯಲ್ಲಿ ಬಿಜೆಪಿ ಕಟ್ಟೋಣ

ಬಿಜೆಪಿ ಕಾರ್ಯಕ್ರಮಗಳಲ್ಲಿ ನಮ್ಮ ಪೋಟೋ ಹಾಕಿಲ್ಲ, ನಮ್ಮ ಹೆಸರು ಹಾಕಿಲ್ಲ, ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಿಲ್ಲ ಎಂಬುದನ್ನು ಬಿಟ್ಟು ನಾವು ಎಲ್ಲರೂ ಒಂದೇ ಮನೆಯವರು ಎನ್ನುವ ರೀತಿಯಲ್ಲಿ ನಮ್ಮಲ್ಲಿನ ವೈಮನಸ್ಯ ಬಿಟ್ಟು ಪಕ್ಷ ಕಟ್ಟುವ ಕೆಲಸ ಮಾಡೋಣ ಎಂದು ಸಂಸದ ಎಸ್‌ ಮುನಿಸ್ವಾಮಿ ತಿಳಿಸಿದರು.

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್‌ ಯಾರಿಗೆ ಟಿಕೆಟ್‌ ನೀಡಿದರೂ ಅವರ ಪರವಾಗಿ ಕೆಲಸ ಮಾಡೋಣ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಅವರ ಪ್ರತ್ಯೇಕ ಬಣಗಳು ಇವೆ. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ಇವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಆದ್ದರಿಂದ ಬಿಜೆಪಿ ಕಾರ್ಯಕರ್ತರು ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಬಸವರಾಜ್‌ ಬೊಮ್ಮಯಿ ಸರ್ಕಾರಗಳ ಜನಪರವಾದ ಯೋಜನೆಗಳ ಬಗ್ಗೆ ಜನಕ್ಕೆ ಮುಟ್ಟಿಸಿದರೆ ಸಾಕು ಓಟು ಹಾಕತ್ತಾರೆ ಅ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ದಿನದಿಂದ ದಿನಕ್ಕೆ ಬಿಜೆಪಿ ಬಲಿಷ್ಠ: ಕಾಂಗ್ರೆಸ್ ತೊರೆದು ಕಮಲ ಹಿಡಿಯುತ್ತಿರುವ ಮುಖಂಡರು

ಎತ್ತಿನಹೊಳೆ ಆರಂಭಿಸಿದ್ದು ಬಿಜೆಪಿ

ರಾಜ್ಯದಲ್ಲಿ ಎತ್ತಿನಹೊಳೆ ಯೋಜನೆಯನ್ನು ಪ್ರಾರಂಭ ಮಾಡಲು ಅನುಮೋದನೆ ಮಾಡಿದ್ದು ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ. ನಂತರ ಜಗದೀಶ್‌ ಶೆಟ್ಟರ್‌ ಸಿಎಂ ಆದ ನಂತರ ಹಣ ಬಿಡುಗಡೆ ಮಾಡಿದ್ದರು. ಆದರೆ ಕಾಂಗ್ರೆಸ್‌ನವರು ತಾವು ಮಾಡಿದ್ದೆಂದು ಹೇಳಿಕೊಂಡು ಊರು ಊರು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರ್‌ ಪ್ರಕಾಶ್‌, ಮಾಜಿ ಶಾಸಕರಾದ ವೈ ಸಂಪಂಗಿ, ಬಿ.ಪಿ ವೆಂಕಟಮುನಿಯಪ್ಪ, ಮಾಲೂರು ಮಂಜುನಾಥ್‌ ಗೌಡ, ಜಿಲ್ಲಾ ಅಧ್ಯಕ್ಷ. ವೇಣುಗೋಪಾಲ್‌, ರಾಜ್ಯ ಕಾರ್ಯದರ್ಶಿ ಕೇಶವ ಪ್ರಸಾದ್‌, ಪಕ್ಷದ ಜಿಲ್ಲಾ ಉಸ್ತುವಾರಿ ಕಾಂತರಾಜ್‌, ನರೇಂದ್ರ ರಂಗಪ್ಪ ಇದ್ದರು.
 

click me!