ಸತೀಶ್ ಜಾರಕಿಹೊಳಿ ಹಣದ ಹೊಳೆ, ಹೆಂಡದ ಹೊಳೆ ಹರಿಸುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ನೀರು ಬರಬೇಕು. ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದ ಪ್ರತಾಪ್ ಸಿಂಹ
ಬೆಳಗಾವಿ(ಮಾ.25): ಸತೀಶ್ ಜಾರಕಿಹೊಳಿಗೆ ಹಿಂದೂ ಎನ್ನುವ ಶಬ್ದ ಅಸಹ್ಯವಾಗಿ ಕಾಣುತ್ತದೆ. ಇವರು ಯಾವಾಗ ಸುನ್ನತ್ ಮಾಡಿಸಿಕೊಂಡಿದ್ದಾರೋ ಗೊತ್ತಿಲ್ಲ. ಸುನ್ನತ್ ಮಾಡಿಸಿಕೊಂಡಿದ್ದರೇ ಸತೀಶ್ ಅಂತ ಯಾಕೆ ಹೆಸರಿಟ್ಟುಕೊಂಡಿದ್ದಿರಿ. ಹೆಸರು ಬದಲಾಯಿಸಿಕೊಳ್ಳಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲ ಹಾಕಿದರು.
ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹೆಬ್ಬಾಳ ಗ್ರಾಮದಲ್ಲಿ ನಡೆಯುತ್ತಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಣದ ಹೊಳೆ, ಹೆಂಡದ ಹೊಳೆ ಹರಿಸುತ್ತಾರೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆಗೆ ನೀರು ಬರಬೇಕು. ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಅನುದಾನ ತರುವಾಗ ಪಟ್ಟ ನೋವು ಯಾರಲ್ಲೂ ಹೇಳಿಕೊಂಡಿಲ್ಲ: ಲಕ್ಷ್ಮೀ ಹೆಬ್ಬಾಳಕರ
ರಾಜ್ಯದ ಮುಂದಿನ ಮುಖ್ಯಮಂತ್ರಿ ನಾನೇ ನಾನೇ ಎನ್ನುತ್ತಿದ್ದ ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ. ಭಾಗ್ಯಗಳ ಪಟ್ಟಿಯನ್ನೆ ಕೊಟ್ಟಸಿದ್ದರಾಮಯ್ಯಗೆ ಕ್ಷೇತ್ರ ಭಾಗ್ಯ ಸಿಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಟಿಕೆಟ್ ಪ್ರಕಟ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರು ನನ್ನ ಆದರ್ಶ. ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ನನ್ನ ಪುಣ್ಯ ಎಂದರು.
ಮೈಸೂರಿನ ರಾಜು ಕೊಲೆಯಾದಾಗ ಅವರ ತಾಯಿಗೆ ಹೋಗಿ ಒಂದು ಸಾಂತ್ವನ ಹೇಳಲಿಲ್ಲ ನೀವು. ಊರಿಗೊಬ್ಬಳೆ ಪದ್ಮಾವತಿ ಎಂಬಂತೆ ಸಿದ್ದರಾಮಯ್ಯ ನಾನು ಒಬ್ನೆ ಅಂತ ಮೆರೆಯುತ್ತಿದ್ದರು. ಅಂತಹ ಸಿದ್ದರಾಮಯ್ಯರನ್ನ 36 ಸಾವಿರ ಮತಗಳ ಅಂತರದಿಂದ ಸೋಲಿಸಲಾಯಿತು. ಇಂತವರನ್ನು ನಂಬಿಕೊಂಡು ಯಾರು ಓಟ್ ಹಾಕ್ತಾರೆ ಹೇಳಿ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಇಲಿ ಟಿಪ್ಪು ಸುಲ್ತಾನನನ್ನ ಹುಲಿ ಎನ್ನುವ ಸಿದ್ದರಾಮಯ್ಯ ನನ್ನ ಜನ ಕೈ ಹಿಡಿಯಲ್ಲ ಎಂದು ಆರೋಪಿಸಿದ ಅವರು, ನಾನು ನನ್ನ ಹೆಂಡತಿ ಮಗನನ್ನ ಕೇಳಿ ವರುಣಾಕ್ಕೆ ಬರ್ತಿನಿ ಎಂದು ಸಿದ್ದರಾಮಣ್ಣ ಹೇಳುತ್ತಾರೆ. ಸಿದ್ದರಾಮಣ್ಣಂಗೆ ಕ್ಷೇತ್ರದ ಚಿಂತೆ. ಅವರ ಹೆಂಡತಿಗೆ ವರುಣಾದ ಚಿಂತೆ. ಮಗನ ಕ್ಷೇತ್ರ ಬಿಟ್ಟುಕೊಟ್ಟರೆ ಮುಂದೆ ಕತೆ ಏನು ಅಂತ ಚಿಂತೆ. ಹಾಸನದಲ್ಲಿ ಗ್ಲೀಸರಿನ್ ಫ್ಯಾಮಿಲಿ ಇದೆ. ಚುನಾವಣೆ ಬಂತೆಂದರೆ, ನಿಂತು ಅಳೋದಕ್ಕೆ ಶುರು ಮಾಡುತ್ತಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.
ಕೈ ಟಿಕೆಟ್ ಘೋಷಣೆ ಬೆನ್ನಲ್ಲೇ ಬೆಳಗಾವಿಯಲ್ಲಿ ಭಿನ್ನಮತ ಸ್ಫೋಟ, ಸಿದ್ದರಾಮಯ್ಯ ನಿವಾಸಕ್ಕೆ ಸ್ವಾಮೀಜಿಗಳ ದೌಡು!
ದಮ್ಮು ತಾಕತ್ತು ಇರೋದು ಭಾಷಣದಲ್ಲಿ ಅಲ್ಲ. ನಿಮ್ಮ ಓಟಿನಲ್ಲಿ ಎಂದ ಅವರು, ತ್ರಿಬಲ… ತಲಾಕ್ ಮುಟ್ಟೋಕಾಗಲ್ಲ ಎನ್ನುತ್ತಿದ್ದರು. ಅದನ್ನ ತೆಗೆದು ಹಾಕಿದರು. ಅದು ನಿಜವಾದ ದಮ್ಮು. ಆರ್ಟಿಕಲ್ 370 ಮುಟ್ಟಿನೋಡಿ ದೇಶದಲ್ಲಿ ಏನಾಗುತ್ತೆ ಅಂದರು. ಅದನ್ನ ತೆಗೆದು ಮೋದಿ ದಮ್ಮು ತೋರಿಸಿದರು ಎಂದರು.
ಎರಡು ವರ್ಷ ಕೋವಿಡ್ ಬಂದಾಗ ಆಶಾ ಕಾರ್ಯಕರ್ತರು ಬಂದರೋ ಇಲ್ಲವೋ, ಅಂಗನವಾಡಿ ಕಾರ್ಯಕರ್ತರು ಬಂದರೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಬಂದು ವ್ಯಾಕ್ಸಿನೇಷನ್ ಆಗಿದೆಯಾ ಇಲ್ಲವೋ ಎಂದು ವಿಚಾರಿಸಿದರು ಎಂದು ತಿಳಿಸಿದರು.