ಹೈಕಮಾಂಡ್‌ ಹೇಳಿದಂತೆ ಕೇಳಲು ನಾನೇನು ಫುಟ್ಬಾಲೇ?: ಪ್ರಕಾಶ ಹುಕ್ಕೇರಿ

By Kannadaprabha News  |  First Published Feb 2, 2024, 8:09 PM IST

ಕಳೆದ ಬಾರಿ (2014ರಲ್ಲಿ) ಸಚಿವನಾಗಿದ್ದಾಗ ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ. ಈಗ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾನೇನು ಫುಟ್ಬಾಲೇ ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ


ಬೆಳಗಾವಿ(ಫೆ.02): ಹೈಕಮಾಂಡ್‌ನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿಯೇ ಮುಂದು ವರಿಯುತ್ತೇನೆ. ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್ ಹೇಳಿದರೆ ಕೇಳಲು ನಾನೇನು ಫುಟ್ಬಾಲೇ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೈಕಮಾಂಡ್ ವಿರುದ್ಧ ಖಾರವಾಗಿ ನುಡಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೆರೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ (2014ರಲ್ಲಿ) ಸಚಿವನಾಗಿದ್ದಾಗ ನಾನು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ. ಈಗ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಈಗ ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ನಾನೇನು ಫುಟ್ಬಾಲೇ ಎಂದು ಪ್ರಶ್ನಿಸಿದರು.

Tap to resize

Latest Videos

ಬರ ನಿರ್ವಹಣೆ ಅಗತ್ಯ ಸಿದ್ಧತೆಗೆ ಸೂಚನೆ: ಸಚಿವ ಕೃಷ್ಣ ಭೈರೇಗೌಡ

ಸಿದ್ದರಾಮಯ್ಯನವರು ನನಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧಿಸುವುದಿಲ್ಲ. ಹೈಕಮಾಂಡ್‌ನವರು ನನಗೆ ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವಿಧಾನಪರಿಷತ ಸದಸ್ಯನಾಗಿ ಮುಂದು ವರಿಯುತ್ತೇನೆ ಎಂದು ಪ್ರಕಾಶ ಹುಕ್ಕೇರಿ ಸ್ಪಷ್ಟನೆ ನೀಡಿದರು.

ಶಿಕ್ಷಕರ ಸೇವೆಯನ್ನು ಮಾಡುವುದಕ್ಕೆ ಶಿಕ್ಷಕರು ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಐದು ವರ್ಷಕಾಲ ನನ್ನ ಅವಧಿ ಇದೆ. ಕೇವಲ ಒಂದು ವರ್ಷದಲ್ಲಿ ಶಿಕ್ಷಕರಿಗಾಗಿ ಹನ್ನೆರಡರಿಂದ ಹದಿಮೂರು ಕೋಟಿ ರುಪಾಯಿ ಖರ್ಚು ಮಾಡಿದ್ದೇನೆ. ಶಿಕ್ಷಕರ ಬಹಳಷ್ಟು ಬೇಡಿಕೆಗಳಿವೆ. ಅದನ್ನು ಈಡೇರಿಸಲು ನನಗೆ 5 ವರ್ಷ ಬೇಕು ಎಂದರು.

click me!