ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ: ಎಂಎಲ್‌ಸಿ ಎನ್.ರವಿಕುಮಾರ್‌

By Kannadaprabha NewsFirst Published Jan 3, 2024, 12:31 PM IST
Highlights

ಅಲ್ಪಸಂಖ್ಯಾತರ ಓಲೈಸುತ್ತಾ, ಹಿಂದೂ ವಿರೋಧಿ ನೀತಿ, ಧೋರಣೆ ಅನುಸರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್‌ ಹೇಳಿದರು. 

ದಾವಣಗೆರೆ (ಜ.03): ಅಲ್ಪಸಂಖ್ಯಾತರ ಓಲೈಸುತ್ತಾ, ಹಿಂದೂ ವಿರೋಧಿ ನೀತಿ, ಧೋರಣೆ ಅನುಸರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್‌ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟ ಜಾತಿ-ಪಂಗಡ ಇತರೆ ಅಭಿವೃದ್ಧಿ ನಿಗಮಗಳಿಗೆ ಗ್ಯಾರಂಟಿ ಯೋಜನೆ ನೆಪ, ಬರದ ಕಾರಣ‍ವೊಡ್ಡಿ ನಯಾಪೈಸೆ ಅನುದಾನ ನೀಡದೇ ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ಘೋಷಿಸಿ, 1 ಸಾವಿರ ಕೋಟಿಗೆ ಕಾರ್ಯ ಯೋಜನೆ ರೂಪಿಸಲು ಹೇಳಿದ್ದಾರೆ. 

ಇಡೀ ರಾಜ್ಯವೇ ಬರದಿಂದ ತತ್ತರಿಸಿದ್ದು, ರೈತರಿಗೆ ಬೆಳೆ ಹಾನಿ, ಬರ ಪರಿಹಾರ ನೀಡಲಾಗದ ಕಾಂಗ್ರೆಸ್ಸಿಗರು ರೈತರ ಆತ್ಮಹತ್ಯೆಯನ್ನೂ ಹೀಯಾಳಿಸಿ, ಅವಮಾನಿಸುವ ಮನಸ್ಥಿತಿಗೆ ತಲುಪಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಕಾರ್ಯಕರ್ತರ ಬಿಡುಗಡೆ ಮಾಡುತ್ತಾ, ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರ ಕೇಸ್‌ಗಳ ಹಿಂಪಡೆಯುವ ಮಾತನ್ನಾಡುವ ಕಾಂಗ್ರೆಸ್ ಸರ್ಕಾರವು ಶ್ರೀರಾಮ ಜನ್ಮಭೂಮಿ ಹೋರಾಟ ಮಾಡಿದವರ ಹಳೆಯ ಪ್ರಕರಣಗಳ ಹೊರ ತೆಗೆದು, ಬಂಧಿಸುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಕೈಹಾಕಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಅದಕ್ಕೆ ತಕ್ಕ ಬೆಲೆ ತೆರುವ ದಿನಗಳು ಇನ್ನು ದೂರ ಇಲ್ಲ ಎಂದು ಎಚ್ಚರಿಸಿದರು.

ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ಮಕ್ಕಳನ್ನು ನೆಲದ ಮೇಲೆ ಕೂರಿಸುವಂತಿಲ್ಲ: ಸಚಿವ ಮಧು ಬಂಗಾರಪ್ಪ

ಬಿಜೆಪಿಗೆ ಒಬ್ಬರು ರಾಮ, ಕಾಂಗ್ರೆಸ್ಸಿ ಮತ್ತೊಬ್ಬ ರಾಮ ಅಂತಾ ಇರುವುದಿಲ್ಲ. ರಾಮ, ವಿಷ್ಣು, ಶಿವ ಎಲ್ಲಾ ದೇವರುಗಳೂ ಒಂದೇ. ಮಾಜಿ ಸಚಿವ ಆಂಜನೇಯ ತಮ್ಮ ಹೆಸರಿಗೆ ತಕ್ಕಂತೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಹಿರಿಯ ಮುಖಂಡ ಎಚ್‌.ಎನ್.ಶಿವಕುಮಾರ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಉಪ ಮೇಯರ್ ಯಶೋಧಾ ಯೋಗೇಶ, ಸದಸ್ಯರಾದ ಮಾಜಿ ಮೇಯರ್ ಎಸ್‌.ಟಿ.ವೀರೇಶ, ಸೋಗಿ ಶಾಂತಕುಮಾರ, ಆರ್‌. ಎಲ್.ಶಿವಪ್ರಕಾಶ, ಕೆ.ಎಂ.ವೀರೇಶ, ಆರ್.ಶಿವಾನಂದ, ಧನಂಜಯ ಕಡ್ಲೇಬಾಳು, ಶಿವನಗೌಡ ಪಾಟೀಲ್‌, ಟಿಂಕರ್ ಮಂಜಣ್ಣ ಇತರರಿದ್ದರು.

ಮೆಜೆಸ್ಟಿಕ್‌ನಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಿ: ರೈತರಿಗೆ ಬರ ಪರಿಹಾರ ನೀಡುವ ಬದಲು ಕೇಂದ್ರದತ್ತ ಬೊಟ್ಟು ಮಾಡುತ್ತಿರುವುದು ಸರಿಯಲ್ಲ. ಬರ ಬಂದ ಸಂದರ್ಭದಲ್ಲಿ ಸರ್ಕಾರಕ್ಕೆ ಮೊದಲ ಆಯ್ಕೆ ರೈತರು ಆಗಬೇಕೋ ಅಥವಾ ಅಲ್ಪಸಂಖ್ಯಾತರೋ ಎಂಬುದು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಡಬ್ಬ ಇಟ್ಟು, ಅಭಿಪ್ರಾಯ ಸಂಗ್ರಹಿಸಲಿ. ಯಾವ ಉತ್ತರ ಬರುತ್ತದೆ ಎಂಬುದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ಭಾಗವಾದವರು ತಿಳಿಯಲಿ ಎಂದು ಎಂಎಲ್‌ಸಿ ರವಿಕುಮಾರ್‌ ಸಲಹೆ ನೀಡಿದರು.

ಬಿಜೆಪಿಯವರು ಮಾತ್ರ ರಾಮ ಭಕ್ತರಾ? ನಾವು ರಾಮ ಭಕ್ತರು: ಶಾಸಕ ಪ್ರಸಾದ್ ಅಬ್ಬಯ್ಯ

ನೈತಿಕತೆ ಪ್ರಶ್ನೆ ಮಾಡಲು ನಾವ್ಯಾರು ಅಂತಾ ಆರ್‌.ಅಶೋಕ್‌, ಬಿ.ವೈ.ವಿಜಯೇಂದ್ರ, ನನ್ನನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಹಗುರ ಮಾತು ಸಚಿವ ಸ್ಥಾನದಲ್ಲಿರುವ ನಿಮಗೆ ಶೋಭೆ ತರದು. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪಗೆ ಪ್ರೌಢಿಮೆ, ಪ್ರಬುದ್ಧತೆ, ನೈತಿಕತೆ ಇದ್ದರೆ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಧು ರಾಜೀನಾಮೆ ಪಡೆಯಲಿ.
-ಎನ್.ರವಿಕುಮಾರ, ವಿಧಾನಪರಿಷತ್‌ ಸದಸ್ಯ

click me!