
ಬೆಳಗಾವಿ(ಜು.01): 5 ಕೆಜಿ ಅಕ್ಕಿ ಬದಲು ಹಣ ನೀಡುವ ಸರ್ಕಾರದ ನಿರ್ಧಾರಕ್ಕೆ ಜನ ವಿರೋಧಿಸುತ್ತಿಲ್ಲ. ಇದರಿಂದ ಜನರಿಗೆ ಅನುಕೂಲವಾಗುತ್ತಿದೆ. ಆದರೆ, ಅಕ್ಕಿ ವಿಚಾರದಲ್ಲಿ ಯಾರೋ ವಿರೋಧ ಮಾಡಿಸುತ್ತಿದ್ದಾರೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ, ಅನ್ನ, ಚಿಕಿತ್ಸೆ ಶಾಲೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಉದ್ದೇಶಪೂರ್ವಕವಾಗಿ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬರಲಿ ಎಂದು ವಿರೋಧ ಮಾಡಿಸುತ್ತಿದ್ದಾರೆ. ಈ ಸರ್ಕಾರ ಹೇಳಿದ ಹಾಗೆ ನಡೆಸಿಕೊಳ್ಳಲಿಲ್ಲ ಎಂದು ಜನ ಮಾತನಾಡಲಿ ಎಂದು ಮಾಡುತ್ತಿದ್ದಾರೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಜೊತೆ ಹಣ ಇಂದಿನಿಂದಲೇ ಹಾಕಲಾಗುವುದು: ಮುನಿಯಪ್ಪ
ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿ ನೀಡುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ. ದುಡ್ಡು ಇದ್ದವರು ಹೇಳುತ್ತಾರೆ. ಎಲ್ಲಾದರೂ ಹೋಗಿ ಥ್ರಿಲ್ ಆಗಿ ಬರೋಣವೆಂದು, ಬಡವರು ಎಲ್ಲಿ ಹೋಗುತ್ತಿದ್ದರು. ನೀವು ರಾಮ ರಾಮ ಅಂತಿದ್ದರಲ್ಲ, ನಿಮ್ಮ ರಾಮನ ತೋರಿಸಲು ಕಾಂಗ್ರೆಸ್‌ನವರು ಬಸ್ ಕೊಟ್ಟಿದ್ದಾರೆ ಎಂದರು.
ಕೇಂದ್ರ ಸರ್ಕಾರಕ್ಕೆ ಅಕ್ಕಿ ನೀಡುವಂತೆ ಬಿಜೆಪಿ ನಾಯಕರು ಆಗ್ರಹಿಸುತ್ತಿಲ್ಲ. ಇದು ಸತ್ಯ. 7 ಲಕ್ಷ ಟನ್ ಅಕ್ಕಿ ನಮ್ಮ ಹತ್ತಿರ ಬಿದ್ದಿದೆ. ಯಾಕೆ ಕೊಡುತ್ತಿಲ್ಲ? ಉನ್ನುವ ಅನ್ನಕ್ಕೂ ರಾಜಕಾರಣ ಮಾಡಬಾರದು. ನಾನು ದಿ.ದಿವರಾಜ ಅರಸ ಕೈ ಕೆಳಗೆ ಬೆಳೆದವನು. ರಾಜಕೀಯ ಮಾಡಿ, ಆದರೆ, ಎಲ್ಲದಕ್ಕೂ ರಾಜಕೀಯ ಮಾಡಬೇಡಿ ಎಂದು ಹೇಳಿಕೊಟ್ಟಿದ್ದಾರೆ ಎಂದರು.
ವಲಸಿಗರಿಂದ ಬಿಜೆಪಿ ಹಾಳಾಯಿತು ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ಅವನು ಕೆ.ಎಸ್.ಈಶ್ವರಪ್ಪವಲ್ಲ. ಎಚ್.ಎಂ.ಈಶ್ವರಪ್ಪ. ಎಚ್.ಎಂ ಅಂದರೆ ಹುಚ್ಚಮುಂಡೇದು ಎಂದರ್ಥ ಎಂದರು.
ಬಿಜೆಪಿಗೆ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ನೇಮಕ ಮಾಡಲಾಗುತ್ತಿಲ್ಲ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಯಾವ ಕಾರಣಕ್ಕೂ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಬಂದೂ ಇಲ್ಲ. ಒಂದು ಸಾರಿ ಕುಮಾರಸ್ವಾಮಿ ಹೆಗಲು ಮೇಲೆ ಕುಳಿತುಕೊಂಡು ಬಂದರು. ಒಂದು ಸಾರಿ ನಮ್ಮ ಹೆಗಲ ಮೇಲೆ ಕುಳಿತುಕೊಂಡು ಬಂದು ಅಧಿಕಾರ ಮಾಡಿದರು. ಸ್ವಂತ ಬಲದ ಮೇಲೆ ಬಿಜೆಪಿ ಯಾವತ್ತಾದರೂ ಅಧಿಕಾರಕ್ಕೆ ಬಂದಿದೆಯಾ ಎಂದು ಪ್ರಶ್ನಿಸಿದರು. ಬಿಜೆಪಿ ಮುಂದೆ ಅಧಿಕಾರಕ್ಕೆ ಬರುವುದೇ ಇಲ್ಲ ಎಂದರು.
'ಅಕ್ಕಿ ಕೊಡದವರು ನಾವು ರೊಕ್ಕ ಕೊಡುವುದನ್ನು ಏಕೆ ಪ್ರಶ್ನಿಸ್ತಾರೆ ?' ಬಿಜೆಪಿ ವಿರುದ್ಧ ಶಾಸಕ ಹಿಟ್ನಾಳ್ ಕಿಡಿ
ನನ್ನ ಅಜೆಂಡಾದಲ್ಲಿ ಬದಲಾವಣೆ ಇಲ್ಲ:
ಸಂದರ್ಭ, ಹಲವಾರು ಕಾರಣಗಳಿಂದ ನಾನು ಬೇರೆ ಪಕ್ಷ ಸೇರಬೇಕಾಯಿತು. ನನ್ನ ಝೇಂಡಾ ಬದಲಾವಣೆ ಆಗಬಹುದು. ಆದರೆ, ನನ್ನ ಅಜೇಂಡಾ ಬದಲಾವಣೆ ಆಗಲ್ಲ. ನಾನು ಜೆಡಿಎಸ್ ಸೇರಿದಾಗಲಿ, ಬಿಜೆಪಿ ಸೇರಿದಾಗಲಿ ಮಾಧ್ಯಮದವರು ನನ್ನ ಪ್ರಶ್ನಿಸಿದಾಗ ಇದೇ ಉತ್ತರ ನೀಡಿದ್ದೇನೆ. ನನ್ನ ಅಜೆಂಡಾ ಎಂದಿಗೂ ಬದಲಾವಣೆಯಾಗಲ್ಲ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಎಂಎಲ್ಸಿ ರವಿ ಭಾಷಣ ಮಾಡಿದರು. ಈ ದೇಶ ಕಡುಭ್ರಷ್ಟಪ್ರಧಾನಿ ನೆಹರೂ ಅಂದಿದ್ದರು. ಎಲ್ಲದರೂ ಉಂಟಾ ಅದು. ನಾನದಕ್ಕೆ ಹೇಳಿದ್ದೆ ನೋಡಪ್ಪ ಬ್ರಿಟಿಷರು ಭಾರತ ಬಿಟ್ಟು ಹೋದಾಗ ಭಾರತದ ಜನಸಂಖ್ಯೆ 33 ಕೋಟಿ ಇತ್ತು. ನಾವು ಶಾಲೆಯಲ್ಲಿ ಇರಬೇಕಾದರೆ ಅಮೇರಿಕದ ಜೋಳ, ಗೋಧಿಯಲ್ಲಿ ಉಪ್ಪಿಟ್ಟು ಮಾಡಿಕೊಡುತ್ತಿದ್ದರು. ನಿಮ್ಮ ತಂದೆನೋ, ತಾತನೋ ಇದ್ದರೆ ಕೇಳು ಎಂದು ಹೇಳಿದ್ದೆ. 9 ವರ್ಷ ಬಿಜೆಪಿ ಸರ್ಕಾರದ ಇದೆ. ಕರ್ನಾಟಕದ ರಾಜಧಾನಿಗೆ ಏನು ಕೊಟ್ಟಿರೀ. ಏನೂ ಕೊಡಲಿಲ್ಲ. ಜವಾಹರಲಾಲ್ ನೆಹರು ರಾಜ್ಯದ ರಾಜಧಾನಿ ಬೆಂಗಳೂರಿಗೆ ನವರತ್ನ ಕೊಟ್ಟರು. ಎಚ್‌ಎಂಟಿ, ಎಚ್‌ಎಲ್, ಡಿಆರ್‌ಡಿಒ, ನಿಮ್ಹಾನ್ಸ್ ಸೇರಿ ನವರತ್ನ ಕೊಟ್ಟು ಉದ್ಯೋಗವಕಾಶ ಕೊಟ್ಟವರು ನೆಹರು. ಈ ರೀತಿ ಮಾತನಾಡಬಾರದು, ಸದನದ ಸದಸ್ಯ ಗಂಭೀರವಾಗಿ ಮಾತನಾಡಿಬೇಕು ಎಂದು ಹೇಳಿದ್ದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.