ಸಿದ್ದೇಶ್ವರ ಜನ್ಮದಿನ: 5ರಂದು ನಮ್ಮಭಿಮಾನ ಕಾರ‍್ಯಕ್ರಮ ಬಿಎಸ್‌ವೈ ಉದ್ಘಾಟನೆ

By Kannadaprabha NewsFirst Published Jul 1, 2023, 11:37 AM IST
Highlights

ದಾವಣಗೆರೆ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ್‌ರ 71ನೇ ಜನ್ಮದಿನ ಅಂಗವಾಗಿ ನಮ್ಮಭಿಮಾನ ಸಮಾರಂಭ ಜು.5ರಂದು ನಗರದ ಅರುಣ ಚಿತ್ರ ಮಂದಿರ ಎದುರಿನ ವಾಣಿ ಹೋಂಡಾ ಶೋ ರೂಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತರಾವ್‌ ಜಾಧವ್‌ ತಿಳಿಸಿದರು.

ದಾವಣಗೆರೆ (ಜು.1) :  ದಾವಣಗೆರೆ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ್‌ರ 71ನೇ ಜನ್ಮದಿನ ಅಂಗವಾಗಿ ನಮ್ಮಭಿಮಾನ ಸಮಾರಂಭ ಜು.5ರಂದು ನಗರದ ಅರುಣ ಚಿತ್ರ ಮಂದಿರ ಎದುರಿನ ವಾಣಿ ಹೋಂಡಾ ಶೋ ರೂಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತರಾವ್‌ ಜಾಧವ್‌ ತಿಳಿಸಿದರು.

ನಮ್ಮಭಿಮಾನ ಸಮಾರಂಭ ಸ್ಥಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಅಂದು ಬೆಳಿಗ್ಗೆ 10.30ಕ್ಕೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಜನ್ಮದಿನದ ಅಂಗವಾಗಿ ನಮ್ಮಭಿಮಾನ ಕಾರ್ಯಕ್ರಮ ನಡೆಯಲಿದೆ ಎಂದರು. ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ ಅಧ್ಯಕ್ಷತೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಸಮಾರಂಭ ಉದ್ಘಾಟಿಸುವರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavarj bommai), ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ(Pralhad joshi), ಎ.ನಾರಾಯಣ ಸ್ವಾಮಿ, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ(KS Eshwarappa), ಮಾಜಿ ಸಚಿವರಾದ ಶ್ರೀರಾಮುಲು, ಮುರುಗೇಶ ನಿರಾಣಿ ಇತರರು ಭಾಗವಹಿಸುವರು ಎಂದರು.

 

ದಾವಣಗೆರೆಯಲ್ಲಿ 25,000 ಎಕ್ರೇಲಿ ಕಾರ್ಗಿಲ್‌ನಿಂದ ರೈತರಿಗೆ ತರಬೇತಿ

ವಿಧಾನಪರಿಷತ್‌ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಬಿ.ಪಿ.ಹರೀಶ, ಎಂ.ಚಂದ್ರಪ್ಪ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಎಸ್‌.ವಿ.ರಾಮಚಂದ್ರ, ಮಾಡಾಳ್‌ ವಿರುಪಾಕ್ಷಪ್ಪ, ಪ್ರೊ.ಎನ್‌.ಲಿಂಗಣ್ಣ, ಬಸವರಾಜ ನಾಯ್ಕ, ಡಾ.ಎ.ಎಚ್‌.ಶಿವಯೋಗಿಸ್ವಾಮಿ, ಎಂಎಲ್ಸಿ ಕೆ.ಎಸ್‌.ನವೀನ, ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್‌.ಎಸ್‌.ಶಿವಕುಮಾರ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಕೊಂಡಜ್ಜಿ ಜಯಪ್ರಕಾಶ, ಜಿ.ಎಸ್‌.ಶ್ಯಾಮ್‌, ಪಾಲಿಕೆ ಸದಸ್ಯರಾದ ಎಸ್‌.ಟಿ.ವೀರೇಶ, ಬಿ.ಜಿ.ಅಜಯಕುಮಾರ, ಆರ್‌.ಶಿವಾನಂದ, ಆರ್‌.ಎಲ್‌.ಶಿವಪ್ರಕಾಶ, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಎನ್‌.ರಾಜಶೇಖರ, ಕೆಟಿಜೆ ನಗರ ಲೋಕೇಶ, ಎಚ್‌.ಎನ್‌.ಶಿವಕುಮಾರ, ದೊಗ್ಗಳ್ಳಿ ವೀರೇಶ, ಜಿ.ಎಸ್‌.ಗಂಗಾಧರ, ಸೋಗಿ ಗುರು, ಟಿಂಕರ್‌ ಮಂಜಣ್ಣ, ಎಸ್‌.ಟಿ.ಯೋಗೇಶ್ವರ, ಕಿಶೋರ, ಶಿವರಾಜ ಪಾಟೀಲ್‌, ಸುರೇಶ ಗಂಡಗಾಳೆ, ಇತರರಿದ್ದರು.

20 ಸಾವಿರ ಮಂದಿ ಸೇರುವ ನಿರೀಕ್ಷೆ

ಸತತವಾಗಿ 4 ಅವಧಿಗೆ ಆಯ್ಕೆಯಾದ ಸಂಸದ ಡಾ.ಸಿದ್ದೇಶ್ವರ ಕೇಂದ್ರ ಸಚಿವರಾಗಿ ಜಿಲ್ಲೆಯನ್ನೂ ಅಭಿವೃದ್ಧಿಪಡಿಸಿದ್ದಾರೆ. ನಾವೆಲ್ಲರೂ ಅಭಿಮಾನದಿಂದ ಸಂಸದ ಡಾ.ಸಿದ್ದೇಶ್ವರ ಜನ್ಮದಿನವನ್ನು ನಮ್ಮಭಿಮಾನ ಕಾರ್ಯಕ್ರಮವಾಗಿ ಆಚರಿಸುತ್ತಿದ್ದು, ಹರಪನಹಳ್ಳಿ ತಾಲೂಕು ಸೇರಿ ಜಿಲ್ಲೆಯಿಂದ ಸುಮಾರು 20 ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದ್ದು, ಊಟದ ವ್ಯವಸ್ಥೆ ಮಾಡಲಾಗಿದೆ. ಪೌರ ಕಾರ್ಮಿಕರಿಗೆ, ಕ್ರೀಡಾ ಸಾಧಕರಿಗೆ, ಪಕ್ಷಕ್ಕಾಗಿ ದುಡಿದವರಿಗೆ ಸನ್ಮಾನಿಸಿ, ಗೌರವಿಸಲಾಗುವುದು ಎಂದು ಯಶವಂತರಾವ್‌ ಮಾಹಿತಿ ನೀಡಿದರು.

ಕಾಂಗ್ರೆಸ್‌ ‘ಗ್ಯಾರಂಟಿ’ಗೆ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲವೆನ್ನುವುದು ಸರಿಯಲ್ಲ: ಸಂಸದ ಸಿದ್ದೇಶ್ವರ

ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನಮ್ಮ ನಾಯಕರಾಗಿದ್ದು, ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಮಾಡಿದ್ದಾರೆ. ಕೆಲಸ ಮಾಡುವ ಇಚ್ಛಾಶಕ್ತಿ, ಬದ್ಧತೆ ಜೊತೆಗೆ ಜನಬಲ ಇರುವುದರಿಂದಲೇ ದಾವಣಗೆರೆ ಸಂಸದರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲೂ ಸಂಸದ ಡಾ.ಸಿದ್ದೇಶ್ವರ್‌ರಿಗೆ ಟಿಕೆಟ್‌ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಸ್‌.ಎಂ.ವೀರೇಶ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ.

ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, ಇಲ್ಲಿ ಯಾರು ಬೇಕಾದರೂ ಪಕ್ಷದ ಟಿಕೆಟ್‌ ಕೇಳುವ ಅಧಿಕಾರವಿದೆ. ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ತಾವೂ ಟಿಕೆಟ್‌ ಆಕಾಂಕ್ಷಿ ಎಂಬುದಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದರಲ್ಲಿ ಯಾವುದೇ ವಿಶೇಷವಿಲ್ಲ. ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್‌ ಕೊಟ್ಟರೂ ಬಿಜೆಪಿ ಗೆಲುವೇ ನಮ್ಮೆಲ್ಲರ ಗುರಿಯಾಗಿರುತ್ತದೆ.

ಎಸ್‌.ಎಂ.ವೀರೇಶ ಹನಗವಾಡಿ, ಬಿಜೆಪಿ ಜಿಲ್ಲಾಧ್ಯಕ್ಷ

click me!