ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ತಿಂಗಳು ಕಳಿತಾ ಬಂದಿದೆ. ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತರುವಲ್ಲಿ ಬ್ಯುಸಿಯಾಗಿದೆ. ಆದ್ರೆ ಅಷ್ಟೇ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ದಿನಕ್ಕೊಂದು ಆರೋಪ ಮಾಡ್ತಿವೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ (ಆ.14): ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ತಿಂಗಳು ಕಳಿತಾ ಬಂದಿದೆ. ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತರುವಲ್ಲಿ ಬ್ಯುಸಿಯಾಗಿದೆ. ಆದ್ರೆ ಅಷ್ಟೇ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ದಿನಕ್ಕೊಂದು ಆರೋಪ ಮಾಡ್ತಿವೆ. ವರ್ಗಾವಣೆ, ಕಮಿಷನ್ ಸೇರಿದಂತೆ ಹಲವು ಆರೋಪಗಳ ಸುರಿಮಳೆಗಳನ್ನು ಮಾಡುತ್ತಿದ್ದಾರೆ. ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸಹ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದೊಂದು ಮೋಸಗಾರರ ಸರ್ಕಾರ, ಈ ಸರ್ಕಾರಕ್ಕೆ ಬಹಳ ದಿನಗಳ ಭವಿಷ್ಯ ಇಲ್ಲ ಎಂದು ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
undefined
ಸರ್ಕಾರ ಕಮಿಷನ್ ತಗೊಳೋದ್ರಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದೆ: ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲಾ ಜನಾಂಗದ ಜನರಿಗೂ ಮೂಗಿಗೆ ತುಪ್ಪ ಸವರಿ ಮೋಸ ಮಾಡುತ್ತಿದೆ. ಇದೊಂದು ಮೋಸಗಾರರ ಸರ್ಕಾರ, ಈ ಸರ್ಕಾರಕ್ಕೆ ಬಹಳ ದಿನಗಳ ಕಾಲ ಭವಿಷ್ಯ ಇಲ್ಲ. ಕಮಿಷನ್ ತಗೊಳೋದ್ರಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿದೆ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಯಾದಗಿರಿಯ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ಜೊತೆಗೆ ಈ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿಯಾಗಿದ್ದು, ದಲಿತರ ಅಭಿವೃದ್ಧಿಗಾಗಿ ಮೀಸಲಿಟಿದ್ದ ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಲಾಗ್ತಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಇದೇ ಸಿದ್ದರಾಮಯ್ಯ ಅವ್ರು ಟ್ವಿಟ್ ಮಾಡುವ ಮೂಲಕ SCSP/TSP ಅನುದಾನವನ್ನು ಬೇರೆಯದಕ್ಕೆ ಬಳಕೆ ಮಾಡಬಾರದು ಅಂತಾ ಹೇಳಿದ್ರು. ಆದ್ರೆ ಈಗ ಅದರ ಅನುದಾನವನ್ನು ಬೇರೆಯದಕ್ಕೆ ಬಳಸಿದ್ದು ಎಷ್ಟು ಸರಿ.?. ಹಾಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪ್ರತಿಯೊಬ್ಬರು ಸ್ವಂತ ಮನೆ ಹೊಂದಬೇಕೆಂಬುದು ನಮ್ಮ ಗುರಿ: ಸಚಿವ ಪರಮೇಶ್ವರ್
ಮಹಾದೇವಪ್ಪ ಹಾಗೂ ಪ್ರಿಯಾಂಕ ಖರ್ಗೆರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅನುದಾನ ಕಡಿತ: ದಲಿತರ ಅಭಿವೃದ್ಧಿಯ ಅನುದಾನವಾದ SCSP/TSP ಹಣವನ್ನು ಗ್ಯಾರೆಂಟಿಗಳಿಗೆ 11 ಸಾವಿರ ಕೋಟಿ ರೂಪಾಯಿಯನ್ನು ಬಳಕೆ ಮಾಡಲಾಗಿದೆ. SCSP/TSP ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಕೊಡ್ತಿವಿ ಅಂತ ಹೇಳುವಾಗ ಲೋಕೋಪಯೋಗಿ ಸಚಿವ ಹೆಚ್.ಸಿ.ಮಹಾದೇವಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಪಕ್ಕದಲ್ಲಿಯೇ ಕೂಡಿಸಿಕೊಂಡು ಹೇಳಿದ್ರಿ. ಇದು ನೀವು ದಲಿತರಿಗೆ ಮಾಡುವ ಮೋಸ ಅಲ್ವಾ..? ದಲಿತರ ಅಭಿವೃದ್ದಿ ಕಾರ್ಯಗಳಿಗೆ ಮಾತ್ರ SCSP/TSP ಹಣವನ್ನು ಬಳಸಿಕೊಳ್ಳಬೇಕು ಅಂದವರು ಹೀಗ್ಯಾಕೆ ಉಲ್ಟಾ ಹೋಡಿದ್ರಿ..? ಬಿಜೆಪಿ ಸರ್ಕಾರ ತಪ್ಪು ಮಾಡಿದೆ ಅಂತಾ ಹೇಳಿ, 30 ಸಾವಿರ ಕೋಟಿ ಅಲ್ಲ, 48 ಸಾವಿರ ಕೋಟಿ ರೂ. ಕೊಡಬೇಕು ಅಂತ ಹೇಳಿದ್ರಿ. ಆದ್ರೆ ನೀವು ಮಾತ್ರ ದಲಿತರ ಅಭಿವೃದ್ಧಿಯ ಹಣ ಬೇರೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ಇದ್ಯಾವ ದಲಿತಪರ..? ಕಾಂಗ್ರೆಸ್ ಸರ್ಕಾರ ಬಂದಾಗ 17% ತೆಗೆದಿದ್ದೀವಿ ಅಂದ್ರು, ಎಲ್ಲಿ ತೆಗೆದಿಟ್ರಿ..? ಆದ್ರೆ ಕಾಂಗ್ರೆಸ್ ಸರ್ಕಾರ ದಲಿತರ ವಿರೋಧಿ ಎಂಬುದಕ್ಕೆ ಇದೆ ನಿದರ್ಶನ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಕಸಾಪಗೆ 1 ಕೋಟಿ ಸದಸ್ಯರ ನೋಂದಣಿ ಗುರಿ: ಮಹೇಶ್ ಜೋಶಿ
ಸ್ವಪಕ್ಷದವರು ಛಲವಾದಿ ನಾರಾಯಣಸ್ವಾಮಿ ಗುಡುಗು: 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೀನಾಯ ಸೋಲುಂಡಿತ್ತು. 120 ಕ್ಕೂ ಅಧಿಕ ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಕೇವಲ 66 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಈ ಸೋಲಿಗೆ ಬಿಜೆಪಿ ನಾಯಕರು ಹಲವು ಆ್ಯಂಗಲ್ ಗಳಲ್ಲಿ ಕಾರಣಗಳನ್ನು ಹುಡುಕಿದ್ದಾರೆ. ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸ್ವಪಕ್ಷದ ಮುಖಂಡರಾದ ಕೆ.ಎಸ್.ಈಶ್ವರಪ್ಪ ಹಾಗೂ ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು. ನಮವರೇ ಕೆಲವರು ಮುಸ್ಲಿಂ ವೋಟ್ ಬೇಡ ಅಂತಾ ಹೇಳಿ ಬಿಡ್ತಾರೆ. ನಾವು ಒಂದು ಸಮುದಾಯವನ್ನು ಹೊರಗಿಟ್ಟು ರಾಜಕಾರಣ ಮಾಡಲು ಬರಲ್ಲ. ಹಿಂದೂಗಳನ್ನು ಹೊರಗಿಟ್ಟು ಹಿಂದುತ್ವ ಮಾಡಲು ಆಗಲ್ಲ. ಮುಸ್ಲಿಂ ವೋಟ್ ಬೇಡ ಅಂತಾ ತಮ್ಮ ತೇವಲಿಗೆ ಹೇಳುತ್ತಾರೆ. ಆದ್ರೆ ಅವರ ಹೇಳಿಕೆಯಿಂದ ನಾವು ಇಲ್ಲಿ ಅನುಭವಿಸುತ್ತೇವೆ. ನಮಗೆ ಮುಸ್ಲಿಂ ಸಮುದಾಯದ 30% ವೋಟ್ ಬರ್ತಾಯಿತ್ತು. ಆದ್ರೆ ಈಗ ಅದು ಕೂಡ ಬರ್ತಾಯಿಲ್ಲ ಅಂತಾ ಗುಡುಗಿದರು.