ಇಂಡಿಯಾ ಮೈತ್ರಿಕೂಟದ ಜಿಹಾದಿ ಮನಸ್ಥಿತಿ: ವೇದವ್ಯಾಸ್‌ ಕಾಮತ್‌

Published : Dec 01, 2023, 12:30 AM IST
ಇಂಡಿಯಾ ಮೈತ್ರಿಕೂಟದ ಜಿಹಾದಿ ಮನಸ್ಥಿತಿ: ವೇದವ್ಯಾಸ್‌ ಕಾಮತ್‌

ಸಾರಾಂಶ

ಬಿಹಾರ ರಾಜ್ಯದಲ್ಲಿ ಸಾರ್ವಜನಿಕ ರಜೆಗಳ ವಿಷಯದಲ್ಲಿ ಉಂಟಾಗಿರುವ ವಿವಾದ I.N.D.I.A ಮೈತ್ರಿ ಕೂಟದ ಜಿಹಾದಿ ಮನಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತಿದೆ: ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ 

ಮ೦ಗಳೂರು(ಡಿ.01): ದೇಶವನ್ನು ಒಗ್ಗೂಡಿಸುವ ಕೆಲಸ ಬಿಜೆಪಿ ಮಾಡಿದರೆ, ಕಾಂಗ್ರೆಸ್ ಎಂದಿನಂತೆ ತನ್ನ ಸ್ವಾರ್ಥಕ್ಕಾಗಿ ದೇಶವನ್ನು ಛಿದ್ರಗೊಳಿಸುವ ಕೆಲಸವನ್ನು ಮುಂದುವರಿಸಿದೆ. ಬಿಹಾರ ರಾಜ್ಯದಲ್ಲಿ ಸಾರ್ವಜನಿಕ ರಜೆಗಳ ವಿಷಯದಲ್ಲಿ ಉಂಟಾಗಿರುವ ವಿವಾದ I.N.D.I.A ಮೈತ್ರಿ ಕೂಟದ ಜಿಹಾದಿ ಮನಸ್ಥಿತಿಯನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದ್ದಾರೆ.

ಬಿಹಾರದ ಶಿಕ್ಷಣ ಇಲಾಖೆ ಹೊರಡಿಸಿರುವ 2024ರ ಸಾರ್ವಜನಿಕ ರಜೆಗಳ ಪಟ್ಟಿಯಲ್ಲಿ ಹಿಂದೂಗಳ ಶ್ರೀ ಕೃಷ್ಣಜನ್ಮಾಷ್ಟಮಿ, ರಕ್ಷಾ ಬಂಧನ, ರಾಮನವಮಿ, ಶಿವರಾತ್ರಿ, ವಸಂತ ಪಂಚಮಿ, ಜೀವಿತ ಪುತ್ರಿಕಾ, ಹಬ್ಬಗಳಿಗೆ ನೀಡಲಾಗುತ್ತಿದ್ದ ರಜೆಯನ್ನು ರದ್ದುಗೊಳಿಸಿ, ಇಸ್ಲಾಂ ಹಬ್ಬಗಳಿಗೆ ಹೆಚ್ಚುವರಿ ರಜೆ ಘೋಷಿಸಲಾಗಿದೆ. ಮುಂದುವರಿದು ಉರ್ದು ಶಾಲೆಗಳು ಸೇರಿದಂತೆ ಮುಸ್ಲಿಂ ಪ್ರಾಬಲ್ಯವಿರುವ ಯಾವುದೇ ಸರ್ಕಾರಿ ಶಾಲೆಗಳಿಗೆ ಭಾನುವಾರದ ಬದಲು ಶುಕ್ರವಾರದಂದು ವಾರದ ರಜೆ ಘೋಷಿಸಲಾಗಿದೆ. ಆ ಮೂಲಕ ಮುಸ್ಲಿಮರಿಗಾಗಿ ಸರ್ಕಾರಿ ವಾರದ ರಜೆಯನ್ನು ಬದಲಿಸಿದ ದೇಶದ ಮೊದಲ ರಾಜ್ಯ ಬಿಹಾರವಾಗಿದೆ ಎಂದು ತಿಳಿಸಿದ್ದಾರೆ. 

ಹಿಂದೂ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕೋದು ಕಾಂಗ್ರೆಸ್ ಸರ್ಕಾರದ ಷಡ್ಯಂತರ: ವೇದವ್ಯಾಸ್‌ ಕಾಮತ್

ತನ್ನ ಮೈತ್ರಿ ಕೂಟದ ಜೆಡಿಯು ಪಕ್ಷದ ಮೂಲಕ ಬಿಹಾರದಲ್ಲಿ ಅಂತಹದೇ ಸಮಸ್ಯೆಯನ್ನು ಸೃಷ್ಟಿಸಿ ಭವಿಷ್ಯದಲ್ಲಿ ದೇಶದೊಳಗೆ ಮತ್ತೆ ಅಶಾಂತಿ, ಅಭದ್ರತೆ ಉಂಟುಮಾಡುತ್ತಿದೆ ಎ೦ದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!