ಬಿಜೆಪಿಯಲ್ಲಿ ಯತ್ನಾಳ್‌ ಉಚ್ಚಾಟನೆಯ ಕೂಗು ಜೋರು..!

By Suvarna News  |  First Published Mar 16, 2021, 2:14 PM IST

ಒಂದೇ ಪಕ್ಷದ ನಾಯಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ಸಿಎಂ ಬಿಎಸ್ ಯಡಿಯೂಪ್ಪ ಅವರ ಆಪ್ತ ಶಾಸಕರೊಬ್ಬರು ಯತ್ನಾಳ್‌ಗೆ ಸವಾಲು ಹಾಕಿದ್ದಾರೆ.


ಬೆಂಗಳೂರು, (ಮಾ.16): ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ರನ್ನ ಮೊದಲು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಸಿಎಂ ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್​​ಗೆ ನಾನು ಸವಾಲ್ ಹಾಕ್ತೇನೆ. ನಾಟಕ ಮಾಡೋದು ಬಿಟ್ಟು, ನಿಮಗೆ ತಾಖತ್ ಇದ್ದರೆ ಸಿಎಂ ಕುಟುಂಬದ ಭ್ರಷ್ಟಾಚಾರದ ಆರೋಪ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

Tap to resize

Latest Videos

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ಸಿಎಂ ಹಾಗೂ ಅವರ ಕುಟುಂಬದ ವಿರುದ್ಧ ಆರೋಪ ಮಾಡಲು ನಿಮ್ಮ ಬಳಿ ಏನು ದಾಖಲೆ ಇವೆ. ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದೆ ಅನ್ನೋದೇ ನಿಮ್ಮ ಬಂಡವಾಳ. ಈ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ ​ಜೋಶಿ, ಸಚಿವರಾದ ಜಗದೀಶ್​ ಶೆಟ್ಟರ್ ವಿರುದ್ಧ ಮಾತಾಡಿದ್ರಿ. ಈಗ ಸಿಎಂ ಯಡಿಯೂರಪ್ಪ ನಿಮಗೆ ಟಾರ್ಗೆಟ್ಟಾ? ಎಂದು ಪ್ರಶ್ನಿಸಿದರು.

ವಿಜಯೇಂದ್ರ ವಿರುದ್ಧ ಮಾತಾಡೋದು ಒಂದೇ ಯಡಿಯೂರಪ್ಪ ವಿರುದ್ಧ ಮಾತಾಡೋದು ಒಂದೇ. ವಿಜಯೇಂದ್ರ ಏನು ಭ್ರಷ್ಟಾಚಾರ ಮಾಡಿದ್ದಾರೆ? ವಿಜಯೇಂದ್ರ ಏನು ಹಸ್ತಕ್ಷೇಪ ಮಾಡಿದ್ದಾರೆ? ಇದನ್ನ ಪಕ್ಷ ಸಹಿಸಲ್ಲ, ಶಾಸಕಾಂಗ ಪಕ್ಷದ ಸಭೆ ಕರೆದು ಯತ್ನಾಳ್ ಉಚ್ಚಾಟನೆ ಮಾಡುವಂತೆ ಯಡಿಯೂರಪ್ಪಗೆ ಒತ್ತಾಯಿಸುವೆ. ಯತ್ನಾಳ್ ನಿಷ್ಠಾವಂತ ಕಾರ್ಯಕರ್ತ ಆಗಿದ್ದರೆ ಬೀದಿಲೀ ಮಾತಾಡ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. 

click me!