'ಸಿದ್ದರಾಮೋತ್ಸವ ಪೋಸ್ಟರ್‌ನಲ್ಲಿ ಬಿಜೆಪಿ ಶಾಸಕರ ಫೋಟೋ, ಸ್ಪಷ್ಟನೆ ಕೊಟ್ಟ ರಾಜುಗೌಡ

By Suvarna News  |  First Published Jul 31, 2022, 5:20 PM IST

ಸಿದ್ದರಾಮಯ್ಯನವರ 75ನೇ ಜನ್ಮದಿನದ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ರೆ, ಮತ್ತೊಂದೆಡೆ ಅವರ ಹಾಡುಗಳು, ಬ್ಯಾನರ್, ಪೋಸ್ಟರ್‌ಗಳು ರಾರಾಜಿಸುತ್ತಿವೆ.


ಯಾದಗಿರಿ, (ಜುಲೈ.31): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅವರ ಆಪ್ತರು ಹಾಗೂ ಅಭಿಮಾನಿಗಳು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದ್ದು, ರಾಜ್ಯದ ವಿವಿಧ ಭಾಗಗಳಿಂದ 5 ಲಕ್ಷಕ್ಕೂ ಅಧಿಕ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

Tap to resize

Latest Videos

undefined

ಸಿದ್ದರಾಮೋತ್ಸವಕ್ಕೆ ಜನ ಸೇರಿಸುವ ಹೊಣೆಹೊತ್ತುಕೊಂಡ ಬಿಜೆಪಿ ಹಿರಿಯ ನಾಯಕನ ಪುತ್ರ

ಇನ್ನು ಸಿದ್ದರಾಮೋತ್ಸವ ಪೋಸ್ಟರ್, ಬ್ಯಾನರ್ಸ್‌ಗಳು ರಾರಾಜಿಸುತ್ತಿವೆ. ಇನ್ನು ಕಾರುಗಳ ಮೇಲೂ ಸಹ ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಪೋಸ್ಟರ್‌ಗಳು ಮುಂಚುತ್ತಿವೆ. ಇನ್ನು ಸಿದ್ದರಾಮೋತ್ಸವಕ್ಕೆ ಕರ್ನಾಟಕ ಬಿಜೆಪಿ ವ್ಯಂಗ್ಯವಾಡುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯನವರ ಪೋಸ್ಟರ್‌ನಲ್ಲಿ ಬಿಜೆಪಿ ಶಾಸಕನ ಫೋಟೋ ಮಿಂಚುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಸಿದ್ದರಾಮಯ್ಯ ಪೋಸ್ಟರ್‌ನಲ್ಲಿ ಬಿಜೆಪಿ ಶಾಸಕ
ಹೌದು....ಶಕ್ತಿ ಪ್ರದರ್ಶನ ನಡೆಸಲು ಸಿದ್ಧರಾಮಯ್ಯನವರು ಮುಂದಾಗಿದ್ದು, ಆದರೆ ಮತ್ತೆ ಮುಖ್ಯಮಂತ್ರಿಯಾಗುವ ಅವರ ಕನಸು ಕನಸಾಗಿಯೇ ಉಳಿಯಲಿದೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದೆ. ಮತ್ತೊಂದೆಡೆ 'ಸಿದ್ದರಾಮೋತ್ಸವ' ಕ್ಕೆ ತೆರಳುತ್ತಿರುವ ವಾಹನಗಳ ಮೇಲೆ ಸಿದ್ದರಾಮಯ್ಯನವರ ಫೋಟೋದೊಂದಿಗೆ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ನಾಯಕ ಅವರ ಫೋಟೋ ಇರುವುದು ಅಚ್ಚರಿಗೆ ಕಾರಣವಾಗಿದೆ. 

ಇನ್ನೋವಾ ಕಾರೊಂದಕ್ಕೆ ಸಿದ್ದರಾಮೋತ್ಸವ ಸಿಕ್ಟರ್ ಲಗತ್ತಿಸಿದ್ದು, ಅದರಲ್ಲಿ ರಾಜುಗೌಡ ಫೋಟೋ ಸಹ ಇದೆ.  ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಸ್ಪಷ್ಟನೆ ಕೊಟ್ಟ ಶಾಸಕ ರಾಜುಗೌಡ
ಇದರ ಬೆನ್ನಲ್ಲೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿರುವ ರಾಜುಗೌಡ, ವಾಹನಗಳಿಗೆ ನನ್ನ ಭಾವಚಿತ್ರ ಅಂಟಿಸಬೇಡಿ. ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತದೆ. ಅಲ್ಲದೇ ನನಗೂ ಮುಜುಗರವಾಗುತ್ತಿದೆ. ಸ್ವಯಂ ಪ್ರೇರಿತರಾಗಿ ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಇದು ಪಕ್ಷದಿಂದ ನಡೆಯುತ್ತಿರುವ ಕಾರ್ಯಕ್ರಮ. ಹಾಗಾಗಿ ನನ್ನ ಫೋಟೋ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ ವಿಶ್ವನಾಥ್ ಪುತ್ರ
ಹೌದು.....ವಿಶ್ವನಾಥ್ ಅವರ ಪುತ್ರ ವಿಶ್ವನಾಥ್ ಪುತ್ರ ಅಮಿತ್, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಹೊತ್ತಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಹಾಗೂ ತಮ್ಮ ತಂದೆ ರಾಜಕೀಯ ಬದ್ಧ ವೈರಿಗಳು. ಆದರೂ ಸಹ ಇದೀಗ ಅಮಿತ್ ಸಿದ್ದರಾಮೋತ್ಸವಕ್ಕ ಕೈಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಕುರುಬ ಸಮುದಾಯದ ಪ್ರಮುಖ ಮುಖಂಡರು ಮೈಸೂರಿನಲ್ಲಿ ಸಿದ್ದರಾಮೋತ್ಸವದ ಪೂರ್ವಭಾವಿ ಸಭೆ ನಡೆಸಿದರು. ಈ ಸಭೆಯಲ್ಲಿ ವಿಶ್ವನಾಥ್ ಪುತ್ರ   ಅಮಿತ್ ಭಾಗಿಯಾಗಿದ್ದು, ಸಿದ್ದರಾಮೋತ್ಸವಕ್ಕೆ ಜನರನ್ನ ಸೇರಿಸುವ ಹೊಣೆ ಅಮಿತ್ ಹೊತ್ತಿಕೊಂಡಿದ್ದಾರೆ.

ನಾನು ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಕಾರಣ.ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಗೆಲ್ಲಿಸಿದ್ರು.
ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್ ಪಿ ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಅಂದಿನ ಋಉಣ ತೀರಿಸಿಲು ಮುಂದಾಗಿದ್ದಾರೆ.

click me!