ಜಮೀರ್ ಅಹ್ಮದ್‌ಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಿಎಂ ರಾಜಕೀಯ ಕಾರ್ಯದರ್ಶಿ...!

By Suvarna News  |  First Published Apr 21, 2020, 5:19 PM IST

ರಾಜ್ಯದಲ್ಲಿ ಯಾರು ದೇಶದ್ರೋಹಿಗಳಿದ್ದಾರೆ ಮುಲಾಜಿಲ್ಲದೇ ಗುಂಡು ಹೊಡೆಯಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಗುಡುಗಿದ್ದಾರೆ.


ದಾವಣಗೆರೆ, (ಏ.21):  ರಾಜ್ಯದಲ್ಲಿ ಯಾರು ದೇಶದ್ರೋಹಿಗಳಿದ್ದಾರೆ ಮುಲಾಜಿಲ್ಲದೇ ಗುಂಡು ಹೊಡೆಯಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಗುಡುಗಿದ್ದಾರೆ.

ಈ ಕುರಿತಂತೆ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಗೂಂಢಾ ಕಾಯ್ದೆಯಡಿ ಜಮೀರ್ ಬಂಧಿಸಬೇಕು. ಜಮೀರ್ ಅಹ್ಮದ್ ಮತಾಂಧ, ದೇಶದ್ರೋಹಿ. ದೇಶದ್ರೋಹಿಗಳನ್ನು ಗುಂಡು ಹೊಡೆದು ಸಾಯಿಸಬೇಕು ಗುಡುಗಿದರು.

Tap to resize

Latest Videos

ನಾನು ತಪ್ಪು ಮಾಡಿದ್ರೆ ನೇಣಿಗೇರಿಸಲಿ: ಮತ್ತೆ ಅಬ್ಬರಿಸಿದ ರೇಣುಕಾಚಾರ್ಯ

ದೇಶದ್ರೋಹಿಗಳನ್ನು ಗುಂಡುಹೊಡೆದು ಸಾಯಿಸಬೇಕು ಎಂಬುದಾಗಿ ಮಾಜಿ ಶಾಸಕ ಜಮೀರ್ ಅಹ್ಮದ್ ವಿರುದ್ಧ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ್ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ.

ಇನ್ಮುಂದೆ ಗುಂಡಿನ ಸದ್ದು ಮಾತ್ರ ಕೇಳಬೇಕು. ಜಮೀರ್ ಅಹ್ಮದ್ ಅರೆ ಹುಚ್ಚ. ಸರ್ಕಾರ ಏನ್ ಮಾವನ ಮನೇನಾ..? ಪಾಕಿಸ್ತಾನನಾ.? ಜಮೀರ್ ಪ್ರಚೋದನೆಯಿಂದಲೇ ಪಾದರಾಯನಪುರದಲ್ಲಿ ಗಲಾಟೆ ನಡೆದಿದೆ. ಜಮೀರ್ ಇದೇ ನಡವಳಿಕೆ ಮುಂದುವರೆಸಿದ್ರೇ ಬೇರೆ ರೀತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

click me!