ಬಿಜೆಪಿ ಚಿಂತನ ಮಂಥನ ಸಭೆ ನಡೆಯುತ್ತಿದೆ. ಇದರ ಮಧ್ಯೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸ್ವಪಕ್ಷದ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ : ವರದರಾಜ್
ದಾವಣಗೆರೆ, (ಜುಲೈ.17): ಸಚಿವ ಕಾರ್ಯ ವೈಖರಿ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿ ಚಿಂತನ ಮಂಥನ ಸಭೆ ಮಾಡಿದೆ. ಈ ಸಭೆಯಲ್ಲಿ ಸರ್ಕಾರ ಹಾಗೂ ಪಕ್ಷದ ನಡುವಿನ ಸಮನ್ವಯದ ಬಗ್ಗೆ ಚರ್ಚೆಗಳು ನಡೆದಿವೆ.
ಅಲ್ಲದೇ ಸಚಿವರ ಕಾರ್ಯ ವೈಖರಿ ಅವರ ನಡವಳಿಕೆಗಳ ಬಗ್ಗೆ ಬಿಜೆಪಿ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಮಧ್ಯೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸ್ವಪಕ್ಷದ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
undefined
ಇಂದು(ಭಾನುಆರ) ಹೊನ್ನಾಳಿಯಲ್ಲಿ ಮಾತನಾಡಿದ ಶಾಸಕ ರೇಣುಕಾಚಾರ್ಯ, ವಿಧಾನ ಸೌಧದ ಮೂರನೇ ಮಹಡಿಗೆ ಕೆಲವು ಸಚಿವರು ಸೀಮಿತರಾಗಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡದೇ ಕೆಲವರು ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಕುರ್ಚಿಗೆ ಅಂಟಿಕೊಂಡ ಸಚಿವರಿಗೆ ಅರ್ ಎಸ್ ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಯವರು ಹೇಳಿರುವುದರಲ್ಲಿ ತಪ್ಪೇನಿದೆ. ಅವರಿಗೆ ಮಾರ್ಗದರ್ಶನ ಮಾಡಬಹುದಲ್ಲ ಎಂದರು.
ಬೆಂಗಳೂರಿನ ಇಬ್ಬರು ಸಚಿವರಿಗೆ ಗದರಿದ ಬಿಎಲ್ ಸಂತೋಷ್; ಫುಲ್ ಕ್ಲಾಸ್
ಹಿಜಾಬ್ ವಿಚಾರದಲ್ಲಿ ಕೆಲವು ಸಚಿವರು ಬಾಯಿಬಿಡಲಿಲ್ಲ. Adjustment ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕೆಲವರು ಜೆಡಿಎಸ್ ಜೊತೆಗೆ ಕೆಲವರು ಕಾಂಗ್ರೆಸ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಇದನ್ನು ನಮ್ಮ ಪಕ್ಷ ಸರ್ಕಾರ ಒಪ್ಪೊಲ್ಲ. ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಬಿಜೆಪಿಯಲ್ಲಿ ನಡೋಯಲ್ಲ. ಬಿಜೆಪಿಯಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ. ಅವರಿಗೆ ನೋವುಂಟು ಮಾಡಿದಾಗೆ ಅಲ್ವಾ ಎಂದು ಕಿಡಿಕಾರಿದರು.
ಕೆಲವರು ವಿಧಾನಸೌಧ ಮೂರನೇ ಮಹಡಿಗೆ ಸೀಮಿತವಾಗಿ ಪಕ್ಷಕ್ಕೆ ಸರ್ಕಾರಕ್ಕೆ ಮುಜುಗರವಾಗುವ ಕೆಲಸ ಮಾಡಿದ್ದಾರೆ. ಹಾಗಾಗಿ ಹಿರಿಯರು ಬುದ್ದಿವಾದ ಹೇಳಿದ್ದಾರೆ. ಕೆಲವರು ಅಗ್ರೆಸ್ಸಿವ್ ಆಗಿ ಕೆಲಸ ಮಾಡಬೇಕು. ಕೆಲವರು ಕುರ್ಚಿಗೆ ಅಂಟಿಕೊಂಡಿದ್ದಾರೆ ನಾನು ಹಿಂದೆ ಹೇಳಿದ್ದೆ. ಕೆಲವು ಸೀನಿಯರ್ ಮಿನಿಸ್ಟರ್ ತ್ಯಾಗ ಮಾಡಬೇಕಿತ್ತು. ಆದ್ರೆ ಕೆಲವರಿಗೆ ಕುರ್ಚಿನೇ ಮುಖ್ಯ. ನಮಗೆ ಎಲ್ಲಾ ಅರ್ಹತೆ ಇದೆ. ಸಚಿವ ಸ್ಥಾನಕ್ಕೆ ಸಮರ್ಥನಿದ್ದೇನೆ. ನಾನು ಸಚಿವನಾದಾಗ ಒಳ್ಳೆ ಕೆಲಸ ಮಾಡಿದ್ದೇನೆ.ಇಲಾಖೆ ಒಳ ಹೊರಗುಗಳನ್ನು ಅರಿತು ಸಚಿವರು ಕೆಲಸ ಮಾಡಬೇಕು ಎಂದರು.
ನಮ್ಮಲ್ಲಿ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ನಡೆಯೋಲ್ಲ. ಯಡಿಯೂರಪ್ಪನಂತ ಹಿರಿಯರೇ ಪಕ್ಷದ ತೀರ್ಮಾನಕ್ಕೆ ಕುರ್ಚಿ ಬಿಟ್ಟು ತ್ಯಾಗ ಮಾಡಿದ್ದಾರೆ. ಸೀನಿಯರ್ ಆದವರು ಅರ್ಥಮಾಡಿಕೊಳ್ಳಬೇಕು ಎಂದ ರೇಣುಕಾಚಾರ್ಯ ಟಾಂಗ್ ನೀಡಿದರು.
ಕಾಂಗ್ರೆಸ್ ವಿರುದ್ದ ರೇಣುಕಾಚಾರ್ಯ ವಾಗ್ದಾಳಿ
ಕಾಂಗ್ರೆಸ್ ನವರು ಯಾವ ಉತ್ಸವ ಮಾಡುತ್ತಾರೋ ಗೊತ್ತಿಲ್ಲ ಕಾಂಗ್ರೆಸ್ ಗೆ ದೇಶದಲ್ಲಿ ರಾಜ್ಯದಲ್ಲಿ ಅಡ್ರಸ್ ಇಲ್ಲ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆಶಿ ನಡುವೆ ಸಂಘರ್ಷ ಇದೆ.ಇನ್ನೊಂದು ಕಡೆ ಮಲ್ಲಿಕಾರ್ಜುನ್ ಖರ್ಗೆ ನಾನು ಮುಖ್ಯಮಂತ್ರಿ ಆಗಬೇಕೆಂದು ಹೈಕಮಾಂಡ್ ಮೇಲೆ ಒತ್ತಡಹಾಕುತ್ತಿದ್ದಾರೆ. ಅದಕ್ಕಾಗಿ ಜೆಡಿಎಸ್ ಜೊತೆ ಮೈತ್ರಿಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಸಂಘರ್ಷ ಇದೆ ನಮ್ಮಲ್ಲಿ ಸಾಮರಸ್ಯ ಇದೆ. ಬೊಮ್ಮಾಯಿಯವರ ಉತ್ಸವ ನಾವು ಮಾಡುತ್ತಿಲ್ಲ. 28ಕ್ಕೆ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿ ಒಂದು ವರ್ಷ ಬೊಮ್ಮಾಯಿ ಹಾಗು ಯಡಿಯೂರಪ್ಪ ಸಿಎಂ ಆಗಿದ್ದಾಗ ಆದಂತಹ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ.ಬಿಜೆಪಿಯಲ್ಲಿ ವ್ಯಕ್ತಿಪೂಜೆ ಮಾಡುವುದಿಲ್ಲ ಬೊಮ್ಮಾಯಿ ವರ ನನ್ನ ಉತ್ಸವ ಮಾಡಿ ಅಂತ ಹೇಳಿಲ್ಲ ಸಾಧನೆಗಳ ಸಮಾವೇಶ ಮಾಡುವುದರಲ್ಲಿ ತಪ್ಪೇನಿದೆ ಮುಳುಗಿದ ಹಡಗಿಗೆ ನಾವಿಕನೇ ಇಲ್ಲದಂತಹ ಸ್ಥಿತಿ ಕಾಂಗ್ರೆಸ್ ಗಿದೆ ಇನ್ನು 25 ವರ್ಷ ಬಿಜೆಪಿ ಆಳ್ವಿಕೆ ರಾಜ್ಯದಲ್ಲಿರುತ್ತೇ ನಾವು ಬಿಜೆಪಿ ಅಧಿಕಾರಕ್ಕೆ ತಂದೆ ತರುತ್ತೇವೆ ಎಂದು ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.