ರಾಜ್ಯ ಸರ್ಕಾರದ ವಿರುದ್ಧಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ/ ನಾವು ಶಾಸಕರೆಲ್ಲ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ/ ಹೇಳಿಕೊಳ್ಳೋಕೂ ಆಗಲ್ಲ - ಬಿಡೋದಕ್ಕೂ ಆಗಲ್ಲ/ ಅಂತಹ ಪರಿಸ್ಥಿತಿ ನಮ್ಮದಾಗಿದೆ ಒಂದು ಮಾತನಾಡಿದರೆ ದೊಡ್ಡದಾಗುತ್ತದೆ..
ಬೆಂಗಳೂರು(ಜ. 05) ರಾಜ್ಯ ಸರ್ಕಾರದ ವಿರುದ್ಧ ಒಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಿದ್ದರೆ ಈಗ ಮತ್ತೊಬ್ಬ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ತೋಡಿಕೊಂಡಿದ್ದಾರೆ. ನಾವು ಶಾಸಕರೆಲ್ಲ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಹೇಳಿಕೊಳ್ಳೋಕೂ ಆಗಲ್ಲ.. ಬಿಡೋದಕ್ಕೂ ಆಗಲ್ಲ. ಅಂತಹ ಸ್ಥಿತಿ ನಮ್ಮದಾಗಿದೆ ಎಂದಿದ್ದಾರೆ.
ಸಿಎಂ ಸಭೆಯಲ್ಲೇ ಯತ್ನಾಳ್ ಗರಂ.. ಮುಲಾಮು ಹಚ್ಚುವವರು ಯಾರು?
ಒಂದು ಮಾತನಾಡಿದರೆ ದೊಡ್ಡದಾಗುತ್ತದೆ. ಒಂದು ಮಾತು ಬಿಟ್ರೆ ಸಣ್ಣದಾಗುತ್ತೆ. ನಾವು ಏನೇ ಮಾತನಾಡಿದರೂ ಕಷ್ಟ. ನಮಗೂ ಅನೇಕ ಸಮಸ್ಯೆಗಳಿವೆ. ಕ್ಷೇತ್ರಕ್ಕೆ ಹೋದರೆ ಕೆಲಸ ಆಗ್ತಿಲ್ಲ ಅಂತ ಜನ ಬೈತಾರೆ. ಮಂತ್ರಿಗಳಿಗೇ ಹೇಳಿಕೊಳ್ಳೋಕೆ ಅವರೇ ಸಿಗ್ತಿಲ್ಲ ಎಂದು ಗೂಳಿಹಟ್ಟಿ ಹೇಳಿಕೊಂಡಿದ್ದಾರೆ.
ನಾವು ಮಾತನಾಡಿದರೆ ಬೇರೆ ಬೇರೆ ಬಣ್ಣ ಕಟ್ತಾರೆ. ಸಂದಿಗ್ಧ ಪರಿಸ್ಥಿಯಲ್ಲಿ ನಾವಿದ್ದೇವೆ. ನಾವು ಏನೇ ಮಾತನಾಡಿದರೂ ತಪ್ಪಾಗುತ್ತದೆ. ಅದಕ್ಕೆ ಜಿಲ್ಲಾವಾರು ಸಭೆಯನ್ನ ಕರೆದಿದ್ದಾರೆ. ಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ತೇವೆ.
ನಾನು 2008 ರಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯೇ. ಸಿಎಂ,ವರಿಷ್ಠರು ಇದರ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಸಂಪುಟ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು..ಬಡವ ನೀ ಮಡಗ್ದಂಗೆ ಇರು ಅಂತ ಸುಮ್ಮನಿದ್ದೇವೆ ಎಂದು ನೋವು ಹೇಳಿಕೊಂಡರು.