ಯಡಿಯೂರಪ್ಪ ವಿರುದ್ಧ ಮತ್ತೆ ಸಿಡಿದೆದ್ದ ಬಸನಗೌಡ ಪಾಟೀಲ್ ಯತ್ನಾಳ್..!

By Suvarna News  |  First Published Nov 9, 2020, 4:44 PM IST

ಕೊರೋನಾ ವೈರಸ್‌ ನೆಪದಲ್ಲಿ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದಕ್ಕೆ ಸರ್ಕಾರ ಬ್ರೇಕ್ ಹಾಕಿರುವುದಕ್ಕೆ ಸ್ವತ ಪಕ್ಷದ ನಾಯಕ ಆಕ್ರೋಶ ಹೊರಹಾಕಿದ್ದಾರೆ.


ವಿಜಯಪುರ, (ನ.09): ರಾಜ್ಯದಲ್ಲಿ ಕೋವಿಡ್ ನಿಗ್ರಹಕ್ಕಾಗಿ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಮುಂದಾಗಿದೆ. ಇದಕ್ಕೆ ವಿಜಯಪುರ ಬಿಜೆಪಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಹಿಂದೂಗಳಿಗೆ ದೀಪಾವಳಿ, ದಸರಾ, ಗಣೇಶ ಹಬ್ಬಗಳಂದು ಸಾಮೂಹಿಕವಾಗಿ ಸೇರುತ್ತಾರೆ. ಆಗೆಲ್ಲ ಶಬ್ಧ ರಹಿತ ದೀಪಾವಳಿ, ಪರಿಸರ ಸ್ನೇಹಿ ಗಣೇಶೋತ್ಸವ ಎಂದೆಲ್ಲ ಬೋಧನೆ ಮಾಡಲಾಗುತ್ತದೆ. ಇದೇ ರೀತಿ ರಕ್ತರಹಿತ ಬಕ್ರೀದ್, ನಿಶಬ್ಧ ಶುಕ್ರವಾರ, ಪಟಾಕಿ ಇಲ್ಲದ ಡಿಸೆಂಬರ್ 31 ರಾತ್ರಿ ಜಾರಿಗೆ ಬರಲಿ. ಧ್ವನಿವರ್ಧಕ ಬಳಸಿ ಕೂಗುವ, ರಸ್ತೆಯಲ್ಲಿ ನಮಾಜು ಮಾಡುವುದು ಬೇಡ ಎಂದಿದ್ದಾರೆ.

Latest Videos

undefined

ದೀಪಾವಳಿ ಹಬ್ಬ ಹೇಗೆ ಆಚರಣೆ ಮಾಡ್ಬೇಕು? ಸರ್ಕಾರದಿಂದ ಗೈಡ್ ಲೈನ್ಸ್

ನಾವು ಮನೆಯಲ್ಲೇ ದೀಪ ಹಚ್ಚುತ್ತೇವೆ. ಅವರು ಸ್ಪೀಕರ್ ಇಲ್ಲದೆ ನಮಾಜು ಮಾಡಲಿ, ರಸ್ತೆ ಮೇಲೆ ಬೇಡ ಎಂದೆಲ್ಲಾ ಸಲಹೆ ನೀಡುವ ಮೂಲಕ ದೀಪಾವಳಿ ಪಟಾಕಿ ನಿಷೇಧಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

Posted by B R Patil Yatnal on Sunday, November 8, 2020
click me!