ಚಾಲೆಂಜ್ ಮಾಡಿದಂತೆ ಕರ್ನಾಟಕ ಬಂದ್ ವಿಫಲಗೊಳಿಸಲು ಯತ್ನಾಳ್ ಮಾಸ್ಟರ್ ಪ್ಲಾನ್...!

Published : Dec 02, 2020, 08:57 PM IST
ಚಾಲೆಂಜ್ ಮಾಡಿದಂತೆ ಕರ್ನಾಟಕ ಬಂದ್ ವಿಫಲಗೊಳಿಸಲು ಯತ್ನಾಳ್ ಮಾಸ್ಟರ್ ಪ್ಲಾನ್...!

ಸಾರಾಂಶ

ಕನ್ನಡ ಪರ ಸಂಘಟನೆಗಳಿಗೆ ಸವಾಲು ಹಾಕಿದಂತೆ ಬಸನಗೌಡ ಪಾಟೀಲ್ ಯತ್ನಾಳ್ ವಿಜಯಪುರದಲ್ಲಿ ಬಂದ್ ವಿಫಲಗೊಳಿಸಲು ಈಗಿನಿಂದಲೇ ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ.

ವಿಜಯಪುರ, (ಡಿ.02): ಮರಾಠ ಪ್ರಾಧಿಕಾರ ರಚನೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇದೇ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ.

ಇನ್ನು ವಿಜಯಪುರದಲ್ಲಿ ದು ಹೇಗೆ ಬಂದ್ ಮಾಡ್ತರೋ ನಾನು ನೋಡುತ್ತೇನೆ. ತಾಕತ್ ಇದ್ರೆ ವಿಜಯಪುರನವನ್ನ ಬಂದ್ ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ತೊಡೆ ತಟ್ಟಿ ನಿಂತ ಮುಖ್ಯಮಂತ್ರಿ ಚಂದ್ರು..!

ಆ ಸವಾಲಿನಂತೆ ಬಂದ್ ವಿಫಲಗೊಳಿಸಲು ಯತ್ನಾಳ್ ಏನೆಲ್ಲಾ ಮಾಡಬೇಕೆಂದು ಇಂದು (ಬುಧವಾರ) ಪೂರ್ವಭಾವಿ ಸಭೆ ನಡೆಸಿದರು. ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಫ. ಗು. ಹಳಕಟ್ಟಿ ಭವನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸಭೆ ನಡೆಯಿತು.

 ಮರಾಠಾ ಸಮುದಾಯ, ಹಿಂದೂ ಸಂಘಟನೆ, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಮುಖಂಡರ ಜೊತೆಗೆ ಯತ್ನಾಳ್ ಸಭೆ ನಡೆಸಿದ್ದು, ಡಿಸೆಂಬರ್ 5ರಂದು ಬಂದ್ ವಿಫಲಗೊಳಿಸುವ ಬಗ್ಗೆ ಚರ್ಚೆ ಮಾಡಿದರು. ಅಲ್ಲದೇ ಬಂದ್ ವಿರೋಧಿ ಏನೆಲ್ಲಾ ಮಾಡಬೇಕೆಂದು ಮಾತುಕತೆ ನಡೆಸಿದರು.

ಮತ್ತೊಂದೆಡೆ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ವಿಜಯಪುರದಲ್ಲಿ ಬಂದ್ ಯಶಸ್ವಿಗೊಳಿಸಲು ಪ್ಲಾನ್ ಮಾಡಿವೆ. ಈ ಹಿನ್ನೆಲೆಯಲ್ಲಿ ಡಿ.5ರಂದು ಕರ್ನಾಟಕ ಬಂದ್ ಬದಲಾಗಿ ವಿಜಯಪುರ ಜಿಲ್ಲೆ ಬಂದ್ ಆಗುತ್ತಾ ಇಲ್ಲ ಎನ್ನುವುದು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ