ನಾಟಕ ಮಾಡಿದ್ದಿದ್ರೆ ನಾನು ಸಿಎಂ, ಚರಂತಿಮಠ ಮಂತ್ರಿ ಆಗಿರ್ತಿದ್ವಿ: ಯತ್ನಾ​ಳ

By Girish GoudarFirst Published May 18, 2022, 9:50 AM IST
Highlights

*   ರಾಜ​ಕಾ​ರ​ಣ​ದಲ್ಲಿ ಪ್ರಾಮಾ​ಣಿ​ಕ​ರಿಗೆ ಬೆಲೆ ಇಲ್ಲ
*  ರಾಜಕಾರಣದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ, ಭ್ರಷ್ಟರಿಗೆ ಬೆಲೆ ಇದೆ. ಇವರಿಂದ ರಾಜ್ಯವೇ ನಾಶವಾಗುತ್ತದೆ
*  ನಾವು ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡುವ ಮೂಲಕ ಯಾವುದೇ ಸ್ಥಾನಮಾನ ಸಿಗದಂತಾಗಿದೆ 

ಬಾಗಲಕೋಟೆ(ಮೇ.18): ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಜಿಲ್ಲೆಯ ಬೇವೂರ ಗ್ರಾಮದಲ್ಲಿ ನಡೆದ ದುಗ್ಗಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ಕಳ್ಳರಿಗೆ, ದರೋಡೆಕೋರರಿಗೆ, ಭ್ರಷ್ಟರಿಗೆ ಬೆಲೆ ಇದೆ. ಇವರಿಂದ ರಾಜ್ಯವೇ ನಾಶವಾಗುತ್ತದೆ ಎಂದ ಅವರು, ನಾವು ಪ್ರಾಮಾಣಿಕವಾಗಿ, ನೇರವಾಗಿ ಮಾತನಾಡುವ ಮೂಲಕ ಯಾವುದೇ ಸ್ಥಾನಮಾನ ಸಿಗದಂತಾಗಿದೆ. ಚರಂತಿಮಠರು ಮತ್ತೆ ನಾವು ನಾಟಕ ಮಾಡಿ ರಾಜಕಾರಣ ಮಾಡಿದ್ದರೇ ನಾನು ಮುಖ್ಯಮಂತ್ರಿಯಾಗುತ್ತಿದ್ದೆ. ಚರಂತಿಮಠರು ಮಂತ್ರಿಯಾಗುತ್ತಿದ್ದರು ಎಂದು ತಿಳಿಸಿದರು.

ಶಾಸಕ ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ: ಸಚಿವ ವಿ.ಸೋಮಣ್ಣ

ಕೆಲವು ರಾಜಕಾರಣಿಗಳಿಗೆ ಅಪ್ಪಾಜಿ ಎಂದು ಹೇಳಿಕೊಳ್ಳುತ್ತಾ ಮಂತ್ರಿ ಸ್ಥಾನ ಪಡೆಯುತ್ತಾರೆ. ನಾನು ಯಾರಿಗೂ ಅಪ್ಪಾಜಿ ಅಂತಾ ಅನ್ನಲ್ಲ. ತುಮಕೂರಿನ ಶ್ರೀಗಳಿಗೆ, ಸಿದ್ದೇಶ್ವರ ಶ್ರೀಗಳಿಗೆ ಮಾತ್ರ ಅಪ್ಪಾಜಿ ಎಂದು ಹೇಳುತ್ತೇವೆ ಎಂದರು.
ನಾನು ಎಲ್ಲ ಸಮಾಜಕ್ಕೂ ನ್ಯಾಯ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದಿಲ್ಲ. ವಿಧಾನಸಭೆ ಒಳಗೆ ಹಾಗೂ ಹೊರಗೆ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು. ಬಾಗಲಕೋಟೆ ಶಾಸಕ ಚರಂತಿಮಠರು ದಕ್ಷ ಹಾಗೂ ಪ್ರಾಮಾಣಿಕರು ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅವರನ್ನು ಈ ಕ್ಷೇತ್ರ ಕಳೆದುಕೊಳ್ಳಬೇಡಿ ಎಂದರು.
 

click me!