ಶಾಸಕ ಸತೀಶ ಜಾರಕಿಹೊಳಿ ಕ್ಷೇತ್ರ ಬಿಹಾರ ರಾಜ್ಯದಂತೆ ಆಗಿದೆ. ನೀನು ಹ್ಯಾಂಗೆ ಗೋಕಾಕಗೆ ಬರುತ್ತಿಯಾ ಎಂದು ಹೇಳುವ ಮೂಲಕ ನನಗೆ ಸವಾಲು ಹಾಕಿದ್ದಕ್ಕೆ ಗೋಕಾಕಗೆ ತೆರಳಿದ್ದೆ ಎಂದ ಯತ್ನಾಳ
ವಿಜಯಪುರ(ನ.17): ಶಾಸಕ ಸತೀಶ ಜಾರಕಿಹೊಳಿಗೆ ಅಂತ್ಯ ಕಾಲ ಸನ್ನಿಹಿತವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ. ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶಾಸಕ ಸತೀಶ ಜಾರಕಿಹೊಳಿಗೆ ಅಂತ್ಯಕಾಲ ಬಂದಿದೆ. ಅದಕ್ಕಾಗಿಯೇ ಅವರು ಈ ರೀತಿ ಇತರರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ನನಗೆ ಗೋಕಾಕಗೆ ಬರಲು ಶಾಸಕ ಸತೀಶ ಜಾರಕಿಹೊಳಿ ಆಹ್ವಾನ ನೀಡಿದ್ದರು. ಆದ್ದರಿಂದ ನಾನು ಗೋಕಾಕಗೆ ಹೋಗಿದ್ದೆ. ಆ ಮತಕ್ಷೇತ್ರಕ್ಕೆ ಹೋಗಲು ಯಾರಿಗೂ ಧಮ್ ಇಲ್ಲ ಎನ್ನುವ ರೀತಿಯಾಗಿತ್ತು. ಗೋಕಾಕನಲ್ಲಿ ಸತೀಶ ಜಾರಕಿಹೊಳಿ ಸಾಮ್ರಾಜ್ಯ ಆಗಿತ್ತು ಎಂದರು.
ಶಾಸಕ ಸತೀಶ ಜಾರಕಿಹೊಳಿ ಕ್ಷೇತ್ರ ಬಿಹಾರ ರಾಜ್ಯದಂತೆ ಆಗಿದೆ. ನೀನು ಹ್ಯಾಂಗೆ ಗೋಕಾಕಗೆ ಬರುತ್ತಿಯಾ ಎಂದು ಹೇಳುವ ಮೂಲಕ ನನಗೆ ಸವಾಲು ಹಾಕಿದ್ದಕ್ಕೆ ಗೋಕಾಕಗೆ ತೆರಳಿದ್ದೆ ಎಂದರು.
undefined
ಡಿ.12 ರೊಳಗಾಗಿ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲೇಬೇಕು: ಯತ್ನಾಳ
ಶಾಸಕ ಶಿವಾನಂದ ವಿರುದ್ಧ ವಾಗ್ದಾಳಿ:
ಇದೇ ಸಂದರ್ಭದಲ್ಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರ ವಿರುದ್ಧವೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಾಗ್ದಾಳಿ ನಡೆಸಿ, ಸಾಮರ್ಥ್ಯ ಇದ್ದರೆ ವಿಜಯಪುರ ನಗರ ಮತಕ್ಷೇತ್ರದಿಂದ ನಿಲ್ಲುವಂತೆ ಹೇಳಿದ್ದೇನೆ. ಶಾಸಕ ಶಿವಾನಂದ ಪಾಟೀಲ ಅವರ ಮುಸ್ಲಿಂ ಅಭಿಮಾನ ಎಲ್ಲಿ ಹೋಗಿದೆ? ಮುಸ್ಲಿಮರನ್ನು ಶಾಸಕರನ್ನಾಗಿ ಮಾಡುತ್ತೇನೆ ಎಂದಿದ್ದರು. ಈಗ ಅವರೇ ಟಿಕೆಟ್ ಕೇಳಿದ್ದಾರೆ. ಇದನ್ನು ಅವರೇ ಹೇಳಬೇಕು ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತಕ್ಷೇತ್ರ ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ಶ್ರೀ ಪಾದವೇ ಗತಿ ಎಂದು ಕೋಲಾರಕ್ಕೆ ಹೋಗಿದ್ದಾರೆ ಎಂದು ಹೇಳಿದರು.
ಬೇಡ ಜಂಗಮ ಮೀಸಲಾತಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬೇಡ ಜಂಗಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬುವುದರ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದರು.