'ಇದು ಮೋದಿ ಚುನಾವಣೆ, ಯಡಿಯೂರಪ್ಪ ಅವರದ್ದಲ್ಲ..' ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಹರಿಹಾಯ್ದ ಯತ್ನಾಳ್‌!

By Santosh NaikFirst Published Mar 11, 2024, 9:37 PM IST
Highlights

ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ. ಇದು ಮೋದಿ ಚುನಾವಣೆ ಯಡಿಯೂರಪ್ಪ ಅವರದಲ್ಲ ಎಂದು ಟೀಕೆ ಮಾಡಿದ್ದಾರೆ.

ಯಾದಗಿರಿ (ಮಾ.11): ಬಿಜೆಪಿ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಮತ್ತೆ ಹರಿಹಾಯ್ದಿದ್ದಾರೆ. ಯಾದಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ್‌ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದರು. ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ವಿಚಾರದಲ್ಲಿ ಮಾತನಾಡಿದ ಯತ್ನಾಳ್‌, 'ಪೂಜ್ಯ ತಂದೆ ಮಕ್ಕಳು ಎಲ್ಲರನ್ನ ಮುಗಿಸಬೇಕು ಅಂತಾ ಇದನ್ನೆಲ್ಲಾ ಮಾಡುತ್ತಿದ್ದಾರೆ. ನನಗೆ ಬಾಗಲಕೋಟ, ಕೊಪ್ಪಳ, ಬೆಳಗಾವಿಗೆ ಲೋಕಸಭೆಗೆ ನಿಲ್ಲಿ ಎಂದು ಆಯ್ಕೆ ಕೊಟ್ಟಿದ್ದರು. ನನಗೆ ಕೇಂದ್ರ ಮಂತ್ರಿ ಮಾಡ್ತಿನಿ ಎಂದರೂ ನಾನು ನಿಲ್ಲೋದಿಲ್ಲ ಎಂದಿದ್ದೇನೆ. ನಾನು ದಿಲ್ಲಿಗೆ ಹೋದರೆ ಇಲ್ಲಿ ಅಪ್ಪ ಮಗನ ರಾಜ್ಯ ನಡೆಯುತ್ತೆ ಅಂತ ಅಂದುಕೊಂಡಿದ್ದಾರೆ. ಕೇಂದ್ರದಲ್ಲಿ ದೊಡ್ಡ ಮಗನಿಗೆ ಮಂತ್ರಿ ಮಾಡೋದು, ಇಲ್ಲಿ ಸಣ್ಣ ಮಗನಿಗೆ ಸಿಎಂ ಮಾಡಬೇಕು ಅನ್ನೋದು ಗುರಿ. ಹಾಗಾದ್ರೆ ನಾವೇನು ಇಲ್ಲಿ ಕಿತ್ತುಕೊಳ್ತಾಯಿದ್ದಿವಾ? ಎಂದು ಪ್ರಶ್ನೆ ಮಾಡಿದ್ದಾರೆ. ಯಾರು ಏನೇ ಪಿತೂರಿ ಮಾಡಿದರೂ ನಾವು ಕಿತ್ತೂರ್ ರಾಣಿ ಚೆನ್ನಮ್ಮ ವಂಶಸ್ಥರು. ನಾವು ಯಾರಿಗೂ ಅಂಜೋದಿಲ್ಲ. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ . ಲೋಕಸಭೆ ಚುನಾವಣೆ ಬಳಿಕ ನಮ್ಮ ಪಕ್ಷದ ಹೊಂದಾಣಿಕೆ ಲೀಡರ್ ಗಳ ಅಂತ್ಯ ಆಗುತ್ತೆ ಎಂದು ಯತ್ನಾಳ್‌ ಹೇಳಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ವಿಜಯೆಂದ್ರ ವಿರುದ್ಧ ವಾಗ್ದಾಳಿ ಮುಂದುವರಿಸಿ ಯತ್ನಾಳ್‌, ಕರ್ನಾಟಕದಲ್ಲಿ ವಿಜಯೇಂದ್ರ ನೋಡಿ ವೋಟು ಹಾಕಲ್ಲ. ಹಾಕಿದ್ರೆ, ಯಡಿಯೂರಪ್ಪ ಒಬ್ಬನ ನೋಡಿ ವೋಟು ಹಾಕಬಹುದು. ನರೇಂದ್ರ ಮೋದಿ ಚುನಾವಣೆ ಇದೆ ವಿಜಯೇಂದ್ರ ತೆಗೆದುಕೊಂಡು ಏನ್‌ ಮಾಡೋದು. ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಇರಲಿ ಸುಡಗಾಡು ಇರಲಿ. ರಾಜ್ಯದಲ್ಲಿ 28 ಸ್ಥಾನ ಗೆದ್ದೆ ಗೆಲ್ಲುತ್ತೆ ಇದ್ದಕ್ಕೆ ವಿಜಯೇಂದ್ರ ಸಂಬಂಧಪಡೋದೇ ಇಲ್ಲ. ಇದು ಮೋದಿ ಚುನಾವಣೆ ಯಡಿಯೂರಪ್ಪ ಚುನಾವಣೆ ಅಲ್ಲ. ಯಡಿಯೂರಪ್ಪ ಹೆಸರಲ್ಲಿ ಯಾವಾಗ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ. ಯಡಿಯೂರಪ್ಪ ಅವರದ್ದು ಅಷ್ಟು ವೇಟ್ ಇದ್ದಿದ್ದರೆ 130 ಸ್ಥಾನ ಬರಬೇಕಿತ್ತು ಎಂದು ಯತ್ನಾಳ್‌ ಹೇಳಿದ್ದಾರೆ.

ಶಾಮನೂರು ಮೂಲಕ 50 ಕೋಟಿಗೆ ಕಾಂಗ್ರೆಸ್ ಶಾಸಕರ ಖರೀದಿ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾವ ಸರ್ಕಾರನೂ ಬಿಳಿಸೋಲ್ಲ. ಅವರಿಗೆ ಅತೃಪ್ತಿ ಆದಲ್ಲಿ  ಅವರಾಗಿಯೇ ಬರುತ್ತಾರೆ. ಶಾಮನೂರ್‌ ಸಂಬಂಧವಿಲ್ಲ ಸತೀಶ್ ಜಾರಕಿಹೊಳಿ ಸಂಬಂಧವಿಲ್ಲ. ಕಾಂಗ್ರೆಸ್ ನ ಶಾಸಕರು ಸಂಪೂರ್ಣವಾಗಿ ಹತಾಶರಾಗಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಡಿಕೆಶಿ ದುರಹಂಕಾರ ನೋಡಿದ್ರಲ್ಲ,  ಏಕವಚನದಲ್ಲಿ ಮಾತಾಡೋ ಸ್ಟೈಲ್ ನೋಡಿದ್ದೀರಲ್ಲ. ಡಿಕೆಶಿ ದುರಹಂಕಾರ,  ಅಹಂಕಾರದಿಂದ ಕಾಂಗ್ರೆಸ್ ನಾಶವಾಗುತ್ತೆ. ಲೋಕಸಭಾ ಚುನಾವಣೆ ಬಳಿಕ ಏನ್‌ ಆಗುತ್ತೆ ಅಂತಾ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಏನ್ ಆಗುತ್ತೆ ಬಿಜೆಪಿಯಲ್ಲಿ ಏನ್ ಆಗುತ್ತೆ ಗೊತ್ತಿಲ್ಲ. ಲೋಕಸಭೆಯಲ್ಲಿ ಬಿಜೆಪಿ 400 ಸ್ಥಾನ ಬರುತ್ತೆ ಕಾಂಗ್ರೆಸ್ ನೆಲಕಚ್ಚಿ ಹೋಗುತ್ತೆ. ಆಗ ದೇಶದಲ್ಲಿ ಏನ್ ಬೇಕಾದರೂ ಬದಲಾವಣೆ ಆಗಬಹುದು ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರ ಪತನ: ಯತ್ನಾಳ

ಕರ್ನಾಟಕದಲ್ಲೂ ಬದಲಾವಣೆ ಆಗುತ್ತೆ. ಕರ್ನಾಟಕದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆ ಹುಟ್ಟಿದ್ದಾರೆ. ಅವರಿಗೆ ಈಗಾಗಲೇ ತೊಟ್ಟಿಲಿಗೆ ಹಾಕಿ‌ ನಾಮಕರಣ ಮಾಡಿದ್ದೇವೆ. ಅಷ್ಟರಲ್ಲೇ ಅವರು ಪ್ರೌಢಾವಸ್ಥೆಗೆ ಬರುತ್ತಾರೆ ಎಂದು ಹೇಳಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಪಾಕಿಸ್ತಾನ್, ಐಸಿಸ್‌ಗೂ‌ ಲಿಂಕ್‌ ಇದೆ: ಬಸನಗೌಡ ಪಾಟೀಲ್ ಯತ್ನಾಳ್‌

click me!