ಕೊಪ್ಪಳ: ಕಿವಿಗೆ ಹೂ ಇಟ್ಕೊಂಡು ನಗರಸಭೆ ಬಿಜೆಪಿ ಸದಸ್ಯನ ವಿನೂತನ ಪ್ರತಿಭಟನೆ

By Girish Goudar  |  First Published Feb 28, 2023, 1:54 PM IST

ಏನು ಅಭಿವೃದ್ಧಿ ಮಾಡದೇ ನಮ್ಮ ಕಿವಿಯಲ್ಲಿ ಹೂ ಇಡುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ. ಎರಡೂ ಕಿವಿಯಲ್ಲಿ ಹೂ ಇಟ್ಟು ಕೊಂಡು ಸಭೆಯ ಮಧ್ಯದಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. 


ಕೊಪ್ಪಳ(ಫೆ.28): ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ವಿಧಾನಸೌಧದಲ್ಲಿ ಬಜೆಟ್ ಮಂಡನೆ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದು ಆಡಳಿತ ಪಕ್ಷವನ್ನು ಕಿಚಾಯಿಸಿದ್ದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಇಂದು(ಮಂಗಳವಾರ) ನಗರದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯನೋರ್ವ ಕಿವಿಯಲ್ಲಿ ಹೂ ಇಟ್ಟುಕೊಂಡು ಬಂದು ಅಚ್ಚರಿ ಮೂಡಿಸಿದ್ದಾರೆ. 

ಹೌದು, ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ್ ಸಹ ಕೈ ಪಡೆಯವರಾಗಿದ್ದಾರೆ. ಹೀಗಾಗಿ ಬಿಜೆಪಿ ಸದಸ್ಯರಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಎಂಬುದೇ ಇಲ್ಲ. ಏನಾಗಿದೆ ಅಭಿವೃದ್ಧಿ?, ಇನ್ನೇನು ವಿಧಾನಸಭಾ ಚುನಾವಣೆ ಬರುತ್ತದೆ. ಈ ಅವಧಿಯದ್ದು ನಗರಸಭೆದು ಕೊನೆ ಸಭೆ ಇದು. ಏನು ಅಭಿವೃದ್ಧಿ ಮಾಡದೇ ನಮ್ಮ ಕಿವಿಯಲ್ಲಿ ಹೂ ಇಡುವ ಕೆಲಸ ಮಾಡುತ್ತಿದ್ದೀರಿ ಎಂದು 16 ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ಕಿಡಿಕಾರಿದ್ದಾರೆ. ಇವರು ಎರಡೂ ಕಿವಿಯಲ್ಲಿ ಹೂ ಇಟ್ಟು ಕೊಂಡು ಸಭೆಯ ಮಧ್ಯದಲ್ಲಿ ಕುಳಿತು ಪ್ರತಿಭಟಿಸಿದ್ದಾರೆ. 

Tap to resize

Latest Videos

undefined

ಜನರ ಕಷ್ಟಜೆಡಿಎಸ್‌ನಿಂದ ಮಾತ್ರ ಪರಿಹಾರ

ಇದನ್ನು ನೋಡಿದ ಕೈ ಸದಸ್ಯರಾದ ಮಹೇಂದ್ರ ಚೋಫ್ರಾ, ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್ ಸೇರಿದಂತೆ ಅನೇಕರು ನಗಲಾರಂಭಿಸಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿಯ ಅನೇಕ ಸದಸ್ಯರು ಕೈ ಸದಸ್ಯರ ನಡೆ ಖಂಡನಿಯ ಎಂದರು.

ಬಿಜೆಪಿ ಸದಸ್ಯೆ ವಿದ್ಯಾ ಹೆಸರೂರು, ಇದು ನಾಚಿಕೇಡಿತನದ ಸಂಗತಿ. ಅನುದಾನ ತಾರತಮ್ಯ ಖಂಡಿಸಿ ನಮ್ಮ ಸದಸ್ಯರು ವಿನೂತನವಾಗಿ ಪ್ರತಿಭಟಿಸಿದರೇ ನಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.
 

click me!