
ಯಾದಗಿರಿ(ಜು.11): ಕೊರೋನಾ ಆತಂಕದ ಮಧ್ಯೆಯೂ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಸುರಪುರ ಶಾಸಕ, ಬಿಜೆಪಿಯ ನರಸಿಂಹನಾಯಕ್(ರಾಜೂಗೌಡ) ಅವರು ಆಡಳಿತಾರೂಢ ಕಾಂಗ್ರೆಸ್‌ಗೆ ‘ಮಾಸ್ಟರ್ ಸ್ಟ್ರೋಕ್’ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಶಾಸಕ ವೆಂಕಟಪ್ಪ ನಾಯಕ್ ಆಪ್ತರಾಗಿದ್ದ ಬಿಜೆಪಿ ಬೆಂಬಲಿತ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಬಸಣ್ಣಗೌಡ ಯಡಿಯಾಪುರ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಾಳಯಕ್ಕೆ ಬಹುದೊಡ್ಡ ಹೊಡೆತ ನೀಡಿದಂತಾಗಿದೆ.
ಅವಧಿ ಮುಕ್ತಾಯ: ಕರ್ನಾಟಕದ 16 MLCಗಳಿಗೆ ಬೈ ಬೈ....
ಒಟ್ಟು 24 ಸದಸ್ಯ ಬಲದ ಯಾದಗಿರಿ ಜಿಲ್ಲಾ ಪಂಚಾಯ್ತಿಯಲ್ಲಿ ಇಬ್ಬರು ಸದಸ್ಯರು ಅಕಾಲಿಕ ಮರಣಕ್ಕೀಡಾಗಿದ್ದಾರೆ. ಹೀಗಾಗಿ, 22 ಸದಸ್ಯರನ್ನೊಳಗೊಂಡ ಜಿಲ್ಲಾ ಪಂಚಾಯ್ತಿಯಲ್ಲಿ 11 ಸದಸ್ಯರು ಕಾಂಗ್ರೆಸ್‌ನವರಾದರೆ, 10 ಮಂದಿ ಬಿಜೆಪಿ ಹಾಗೂ ಒಬ್ಬರು ಜೆಡಿಎಸ್‌ನವರು. ಜಿಲ್ಲಾ ಪಂಚಾಯ್ತಿಯ ಕೊನೇ 8-9 ತಿಂಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ ಶರಣಮ್ಮ ಅವರನ್ನು ಕಣಕ್ಕಿಳಿಸಿದ್ದರೂ ಕೊನೇ ಕ್ಷಣದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬಸಣ್ಣಗೌಡ ಯಡಿಯಾಪೂರ ಬಿಜೆಪಿ ಹಾಗೂ ಶಹಾಪುರ ತಾಲೂಕಿನ ಗೋಗಿ(ಕೆ) ಕ್ಷೇತ್ರದ ಸದಸ್ಯ, ಕಾಂಗ್ರೆಸ್‌ನ ಕಿಶನ್ ರಾಠೋಡ್ ಬೆಂಬಲದೊಂದಿಗೆ ಜಯಗಳಿಸಿದ್ದಾರೆ. ಶರಣಮ್ಮ ಜೆಡಿಎಸ್‌ನ 1 ಮತ ಸೇರಿ 10 ಮತ ಪಡೆದರೆ, ಯಡಿಯಾಪೂರ 12 ಮತ ಗಳಿಸಿದರು.
ಕರ್ನಾಟಕ ಕಾಂಗ್ರೆಸ್‌ನ ಮತ್ತೋರ್ವ ಶಾಸಕನಿಗೆ ಕೊರೋನಾ ಅಟ್ಯಾಕ್..!
ಖರ್ಗೆ ಆಪ್ತ: ಕಾಂಗ್ರೆಸ್‌ನ ಹಿರಿಯ ಮುಖಂಡ ಯಡಿಯಾಪೂರ ಅವರು ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಶಾಸಕ ವೆಂಕಟಪ್ಪ ನಾಯಕ್ ಅವರ ಖಾಸಾ ಪಡೆಯಲ್ಲಿದ್ದವರು. ಜಿಲ್ಲಾ ಪಂಚಾಯ್ತಿ ಮೊದಲ ಅವಧಿಯಲ್ಲೇ ಯಡಿಯಾಪೂರ ಅಧ್ಯಕ್ಷರಾಗಬೇಕಿತ್ತು. ಆದರೆ ಸುರಪುರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ ಅನ್ನೋ ಮಾತುಗಳಿಂದಾಗಿ, ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.