ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಪ್ರಣಾಳಿಕೆ: ಸಚಿವ ಸುಧಾಕರ್‌

By Kannadaprabha NewsFirst Published Feb 13, 2023, 11:19 PM IST
Highlights

ದೇಶದ ಉತ್ತಮ ಕಾರ್ಯಕ್ರಮಗಳನ್ನು ಕ್ರೋಡೀಕರಿಸಿ, ನವ ಕರ್ನಾಟಕ, ಸಮೃದ್ಧಿಯ ಕರ್ನಾಟಕ ನಿರ್ಮಾಣ ಮಾಡಲು ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕರಾದ ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಚಿಕ್ಕಬಳ್ಳಾಪುರ (ಫೆ.13): ದೇಶದ ಉತ್ತಮ ಕಾರ್ಯಕ್ರಮಗಳನ್ನು ಕ್ರೋಡೀಕರಿಸಿ, ನವ ಕರ್ನಾಟಕ, ಸಮೃದ್ಧಿಯ ಕರ್ನಾಟಕ ನಿರ್ಮಾಣ ಮಾಡಲು ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕರಾದ ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿಯಲ್ಲಿ ಪಾಲ್ಗೊಳ್ಳುವ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ಪ್ರಣಾಳಿಕೆ ಬೇರೆ ಪಕ್ಷಗಳಂತೆ ದಿಕ್ಕು ತಪ್ಪಿಸುವ ರೀತಿಯಲ್ಲಿ ಇರುವುದಿಲ್ಲ. ನೈಜತೆ, ವಸ್ತು ಸ್ಥಿತಿ ಗಮನಿಸಿ, ಸೂಕ್ಷಮತೆಯಿಂದ ಜನರಿಂದ, ಜನರಿಗಾಗಿ ಯೋಜನೆಗಳಿರುತ್ತವೆ ಎಂದು ಹೇಳಿದರು.

ಮೋದಿ ಆಡಳಿತ ಕೈ ಗೆ ಅರ್ಥವಾಗಿಲ್ಲ: ಪ್ರಣಾಳಿಕೆಯಲ್ಲಿ ಹೇಳಿದ ಯೋಜನೆಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲಾಗುವುದು, ರಾಜ್ಯದ ಪ್ರತಿ ವರ್ಗದ ಜನರೊಂದಿಗೆ ಸಂವಾದ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ಪದೇ ಪದೇ ಪ್ರಧಾನಿ ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ಕಾಂಗ್ರೆಸ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬರುತ್ತಿರುವುದು ಏರೋ ಇಂಡಿಯಾ ಶೋ ಉದ್ಘಾಟನೆಗೆ, ಕಳೆದವಾರ ರಾಜ್ಯಕ್ಕೆ ಬಂದಿದ್ದು ಎಚ್‌ಎಎಲ್‌ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಚಾಲನೆಗೆ. ಪ್ರಧಾನಿ ಕರ್ತವ್ಯ ಮತ್ತು ಪ್ರಧಾನಿಗಳ ಕಾರ್ಯವೈಖರಿ, ಆಡಳಿತ ವೈಖರಿ ಕುರಿತು ಕಾಂಗ್ರೆಸ್‌ ನವರಿಗೆ ಕಳೆದ 10 ವರ್ಷದಲ್ಲಿ ಅರ್ಥ ಆಗಿಲ್ಲ. ಮುಂದಿನ ಐದು ವರ್ಷದಲ್ಲಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಚಿವ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದರು.

Latest Videos

ಸಿದ್ದರಾಮಯ್ಯ ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

ಸಾಮಾಜಿಕ ನ್ಯಾಯಕ್ಕೆ ಹೋರಾಡಿದ ದಾಸ ಶ್ರೇಷ್ಠ ಕನಕರು: ಸಾಧಕರಲ್ಲಿ ಸಾಧಕರು ಕನಕದಾಸರು. ಜಾತೀಯತೆ ಬಗ್ಗೆ ವಿಷ ಬೀಜವನ್ನು ಬಿತ್ತುವ ಸಂದರ್ಭದಲ್ಲಿಯೆ ಜಾತ್ಯತೀತ ತತ್ವ ಸಿದ್ಧಾತಕಕ್ಕೆ ಒತ್ತು ನೀಡಿ ಸಾಮಾಜಿಕ ನ್ಯಾಯಕ್ಕೆ ಹೋರಾಡಿದವರು ಕನಕದಾಸರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಮಂಚೇನಹಳ್ಳಿಯಲ್ಲಿ ಆಯೋಜಿಸಿದ್ದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿ, ಕುರುಬ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಉತ್ತಮ ಅವಕಾಶ ಒದಗಿಸುವ ಕೆಲಸ ರಾಜ್ಯ ಬಿಜೆಪಿ ಸರ್ಕಾರ ಮಾಡಲಿದೆ ಎಂದು

ಬಾಡಾ ಗ್ರಾಮಕ್ಕೆ ಹೊಗಿಬರಲು ವ್ಯವಸ್ಥೆ: ಕನಕದಾಸರ ದರ್ಶನಕ್ಕೆ ಅವಕಾಶ ನೀಡದ ಸಂದರ್ಭದಲ್ಲಿ ಅವರ ಭಕ್ತಿಗೆ ಮೆಚ್ಚಿ ಶ್ರೀಕೃಷ್ಣನೇ ತಿರುಗಿದ ಉದಾಹರಣೆ ಇದೆ. ಅವರ ತತ್ವ ಒಪ್ಪಿದವರೆಲ್ಲರೂ ಹಾಲು ಮತಸ್ಥರಾಗಲು ಸಾಧ್ಯ. ರಾಜ್ಯ ಸರ್ಕಾರ ಹಾವೇರಿ ಜಿಲ್ಲೆಯ ಬಾಡಾ ಗ್ರಾಮದ ಕನಕದಾಸರ ಅರಮನೆಯ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಅಲ್ಲಿಗೆ ಹೋಗಿ ಬರಲು ಇಚ್ಚಿಸಿದರೆ ವ್ಯವಸ್ಥೆ ಮಾಡಿಕೊಡುವ ಭರವಸೆಯನ್ನು ಸಚಿವರು ನೀಡಿದರು. ಕನಕದಾಸರು ಯುದ್ಧ, ಸಾವು ನೋವುಗಳನ್ನು ಕಂಡು ವೈರಾಗ್ಯಕ್ಕೆ ಮರಳುತ್ತಾರೆ. ದೇವರಲ್ಲಿ ನಂಬಿಕೆ ಬಂದು ಅಂತಿಮವಾದ ಸಾಕ್ಷಾತ್ಕಾರ ಹೊಂದಿದ ಅವರು ಸಾಧಕರಲ್ಲಿ ಸಾಧಕರಾಗಿ ಪ್ರಖ್ಯಾತಿ ಪಡೆದಿದ್ದಾರೆ. ಭಕ್ತ ಕನಕದಾಸರು ಸಮಾಜಕ್ಕೆ ಬೃಹತ್‌ ಸಂದೇಶ ನೀಡಿದ್ದಾರೆ, ದಾಸ ಸಾಹಿತ್ಯದಲ್ಲಿ ಕನಕದಾಸರು ಅಗ್ರಮಾನ್ಯರಾಗಿದ್ದು, ಆತ್ಮ ಯಾವ ಕುಲ, ಜೀವ ಯಾವ ಕುಲ ಎಂದು ಹೇಳಿ ಧೀಮಂತರು ಎಂದು ಬಣ್ಣಿಸಿದರು.

ಸಿಂದಗಿಯ ಧನಲಕ್ಷ್ಮೀ ಜ್ಯುವೆಲರಿ ಬಳಿ ಗುಂಡಿನ ದಾಳಿ: ಮೂವರು ಸ್ಥಳದಿಂದ ಪರಾರಿ

ಸಂಪುಟದಲ್ಲಿ ಇಬ್ಬರು ಸಚಿವರು: ಸರ್‌ ಎಂ. ವಿಶ್ವೇಶ್ವರಯ್ಯನವರಿಂದ ಅಂಬೇಡ್ಕರ್‌ ವರೆಗೂ ಶಿಕ್ಷಣದಿಂದಲೇ ವಿಶ್ವಕ್ಕೆ ಪರಿಚಯರಾಗಿದ್ದಾರೆ. ಸಮುದಾಯದ ಉದ್ಧಾರಕ್ಕೆ ಶಿಕ್ಷಣವೊಂದೇ ಮೂಲವಾಗಿದ್ದು, ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಈ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಿನ ಸಂಪುಟದಲ್ಲಿ ಈ ಸಮುದಾಯದ ಇಬ್ಬರು ಸಚಿವರಿದ್ದು, ಈ ಹಿಂದೆ ನಾಲ್ಕು ಮಂದಿ ಸಚಿವರಿದ್ದರು. ಒಂದೇ ಸಮಯದಲ್ಲಿ ಆ ಸಮುದಾಯದ ನಾಲ್ಕು ಸಚಿವರು ಎಂದೂ ಆಗಿರಲಿಲ್ಲ ಎಂಬುದನ್ನು ಗಮನಿಸಬೇಕು ಎಂದರು.

click me!