ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು?

By Web DeskFirst Published Nov 22, 2018, 1:35 PM IST
Highlights

ದೇಶದ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಈ ವೇಳೆ ನಡೆಸಿದ ಅಂದಾಜಿನ ಪ್ರಕಾರವಾಗಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಲಾಗಿದೆ. 

ಮುಂಬೈ : ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ.  ವಿವಿಧ ಪಕ್ಷಗಳು ಗೆಲುವಿಗಾಗಿ ವಿವಿಧ ರೀತಿಯಲ್ಲಿ ತಯಾರಿಯಲ್ಲಿ ತೊಡಗಿಕೊಂಡು ಅಧಿಕಾರಕ್ಕೆ ಏರುವ ತವಕದಲ್ಲಿವೆ. 

ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್ ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಕಷ್ಟ ಸಾಧ್ಯವಾಗಿದೆ ಎಂದು ಈಕ್ವಿಟಿ ಮಾರ್ಕೆಟ್ ಪಾರ್ಟಿಸಿಪಂಟ್ ಮೂಲಕ ನಡೆಸಿದ ಅಂದಾಜಿನ ಪ್ರಕಾರ ಈ ಭವಿಷ್ಯ ನುಡಿಯಲಾಗಿದೆ. 

ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್ ಗಢದಲ್ಲಿ ಕಾಂಗ್ರೆಸ್ ಅತ್ಯಂತ ಹೆಚ್ಚಿನ ಫೈಟ್ ನೀಡಲಿದ್ದು, ಬಿಜೆಪಿಗೆ ಗೆಲುವು ಕಷ್ಟ ಸಾಧ್ಯವಾಗಬಹುದು ಎಂದು ಹೇಳಲಾಗಿದೆ. 

ಇನ್ನು ಮಧ್ಯ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ ಎಂದು ಸತ್ತಾ ಮಾರ್ಕೆಟ್ ಅಂದಾಜಿನ ಪ್ರಕಾರ ಊಹೆ ಮಾಡಲಾಗಿದೆ. 

ಇನ್ನು ರಾಜಸ್ಥಾನದಲ್ಲಿ ಬಿಜೆಪಿ ಸೋಲುವುದು ಖಚಿತವಾಗಿದ್ದು, ಮಧ್ಯ ಪ್ರದೇಶ ಹಾಗೂ ಚತ್ತೀಸ್ ಗಢದಲ್ಲಿ ಅರ್ಧದಷ್ಟು ಫೈಟ್ ನೀಡುವ ಸಾಧ್ಯತೆಗಳೂ ಇದೆ ಎಂದು ಅಂದಾಜು ಮಾಡಲಾಗಿದೆ. 

ಐದು ರಾಜ್ಯಗಳಲ್ಲಿ ಡಿಸೆಂಬರ್ 7ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದ್ದು ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ.

click me!