Latest Videos

ಮುಂದಿನ 10 ವರ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರದಲ್ಲಿರುತ್ತೆ: ಚರಂತಿಮಠ

By Girish GoudarFirst Published Jun 8, 2024, 4:34 PM IST
Highlights

ಸುಭದ್ರವಾದ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕೊಡುತ್ತಾರೆ. ದೇಶದಲ್ಲಿ ಗೆದ್ದಿರುವ ಹತ್ತು ಜನ ಪಕ್ಷೇತರರು ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಸಿದ್ದಾರೆ. ಹೀಗಾಗಿ ಎನ್‌ಡಿಎ ಸಂಖ್ಯಾಬಲ 303ಕ್ಕೆ ಏರಿದೆ. ಸರ್ಕಾರ ಸುಭದ್ರವಾಗಿದೆ: ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ 

ಬಾಗಲಕೋಟೆ(ಜೂ.08): ಮುಂದಿನ ಹತ್ತು ವರ್ಷಗಳ ಕಾಲವೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರುತ್ತೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದ್ದಾರೆ.

ಇಂದು(ಶನಿವಾರ) ನಗರದಲ್ಲಿ ಮಾತನಾಡಿದ ಡಾ.ವೀರಣ್ಣ ಚರಂತಿಮಠ ಅವರು, ಸುಭದ್ರವಾದ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಕೊಡುತ್ತಾರೆ. ದೇಶದಲ್ಲಿ ಗೆದ್ದಿರುವ ಹತ್ತು ಜನ ಪಕ್ಷೇತರರು ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಸಿದ್ದಾರೆ. ಹೀಗಾಗಿ ಎನ್‌ಡಿಎ ಸಂಖ್ಯಾಬಲ 303ಕ್ಕೆ ಏರಿದೆ. ಸರ್ಕಾರ ಸುಭದ್ರವಾಗಿದೆ ಎಂದು ತಿಳಿಸಿದ್ದಾರೆ. 

ಪೆನ್‌ಡ್ರೈವ್‌ ಕೇಸನ್ನು ಗೃಹಸಚಿವರು ಲಘುವಾಗಿ ಪರಿಗಣಿಸಿದ್ದಾರೆ: ಈಶ್ವರಪ್ಪ

ಪ್ರಧಾನಿ ಮೋದಿಯವರು ಬರುವ ಹತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡ್ತಾರೆ. ಇನ್ನು ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಐದನೇ ಬಾರಿಗೆ ಗೆದ್ದಿದೆ. ಪಿ.ಸಿ.ಗದ್ದಿಗೌಡರ ಅವರನ್ನು ಮತದಾರರು ಐದನೇ ಬಾರಿಗೆ ಗೆಲ್ಲಿಸಿದ್ದಾರೆ. ಬಾಗಲಕೋಟೆ ಮತಕ್ಷೇತ್ರ ಸೇರಿ ಎಲ್ಲ ಕಡೆ ಬಿಜೆಪಿಗೆ ಲೀಡ್ ನೀಡಿದ್ದಾರೆ. ಪಕ್ಕದ ಗದಗ ಜಿಲ್ಲೆ ನರಗುಂದದಲ್ಲಿ ಮಾತ್ರ ಕಾಂಗ್ರೆಸ್‌ಗೆ 900 ಮತಗಳ ಲೀಡ್ ಬಂದಿದೆ. ಬಿಜೆಪಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. 

click me!