Karnataka Politics: ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋ​ಧ

By Kannadaprabha News  |  First Published Mar 21, 2022, 8:11 AM IST

ಮುಂಬರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆ​ಯುವ ಚುನಾ​ವ​ಣೆ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾಗಿ ಟಿಕೆಟ್‌ ಪಡೆಯಲಿದ್ದಾರೆ ಎಂಬ ಗುಸುಗುಸು ಸುದ್ದಿ ನಡುವೆಯೇ ಬಿಜೆಪಿಗರು ಎಂದು ಹೇಳಿಕೊಂಡ ಕೆಲವರು ಇದ​ಕ್ಕೆ ಆಕ್ಷೇಪ ಎತ್ತಿ​ದ್ದಾರೆ. 


ಹುಬ್ಬಳ್ಳಿ (ಮಾ.21): ಮುಂಬರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆ​ಯುವ ಚುನಾ​ವ​ಣೆ ವೇಳೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಬಿಜೆಪಿಗೆ (BJP) ಸೇರ್ಪಡೆಯಾಗಿ ಟಿಕೆಟ್‌ ಪಡೆಯಲಿದ್ದಾರೆ ಎಂಬ ಗುಸುಗುಸು ಸುದ್ದಿ ನಡುವೆಯೇ ಬಿಜೆಪಿಗರು ಎಂದು ಹೇಳಿಕೊಂಡ ಕೆಲವರು ಇದ​ಕ್ಕೆ ಆಕ್ಷೇಪ ಎತ್ತಿ​ದ್ದಾರೆ. ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರಿಗೆ ಹತ್ತು ಅಂಶಗಳಿಂದ ಕೂಡಿದ ಪತ್ರ ಬರೆದು, ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಿವೃತ್ತ ಪ್ರಾಚಾರ್ಯ ಜಿ.ಎಸ್‌. ಪಲ್ಲೇದ ಎಂಬುವವರು ಬರೆದಿರುವ ಈ ಪತ್ರಕ್ಕೆ ಆರೇಳು ಜನ ಸಹಿ ಮಾಡಿದ್ದಾರೆ. ಪತ್ರ​ದಲ್ಲಿ, ಬಸವರಾಜ ಹೊರಟ್ಟಿಗೆ ಈಗ 76 ವರ್ಷ. ಪಕ್ಷದ ನಿಯಮದಂತೆ ಅವರಿಗೆ ಟಿಕೆಟ್‌ ನೀಡಲು ಅವಕಾಶವಿಲ್ಲ ಎನ್ನುವುದನ್ನು ನೆನಪಿಸಿದ್ದಾರೆ. ಏಕಕಾಲಕ್ಕೆ 2 ವೇತನ ಪಡೆದ ಬಗ್ಗೆ ಆರೋಪ ಮಾಡಿರುವ ಅವರು, 1980ರಲ್ಲಿ ಪರಿಷತ್‌ ಸದಸ್ಯರಾಗಿದ್ದರೂ 1999ರ ವರೆಗೆ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹೊರಟ್ಟಿವೇತನ ಪಡೆದಿರುವ ದಾಖಲೆಯನ್ನೂ ರವಾನಿಸಿದ್ದಾರೆ.

Tap to resize

Latest Videos

ಸಭಾಪತಿ ವಿರುದ್ಧವೇ  FIR, ಹೊರಟ್ಟಿ ಪರ ನಿಂತ ಕಾಂಗ್ರೆಸ್‌-JDS ಸದಸ್ಯರು!

ಏಕಕಾಲಕ್ಕೆ 2 ವೇತನ ಪಡೆದ ಬಗ್ಗೆ ಆರೋಪ ಮಾಡಿರುವ ಅವರು, 1980ರಲ್ಲಿ ಪರಿಷತ್‌ ಸದಸ್ಯರಾಗಿದ್ದರೂ 1999ರ ವರೆಗೆ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಹೊರಟ್ಟಿವೇತನ ಪಡೆದಿರುವ ದಾಖಲೆ ಮತ್ತು ಇತ್ತೀಚೆಗೆ ಧಾರವಾಡದ ಶಾಲೆ ಗದ್ದಲದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲೆಯಾಗಿರುವ ಪ್ರತಿಗಳನ್ನು ಪತ್ರದ ಜತೆ ಕಳುಹಿಸಿದ್ದಾರೆ. ಜತೆಗೆ, ಬಿಜೆಪಿ ತತ್ವ, ಸಿದ್ಧಾಂತ ಒಪ್ಪದೆ, ಹಿಂದುತ್ವದ ವಿರುದ್ಧದ ಚಳವಳಿಯಲ್ಲಿ ಕಾಂಗ್ರೆಸ್‌ ಜತೆ ಹೊರಟ್ಟಿಗುರುತಿಸಿಕೊಂಡಿದ್ದರು ಎಂದೂ ಆರೋ​ಪಿ​ಸಿದ್ದಾರೆ.

ಇದೇ ವೇಳೆ, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಕ್ಷೇತ್ರದಲ್ಲಿ 17 ಶಾಸಕರು, 3 ಸಂಸದರು, 4 ಪರಿಷತ್‌ ಸದಸ್ಯರು, ಸಭಾಧ್ಯಕ್ಷರು, 3 ಕ್ಯಾಬಿನೆಟ್‌ ಸಚಿವರು, ಕೇಂದ್ರ ಸಚಿವರು, ಹಾಲಿ ಮತ್ತು ಮಾಜಿ ಸಿಎಂಗಳಿ​ದ್ದಾರೆ. ಆದ​ರೆ, ಜೆಡಿಎಸ್‌ನ ಒಬ್ಬನೇ ಒಬ್ಬ ಶಾಸಕರಿಲ್ಲ ಎಂದು ಪತ್ರ​ದಲ್ಲಿ ಉಲ್ಲೇಖಿಸಲಾಗಿದೆ. ಇದೇ ಪತ್ರದ ಪ್ರತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಇತರರಿ​ಗೂ ಕಳಿಸಿರುವುದಾಗಿ ಹೇಳಿದ್ದಾರೆ.

ಹೊರಟ್ಟಿಬಿಜೆಪಿಗೆ ಬರುವೆ ಎಂದು ಹೇಳಿಲ್ಲ: ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿಬಿಜೆಪಿ ಸೇರ್ಪಡೆ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಹೊರಟ್ಟಿವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರಿಗೆ ಬಿಜೆಪಿ ಮುಖಂಡರು ದೂರು ನೀಡಿದ್ದಾರೆ ಎಂಬ ವದಂತಿ ಹಬ್ಬಿದೆ. ಯಾರು? ಯಾಕೆ? ದೂರು ಕೊಟ್ಟಿದ್ದಾರೆ ಗೊತ್ತಿಲ್ಲ. ಹೊರಟ್ಟಿಅವರಂತೂ ಬಿಜೆಪಿಗೆ ಬರುತ್ತೇನೆ ಎಂದು ಹೇಳಿಲ್ಲ. ‘ಹಾಲು ಇಲ್ಲ, ಬಟ್ಟಲೂ ಇಲ್ಲ, ಗುಟಕ್‌ ಅಂದ್ರಂತೆ’ ಹಾಗೆ ನಡೆದಿದೆ ಇದು ಎಂದು ಹೇಳಿ ಸಚಿವ ಜೋಶಿ ನಕ್ಕರು.

Karnataka Assembly Session: ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಸಭಾಪತಿಯಾಗಿ ಯಾಕಿದ್ದೀನೋ ಅನಿಸ್ತಿದೆ: ಶಾಸನ ಸಭೆಗಳಲ್ಲಿ ಸಮಾಜವಾದಿ ಚಿಂತನೆಗಳಿಗೆ ಸ್ಥಳವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಅಷ್ಟೇ ಅಲ್ಲ ಇಂದಿನ ಜನತೆಗೂ ಅಂತಹ ಅಂಶಗಳು ಅಗತ್ಯವಿಲ್ಲವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ವಿಷಾದಿಸಿದರು. ಅಲ್ಲದೆ, ಅಂದಿನಂತೆ ಈಗ ಗಹನ ಚರ್ಚೆ ನಡೆಯದ ವಿಧಾನ ಪರಿಷತ್‌ನಲ್ಲಿ ಸಭಾಪತಿಯಾಗಿ ಯಾಕೆ ಕುಳಿತು ಕೊಂಡಿದ್ದೇನೊ ಎಂಬ ರೀತಿಯಲ್ಲಿ ಮನಸ್ಸಿಗೆ ಬೇಸರ ಆಗುತ್ತಿದೆ ಎಂದೂ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ ‘ಕನ್ನಡ ಜನಶಕ್ತಿ ಕೇಂದ್ರ’ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಾಜಕಾರಣಿ, ಮಾಜಿ ಸಚಿವ ಚಿತ್ರದುರ್ಗದ ಎಚ್‌. ಏಕಾಂತಯ್ಯ ಅವರಿಗೆ 2021ನೇ ಸಾಲಿನ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು. ಈ ಹಿಂದೆ ಮೌಲ್ಯಧಾರಿತ ರಾಜಕಾರಣಿಗಳು, ದುಡ್ಡು, ಜಾತಿಯ ಬಲವಿಲ್ಲದೆ ಗೆದ್ದು ಬರುತ್ತಿದ್ದರು. ಆದೆ ಪ್ರಸ್ತುತ ಜಾತಿ, ಹಣ ಬಲ ಇರುವವರು ಶಾಸನ ಸಭೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಇದರಿಂದ ಸಮಾಜವಾದಿ ಮತ್ತು ಮೌಲ್ಯಾಧಾರಿತ ಅಂಶಗಳಿಗೆ ಸ್ಥಳಾವಕಾಶ ಇಲ್ಲವಾಗಿದೆ ಎಂದರು.

click me!