ಬರ ಪರಿಹಾರದ ಬಹಿರಂಗ ಚರ್ಚೆಗೆ ಬರದೇ ಪಲಾಯನಗೈದ ಬಿಜೆಪಿ ನಾಯಕರು; ಕೃಷ್ಣ ಬೈರೇಗೌಡ ಟೀಕೆ

By Sathish Kumar KHFirst Published Apr 13, 2024, 6:25 PM IST
Highlights

ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಹಂಚಿಕೆಯಲ್ಲಿ ಬಿಜೆಪಿ ನಾಯಕರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿ ಸವಾಲು ಹಾಕಿದರೆ, ಯಾರೊಬ್ಬರೂ ಬರದೇ ಪಲಾಯನ ಮಾಡಿದ್ದಾರೆ.

ಬೆಂಗಳೂರು (ಏ.13): ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಮಾಡುವಂತೆ ವಿಳಂಬವಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದರು. ಈ ಬಗ್ಗೆ ದಾಖಲೆಗಳ ಸಮೇತ ಬಹಿರಂಗ ಚರ್ಚೆಗೆ ಬರಲು ನಾವು ಸಿದ್ಧರಿದ್ದೇವೆ, ನೀವು ಬನ್ನಿ ಎಂದು ಸವಾಲು ಹಾಕಿದೆವು. ಆದರೆ, ಬಿಜೆಪಿ ನಾಯಕರು ಬಹಿರಂಗ ಚರ್ಚೆಯ ಸವಾಲು ಸ್ವೀಕರಿಸದೇ ಪಲಾಯನ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವ್ಯಂಗ್ಯವಾಡಿದರು.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಪರಿಹಾರ ವಿಚಾರದಲ್ಲಿ ನಾವು ಬಿಜೆಪಿ ನಾಯಕರಿಗೆ ಸಾವಾಲು ಹಾಕಿದ್ದೆವು. ಆದರೆ, ಯಾರೊಬ್ಬರೂ ಬಹಿರಂಗ ‌ಚರ್ಚೆಗೆ ಬರಲೇ ಇಲ್ಲ. ಕೇಂದ್ರ ಗೃಹ ಸಚಿವರ ಟೇಬಲ್‌ ಮೇಲೆ ರಾಜ್ಯದಿಂದ ಬರ ಪರಿಹಾರಕ್ಕಾಗಿ ಬರೆದ ಪತ್ರ ಧೂಳು ಹಿಡಿದಿದೆ. ನವೆಂಬರ್ 20ರಿಂದ ಪರಿಹಾರ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಪರಿಹಾರ ಕೊಡಲು ಚುನಾವಣೆ ಘೋಷಣೆಗೂ ಮುಂಚಿತವಾಗಿ 4 ತಿಂಗಳು ಅವಕಾಶ ಇತ್ತು. ಮಾ.23ರಂದು ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದೇವೆ. ಇನ್ನು ಮಾ.28ರಂದು ಚುನಾವಣಾ ಆಯೋಗಕ್ಕೆ ನೀತಿ ಸಂಹಿತೆ ಅಡ್ಡಿಯಿಂದಾಗಿ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆಗೆ ಅನುಮತಿ ಕೊಡಿ ಎಂದು ಪತ್ರ ಕಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ತೆರಿಗೆ ವಿಚಾರದಲ್ಲಿ ಮಾತ್ರವಲ್ಲ, ನೀರಿನ ಸಮಸ್ಯೆಯಲ್ಲೂ ಅನ್ಯಾಯ ಮಾಡಿದೆ: ಸಚಿವ ಕೃಷ್ಣ ಬೈರೇಗೌಡ

ಕೇಂದ್ರದ ನಿಯಮಾವಳಿ ಪ್ರಕಾರ ಕೊಡಲಿಲ್ಲ. ವಿಪಕ್ಷ ನಾಯಕ ಮೊದಲೇ ಕೊಡಬೇಕಿತ್ತು ಅಂತಾರೆ. ರಾಜ್ಯದ ಪ್ರತಿಪಕ್ಷ ನಾಯಕರಿಗೆ ಕನಿಷ್ಠ ಮಾಹಿತಿಯಿಲ್ಲ. ಅಕ್ಟೋಬರ್ 20ರೊಳಗೆ ವರದಿ ಕೊಟ್ಟಿದೆ. ಸೆಂಟ್ರಲ್ ಟೀಂ ವರದಿಯನ್ನ ಸಲ್ಲಿಸಿದೆ. ಇದನ್ನ ಅರಿಯದೆ ಸುಳ್ಳು ಹೇಳ್ತಿದ್ದಾರೆ. ಸುಳ್ಳು ಹೇಳದಿದ್ದರೆ ಯಾಕೆ‌ ಕೈಮುಗಿದ್ರು? ಸುಪ್ರೀಂ ಮುಂದೆ ಬಂದು ಯಾಕೆ‌ ಕೈ ಮುಗಿದ್ರು? ನಾನು ಸರ್ಕಾರ ಹಾಗೂ ಜನರ ಪರವಾಗಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆಗಳನ್ನ ಕೇಳುತ್ತಿದ್ದೇನೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಮೇಕೆದಾಟು ಯೋಜನೆಗೆ ಅನುಮತಿ ಯಾಕೆ ಕೊಡ್ತಿಲ್ಲ. ತಮಿಳುನಾಡಿಗೆ 490 ಟಿಎಂಸಿ ಹೆಚ್ಚುವರಿಯಾಗಿ ಕಾವೇರಿ ನೀರು ಬಿಟ್ಟಿದ್ದೇವೆ. ಬರಗಾಲದಲ್ಲಿ ಬೆಂಗಳೂರು, ಮಂಡ್ಯ ಭಾಗಕ್ಕೆ ಮೇಕೆದಾಟು ಯೋಜನೆ ಸಹಾಯವಾಗಲಿದೆ. ಈ ಯೋಜನೆಯಿಂದ ತಮಿಳುನಾಡಿಗೂ ಸಹಾಯವಾಗುತ್ತದೆ. ಆದರೆ, ಇದುವರೆಗೂ ಈ ಯೋಜನೆಗೆ ಅನುಮತಿ ಕೊಡಲಿಲ್ಲ. ಮೇಕೆದಾಟು ಯೋಜನೆಗಾಗಿ ನಾವಷ್ಟೇ ಪತ್ರ ಬರೆದಿಲ್ಲ, ಬಿಜೆಪಿ ಸರ್ಕಾರದಲ್ಲೂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ವ್ಯಾಜ್ಯ ಅಂತಿಮಗೊಂಡಿದೆ , ಸುಪ್ರೀಂ ಕೋರ್ಟ್‌ ಸಹ ಮೇಕೆದಾಟು ಯೋಜನೆ ಅಡ್ಡಿ ಇಲ್ಲ ಎಂದಿದೆ. ಹೆಚ್ಚುವರಿ ನೀರಿನಲ್ಲಿ ಅವರು ಯಾವುದೇ ಯೋಜನೆ ಮಾಡಬಹುದು ಎಂದಿದೆ. ನಾವು 5 ವರ್ಷದಿಂದ ಕೇಳಿದರೂ, ನೀವು ಯಾಕೆ ಅನುಮತಿ ಕೊಡಲಿಲ್ಲ. ಇದು ನೀವು ಮಾಡ್ತೀರೋದು ಹಗೆತನವಾಗಿದೆ. ನಮಗೆ ವಂಚನೆ ಮಾಡ್ತಿರೋದಕ್ಕೆ, ಮೋದಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಪಿಎಂ, ಸಿಎಂ ಸ್ಥಾನ ಉಳಿಸಿಕೊಳ್ಳಲು ಅಪ್ಪ, ಮಗನಿಗೆ ಆಗಲಿಲ್ಲ: ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ

ಲೋಕಸಭಾ ಚುನಾವಣೆ ಅಂಗವಾಗಿ ಡಿಲಿಮಿಟೇಷನ್ ಮಾಡಲಾಗುತ್ತಿದೆ. ಆದರೆ, ಈ ಡಿಲಿಮೇಟೇಷನ್ ಮಾಡುವ ಮೂಲಕ ಕರ್ನಾಟಕ ಎಂಪಿ ಸೀಟು ಕಡಿಮೆ ಮಾಡಲು ಹುನ್ನಾರ ನಡೆಯುತ್ತಿದೆ. ದಕ್ಷಿಣ ಭಾರತದ ಪ್ರಾತಿನಿಧ್ಯವನ್ನ ಸಂಸತ್ತಿನಲ್ಲಿ ಕಡಿಮೆ ಮಾಡಿ ನಮ್ಮ ಧ್ವನಿಯನ್ನ ಕಡಿಮೆ ಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಇದು ಸುಳ್ಳಾದರೆ ಸ್ವತಃ ಮೋದಿ ಅವರೇ ದಕ್ಷಿಣ ಭಾರತದ ಸೀಟು ಕಡಿಮೆ ಮಾಡಲ್ಲ ಎಂದು ಸ್ಪಷ್ಟನೆ ಕೊಡಲಿ. ಈಗಾಗಲೇ ತಮಿಳುನಾಡು ಇದರ ವಿರುದ್ಧ ನಿಂತಿದ್ದೆ ಎಂದು ಮಾಹಿತಿ ನೀಡಿದರು.

click me!