ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹರಿಯಬ್ಬೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಮುಕ್ತಾಯವಾಗಿದೆ. ಆದರೆ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿಗೆ ಇರಿಸುಮುರಿಸು ಆಗಿದೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಜೂ.04): ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಹರಿಯಬ್ಬೆಯಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಮುಕ್ತಾಯವಾಗಿದೆ. ಆದರೆ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿಗೆ ಇರಿಸುಮುರಿಸು ಆಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮಕ್ಕೆ ಆಗಮಿಸುತ್ತಲೇ ಬಿಜೆಪಿ ಕಾರ್ಯಕರ್ತರ ಮುಖಂಡರ ದಂಡು ವೇದಿಕೆಗೆ ಆಗಮಿಸಿತು. ಆಗ ವಿವಿಐಪಿ ಗೇಟ್ ಮೂಲಕ ತಮ್ಮ ಸಹಚರರೊಡನೆ ಬಂದ ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿಯವರನ್ನು ಪೊಲೀಸರು ತಡೆದರು. ನಾನು ಬಿಜೆಪಿ ಮುಖಂಡ ಎಂದರೂ ಬಿಡದ ಪೊಲೀಸರೊಡನೆ ವಾಗ್ವಾದ ನಡೆದು ಪರಸ್ಪರ ಜಗ್ಗಾಟ ನಡೆಯಿತು.
undefined
ಪೊಲೀಸರೊಡನೆ ವಾಗ್ವಾದಕ್ಕಿಳಿದು ತಳ್ಳಾಟ ನೂಕಾಟ ಕಂಡು ಕೇಂದ್ರದ ಸಚಿವ ಎ ನಾರಾಯಣಸ್ವಾಮಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಬಿಜೆಪಿ ಮುಖಂಡರನ್ನು ಸಮಾಧಾನ ಪಡಿಸಲು ಯತ್ನಿಸಿದ ನಾರಾಯಣಸ್ವಾಮಿ ಯವರ ಮಾತು ಕೇಳದ ಬಿಜೆಪಿ ಮುಖಂಡರು ಕೂತುಕೊಳ್ಳದೇ ನಿಂತೇ ಇದ್ದರು. ವೇದಿಕೆ ಮುಂಭಾಗದ ಡಿ ಝೋನ್‌ನಲ್ಲಿ ಕೂರುವಂತಿಲ್ಲ ಎಂದು ಹೇಳಿದಾಗ ಮತ್ತೇ ಬಿಜಿಪಿ ಜಿಲ್ಲಾದ್ಯಕ್ಷ ಸೇರಿದಂತೆ ಇತರ ಮುಖಂಡರಿಗೆ ಮುಖಭಂಗವಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಕೇವಲ 22 ಚೇರ್‌ಗಳನ್ನು ಮಾತ್ರ ಹಾಕಿದ್ದಾರೆ. ಅವಕಾಶ ಇದ್ದರೆ ಮೇಲೆ ಹೋಗಿ ಇಲ್ಲ ಅಂದ್ರೆ ಹೊರಗೆ ಹೋಗಿ ಎಂದರು. ಮತ್ತೇ ಬೇಸರಿಕೊಂಡ ಬಿಜೆಪಿ ಮುಖಂಡರು ಕಾರ್ಯಕ್ರಮವನ್ನು ಬಿಟ್ಟು ಹೊರನಡೆದರು.
ಬೆಂಗಳೂರು ಈಗ UPSC ಹಬ್ ಆಗಿದೆ; ರಾಜ್ಯದ ಟಾಪರ್ ಅವಿನಾಶ್
ಸಿಎಂಗೆ ಮನವಿ ಕೊಡಲು ಬಂದ ಬಿಸಿಯೂಟ ಕಾರ್ಯಕರ್ತ ಮಹಿಳೆಯರಿಂದ ಹಿಡಿಶಾಪ: ಅಲ್ಲೊಂದಿಷ್ಟು ಜನ ಮಹಿಳೆಯರು ತುಂಬಾ ಭರವಸೆ ಇಟ್ಟುಕೊಂಡು ಬಂದಿದ್ದರು. ಅವರು ಬಂದಿದ್ದು ಒಂದಲ್ಲ ಎರಡಲ್ಲ ಬರೋಬರಿ ಎಂಟುನೂರು ಜನ. ಆದರೆ ಮಹಿಳೆಯರ ಕೂಗು ಮಾತ್ರ ಸಿಎಂಗೆ ಕೇಳಲೇ ಇಲ್ಲಾ. ಮನೆಯಲ್ಲಿ ಮಕ್ಕಳು ಕೆಲಸ ಕಳೆದುಕೊಂಡಿದ್ದಾರೆ. ಹತ್ತಾರು ವರ್ಷಗಳಿಂದ ಕೇವಲ 2800 ರೂಪಾಯಿಗೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಕನಿಷ್ಟ ನಮ್ಮ ಮನವಿ ಸ್ವೀಕರಿಸಲು ಅವರಿಂದ ಆಗಲಿಲ್ಲ. ನಮ್ಮ ಮನವಿ ತೆಗೆದುಕೊಂಡು ಕಸದ ಬುಟ್ಟಿಗೆ ಹಾಕಲಿ. ಬೇಜಾರು ಇಲ್ಲಾ. ಆದರೆ ಮನವಿ ಮಾತ್ರ ಸ್ವೀಕರಿಸಲಿಲ್ಲ. ಹೀಗೆ ಆಕ್ರೋಶಗೊಂಡ ಮಹಿಳೆಯರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಿವಿ ಮಾತು ಹೇಳಿದ ರೇಣುಕಾಚಾರ್ಯ
ಹಿರಿಯೂರು ಶಾಸಕಿ ಪೂರ್ಣಿಮಾ ಅವರು ಸಹ ಇಲ್ಲಿಗೆ ಎಂಟುನೂರು ಜನ ಬಿಸಿಯೂಟ ಕಾರ್ಯಕರ್ತೆಯರನ್ನ ಪಾಸ್ ಕೊಟ್ಟು ಕರೆಸಿದ್ದರು. ಅವರ ಕಾರ್ಯಕ್ರಮಕ್ಕೆ ಜನ ಸೇರಲಿ ಎಂದು ಕರೆಸಿದ್ದರು ಎಂದು ಕಾಣುತ್ತಿದೆ. ಸಿಎಂ ಅವರ ವಿರುದ್ಧ ಬಿಸಿಯೂಟ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಸಿಎಂಗೆ ಧಿಕ್ಕಾರ ಹಾಕಿ ಹಿಡಿಶಾಪ ಹಾಕಿದರು. ಸಿಎಂ ಕಾಮನ್ ಮ್ಯಾನ್ ಎಂದು ಹೇಳುವ ಮುಖ್ಯಮಂತ್ರಿಗಳು ಮಾತ್ರ ಬರೀ ಬಾಯಿ ಮಾತಿನಿಂದ ಮಾತ್ರ ಹೇಳುತ್ತಿದ್ದಾರೆ. ಜನ ಸಾಮಾನ್ಯರ ಬೇಡಿಕೆ ಬಗ್ಗೆ ಗಮನ ಹರಿಸುತ್ತಿಲ್ಲ. ಮೇಲಾಗಿ ಇದ್ದಕ್ಕಿದ್ದಂತೆ ನೂರಾರು ಬಿಸಿಯೂಟ ಕಾರ್ಯಕರ್ತೆಯರನ್ನ ಸೇವೆಯಿಂದ ವಜಾ ಗೊಳಿಸಲಾಗಿದೆ. ಹತ್ತಾರು ವರ್ಷಗಳಿಂದ 2800 ರೂಪಾಯಿಗೆ ಕೆಲಸ ಮಾಡುತ್ತಿರುವ ಇಂತಹ ಒಂದು ಲಕ್ಷ 70 ಸಾವಿರ ಮಹಿಳೆ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ.