
ಬಾಗಲಕೋಟೆ(ಫೆ.03): ಈ ಕಾಂಗ್ರೆಸ್‌ನವರಿಗೆ ಬುದ್ಧಿಭ್ರಮಣೆ ಯಾಗಿದೆ. ಒಂದು ಕಡೆ ರಾಹುಲ್ ಗಾಂಧಿ ಭಾರತ ಜೋಡೋ ಅಂತಾರೆ, ಮತ್ತೊಂದು ಕಡೆ ಡಿ.ಕೆ.ಸುರೇಶ ಭಾರತ ತೋಡೋ ಎನ್ನುತ್ತಾರೆ ಎಂದು ಬಿಜೆಪಿ ಮುಖಂಡ ಎನ್.ರವಿಕುಮಾರ್ ಕುಟುಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರು ಈ ಹಿಂದೆಯೂ ಭಾರತ ತೋಡೋ ಮಾಡಿದ್ದಾರೆ. ಹಿಂದೂಸ್ಥಾನ್ -ಪಾಕಿಸ್ತಾನ ಎಂದು ವಿಭಜಿಸಿದವರು ಇವರೇ. ಆರ್ಟಿಕಲ್ 370 ಮಾಡಿದವರಾರು? ನೀವೆ (ಕಾಂಗ್ರೆಸ್), 1971ರಲ್ಲಿ ಬಾಂಗ್ಲಾದೇಶ ಮಾಡಿ ದವರು ನೀವೇ (ಕಾಂಗ್ರೆಸ್). ಈಗ ಮತ್ತೊಮ್ಮೆ ಭಾರತ ವನ್ನು ಒಡೆಯಲು ಹೊರಟಿದ್ದೀರಿ. ಕಾಂಗ್ರೆಸ್ ಅಂದ್ರೇನೆ ಅದೊಂದು ತೋಡೋ ಪಾರ್ಟಿ, ಕಾಂಗ್ರೆಸ್ ಮತಲಬ್ ತೋಡೋ ಪಾರ್ಟಿ. ಬಿಜೆಪಿ ಅಂದ್ರೆ ಜೋಡೋ ಪಾರ್ಟಿ ಎಂದು ಹೇಳಿದರು.
ಜಗದೀಶ ಶೆಟ್ಟರ್‌ಗೆ ಯಾವುದೋ ಭಯ ಇರಬೇಕು: ಸಚಿವ ತಿಮ್ಮಾಪುರ
ಹೈಕಮಾಂಡ್ ಹೇಳಿದಂಗೆ ಕೇಳಲಿಕ್ಕೆ ನಾವು ಫುಟ್ಬಾಲ್ ಅಲ್ಲ ಎಂಬ ಕಾಂಗ್ರೆಸ್ ಮು ಖಂಡ ಪ್ರಕಾಶ್ ಹುಕ್ಕೇರಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಕಾಶ್ ಹುಕ್ಕೇರಿ, ಕೆ. ರಾಜಣ್ಣನಂಥ ಕಾಂಗ್ರೆಸ್ ಹಿರಿಯ ನಾಯಕರು ಅಂದರೆ ಅವರ ಹೈಕಮಾಂಡ್ ಹೇಗಿರಬಹುದು ಎಂದು ನೀವೇ ಊಹೇ ಮಾಡಿ. ಅವರು ಹೇಳಿದ್ದೆಲ್ಲ ಸರಿ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.