ಸಿಎಂ ಬಿಎಸ್‌ವೈ ಮನೆಗೆ ಮುಖಂಡ : ಆರ್‌ಆರ್‌ ನಗರ ಟಿಕೆಟ್‌ಗೆ ಮನವಿ?

By Kannadaprabha NewsFirst Published Oct 1, 2020, 9:37 AM IST
Highlights

ಮಾಜಿ ಶಾಸಕರೋರ್ವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ

ಬೆಂಗಳೂರು (ಅ.01): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಮುನಿರತ್ನ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ತಾವು ಕಾಂಗ್ರೆಸ್‌ ತೊರೆದು ಬಿಜೆಪಿಗೆ ಆಗಮಿಸಿರುವುದರಿಂದ ತಮಗೆ ಟಿಕೆಟ್‌ ನೀಡುವ ಬಗ್ಗೆ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು ಎನ್ನಲಾಗಿದೆ.

 ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಒಟ್ಟಿಗೆ ರಾಜೀನಾಮೆ ಕೊಟ್ಟು ಒಟ್ಟಿಗೆ ಬಂದಿದ್ದೇವೆ. ಮುಖ್ಯಮಂತ್ರಿಗಳು ಎಲ್ಲರಿಗೂ ನ್ಯಾಯ ಒದಗಿಸಿದ್ದಾರೆ ಎನ್ನುವ ಮೂಲಕ ತಮಗೇ ಟಿಕೆಟ್‌ ನೀಡಬೇಕಾಗುತ್ತದೆ ಎನ್ನುವುದನ್ನು ಪರೋಕ್ಷವಾಗಿ ತಿಳಿಸಿದರು.

ಸಿಎಂ ಸವಾಲು ಸ್ವೀಕರಿಸಿದ ಮಾಜಿ ಸಿಎಂ: ರಾಜೀನಾಮೆ ನೀಡುತ್ತೇನೆಂದ ಸಿದ್ದರಾಮಯ್ಯ...! ...

ಬಿಜೆಪಿ ಮಾತಿನ ಮೇಲೆ ನಿಲ್ಲುವ ಪಕ್ಷ. ರಾಷ್ಟ್ರೀಯ ನಾಯಕರ ಸಮ್ಮುಖದಲ್ಲೇ ಮಾತುಕತೆ ನಡೆದು ನಾವು ಪಕ್ಷ ಸೇರ್ಪಡೆಯಾದೆವು. ನನ್ನನ್ನು ಬೆಂಬಲಿಸುವುದು ವರಿಷ್ಠರಿಗೆ ಸಂಬಂಧಿಸಿದ ವಿಷಯ ಎಂದು ಮಾರ್ಮಿಕವಾಗಿ ಹೇಳಿದರು.

ಆ ವೇಳೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್‌ ಶಾ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದ ಎಲ್ಲರಿಗೂ ಅನ್ಯಾಯ ಮಾಡಲ್ಲ ಅಂತ ಮಾತು ಕೊಟ್ಟಿದ್ದರು. ಆ ಮಾತಿನ ಪ್ರಕಾರ ನಾವೆಲ್ಲ ಒಟ್ಟಿಗೆ ಇದ್ದೇವೆ.

'ಸಂಪುಟದಲ್ಲಿ ಹೊಸಬರಿಗೂ ಅವಕಾಶ ಕೊಡಿ : ಸಚಿವ ಸ್ಥಾನಕ್ಕೆ ಡಿಮ್ಯಾಂಡ್

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್‌ನಿಂದ ಯಾರು ಬೇಕಾದರೂ ಸ್ಪರ್ಧಿಸಲಿ. ಪ್ರಜಾಪ್ರಭುತ್ವದಲ್ಲಿ ಸ್ಪರ್ಧೆ ಮಾಡುವುದು ಅವರವರ ಹಕ್ಕು. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸುತ್ತೇನೆ. ನಾನು ರಾಜೀನಾಮೆ ಕೊಟ್ಟಬಳಿಕ ಪ್ರತಿಯೊಬ್ಬ ಕಾರ್ಯಕರ್ತ, ಬಿಬಿಎಂಪಿ ಮಾಜಿ ಸದಸ್ಯರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದರು.

click me!