ಈಶ್ವರಪ್ಪ ರಾಜ್ಯದಲ್ಲಿ ಈ ಇಬ್ಬರನ್ನು ಮಾತ್ರ ನಂಬುತ್ತಾರಂತೆ: ಯಾರವರು?

By Suvarna News  |  First Published Aug 2, 2021, 5:03 PM IST

* ಸಚಿವ ಸ್ಥಾನದ ಬಗ್ಗೆ ಅಭಿಪ್ರಾಯ ಹೊರಹಾಕಿದ ಈಶ್ವರಪ್ಪ
* ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ ಎಂದ ಮಾಜಿ ಸಚಿವ
* ಬಸವರಾಜ ಬೊಮ್ಮಾಯಿ ಅವರು ದೇವೇಗೌಡ ಅವರನ್ನ ಭೇಟಿ ಬಗ್ಗೆ ಪ್ರತಿಕ್ರಿಯೆ


ಶಿವಮೊಗ್ಗ,(ಅ.02): ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಉಪಮಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅದು ಇಲ್ಲ ಅಂದ್ರೆ ಕೊನೆಗೂ ಮಂತ್ರಿಯಾದರೆ ಸಾಕು ಎನ್ನುವ ಆಲೋಚನೆಯಲ್ಲಿದ್ದಾರೆ. 

ಆದ್ರೆ, ರಾಜ್ಯ ಬಿಜೆಪಿಯಲ್ಲಿನ ವಿದ್ಯಾಮಾನಗಳನ್ನ ಗಮನಿಸಿದ್ರೆ ಈಶ್ವರಪ್ಪ ಅವರಿಗೆ ಮಂತ್ರಿಭಾಗ್ಯನೂ ಸಿಗುತ್ತೋ ಇಲ್ಲೋ ಎನ್ನುವ ಆತಂಕದಲ್ಲಿದ್ದಾರೆ.

Tap to resize

Latest Videos

ಚಿತ್ರಗಳು: ಗುರು ಶಿಷ್ಯ ಭೇಟಿ ಮಧ್ಯೆ ಸೋಮಣ್ಣ-ರೇವಣ್ಣ

ಇನ್ನು ಇಂದು (ಸೋಮವಾರ)  ಸಿಎಂ ಬಸವರಾಜ ಬೊಮ್ಮಾಯಿ ಅವರು ದೇವೇಗೌಡ ಅವರನ್ನ ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಅವರು ಹಿರಿಯರು, ರೈತ ನಾಯಕರು ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ನಾನು ಇಬ್ಬರನ್ನು ನಂಬುತ್ತೆನೆ. ಒಬ್ಬರು ರೈತರ ಪರವಾಗಿರುವ, ಮಾಜಿ ಪ್ರಧಾನಿ ದೇವೆಗೌಡರು, ಮತ್ತೊಬ್ಬರು ರೈತ ಪರ ಕಾಳಜಿಯುಳ್ಳ ಬಿ.ಎಸ್. ಯಡ್ಯೂರಪ್ಪನವರು. ಬೊಮ್ಮಾಯಿ ಯಡಿಯೂರಪ್ಪ ಆಶೀರ್ವಾದ ಹೇಗೆ ಪಡೆದರೋ ಹಾಗೆಯೇ, ದೇವೆಗೌಡರ ಆಶೀರ್ವಾದವೂ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ. ಅಧಿಕಾರವಿಲ್ಲದಿದ್ದರೂ ಪಕ್ಷ ನಮ್ಮ ಅನುಭವ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.

ಇನ್ನೊಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಎಲ್ಲಾ ಭಗವಂತ ಹಾಗೂ ಹೈ ಕಮಾಂಡ್ ಗೆ ಬಿಟ್ಟಿದ್ದು. ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೂ ಗೊತ್ತಿಲ್ಲ ಎಂದರು.

click me!