ಖರ್ಗೆಯವರ ಬಗ್ಗೆ ನನಗಾವ ದ್ವೇಷವೂ ಇಲ್ಲ: ಬಿಜೆಪಿ ನಾಯಕ ಮಾಲಕರೆಡ್ಡಿ

By Kannadaprabha NewsFirst Published Nov 20, 2022, 9:00 PM IST
Highlights

ಕಾಂಗ್ರೆಸ್‌ ಪಕ್ಷದಲ್ಲಿ ಆಗ ನನ್ನ ಹಿರಿತನ ಕಡೆಗೆಣಿಸಿದ್ದರು, ಕಾಂಗ್ರೆಸ್‌ಗೆ ಬನ್ನಿ ಎಂದು ಕಾರ್ಯರ್ತರ, ಸಾಮಾನ್ಯರ ಒತ್ತಾಯವಿದೆ: ಮಾಲಕರೆಡ್ಡಿ

ಯಾದಗಿರಿ(ನ.20):  ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ನನಗಾವ ದ್ವೇಷವಿಲ್ಲ, ನಾವೆಲ್ಲ ಒಂದೇ ಕಾಲದ ರಾಜಕಾರಣಿಗಳು. ಕಾಂಗ್ರೆಸ್‌ನಲ್ಲಿ ನನ್ನ ಹಿರಿತನ ಕಡೆಗೆಣಿಸಿದ್ದರು ಅನ್ನೋ ನೋವಿತ್ತು ಎಂದು ಮಾಜಿ ಸಚಿವ, ಹಿರಿಯ ರಾಜಕಾರಣಿ ಡಾ.ಎ.ಬಿ.ಮಾಲಕರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಡಿಕೆಶಿ ಜೊತೆ ಅವರ ಭೇಟಿಯ ಫೋಟೋ ಟ್ವೀಟ್‌ ನಂತರ ಕುತೂಹಲ ಕೆರಳಿಸಿದ ಮುಂದಿನ ರಾಜಕೀಯ ನಡೆಯ ಬಗ್ಗೆ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ದೊಡನೆ ಮಾತನಾಡಿದ ಡಾ. ಎ. ಬಿ. ಮಾಲಕರೆಡ್ಡಿ, ಡಿಕೆಶಿ ಅವರ ಜೊತೆ ದಶಕಗಳ ಹಿಂದಿನ ಪರಿಚಯವಿದೆ. ನಾನು ಕಾಂಗ್ರೆಸ್ನಲ್ಲಿದ್ದಾಗಿನಿಂದಲೂ ಅವರ ಜೊತೆ ಸಂಪರ್ಕವಿದೆ. ಅವತ್ತು ಅವರ ಜೊತೆ ಅಲ್ಲಿನ ಭೇಟಿ ಸಾಮಾನ್ಯ ವಿಷಯಗಳ ಚರ್ಚೆಯಷ್ಟೇ ಆಗಿತ್ತು ಎಂದು ಫೋಟೋ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದರು.

ಇನ್ನು, ಕಾಂಗ್ರೆಸ್‌ ಪಕ್ಷಕ್ಕೆ ಮರಳಿ ಬರುತ್ತಾರೆನ್ನುವ ಕುರಿತು ತಿಳಿಸಿದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಮರಳಿ ಬನ್ನಿ ಅನ್ನೋದು ಅನೇಕ ಕಾರ್ಯಕರ್ತರ ಒತ್ತಾಯವಿದೆ. ನನ್ನ ಸೇವೆ ಮತ್ತೇ ಆಗಲಿ ಎಂದು ಸಾಮಾನ್ಯರೂ ಇದಕ್ಕೆ ದನಿಗೂಡಿಸುತ್ತಿದ್ದಾರೆ. ನನಗೆ ವಯಸ್ಸಾಗಿದ್ದರಿಂದ ಚುನಾವಣೆ ಸ್ಪರ್ಧೆಗೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಡಾ. ರೆಡ್ಡಿ, ಮಹಿಳೆಗೆ ಪ್ರಾತಿನಿಧ್ಯ ಕೊಡಲು ಕಾಂಗ್ರೆಸ್‌ ಹೇಳಿಕೊಂಡಿದೆ. ನನ್ನ ಕುಟುಂಬದವರು ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಹೀಗಾಗಿ, ಅವರು ಬಯಸಬಹುದು ಎನ್ನುವ ಮೂಲಕ ಪುತ್ರಿ ಅನುರಾಘಾ ರಾಜಕೀಯ ಪ್ರವೇಶದ ಸ11/19/2022 8:58:45 Pಋಗಿುಳಿವು ನೀಡಿದಂತಿತ್ತು.

ಸುರಪುರ: ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ, ರಾಜೂಗೌಡ

ಚುನಾವಣೆಯ ವೇಳೆ ಖರ್ಗೆಯವರು ಸೇರಿದಂತೆ ನಾನು ಯಾರ ಬಗ್ಗೆಯೂ ವೈಯುಕ್ತಿಕವಾಗಿ ಟೀಕಿಸಿಲ್ಲ, ಕೇವಲ ಜನಪರ ಯೋಜನೆಗಳ ಕುರಿತು ಪ್ರಚಾರ ಮಾಡಿದ್ದೇನೆ. ಈಗ ಬಿಜೆಪಿ ಪಕ್ಷದ ಬಗ್ಗೆ ನನಗೆ ಯಾವ ಅಸಮಾಧಾನವೂ ಇಲ್ಲ. ಆದರೆ, ದಶಕಗಳ ಜೊತೆ ಹಿಂದೆ ಹೆಜ್ಜೆ ಹಾಕಿದ ಕಾಂಗ್ರೆಸ್‌ ಪಕ್ಷದಲ್ಲಿ ಕಾರ್ಯಕರ್ತರ ಒತ್ತಾಯವಿದೆ ಎಂದು ಹೇಳಿದರು.

ಮರಳಿ ಕಾಂಗ್ರೆಸ್‌ಗೆ ಡಾ. ಮಾಲಕರೆಡ್ಡಿ ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ, ಕಾಂಗ್ರೆಸ್‌ ಪಾಳೆಯ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ, ಹಿರಿಯ ರಾಜಕಾರಣಿ ಡಾ. ಎ. ಬಿ. ಮಾಲಕರೆಡ್ಡಿ ಮತ್ತೇ ಕಾಂಗ್ರೆಸ್‌ನ ‘ಕೈ’ ಹಿಡಿಯಲಿದ್ದಾರೆಯೇ? ಹೌದು, ಇಲ್ಲೀಗ ಇಂತಹದ್ದೊಂದು ರಾಜಕೀಯ ಬೆಳವಣಿಗೆಗಳ ಕುರಿತ ಕುತೂಹಲ ಕೆರಳಿಸಿದೆ. ಡಾ. ಮಾಲಕರೆಡ್ಡಿ ಅವರ ಜೊತೆಗಿದ್ದ ಫೋಟೋವೊಂದನ್ನು ಕಾಂಗ್ರೆಸ್‌ ಅಧ್ಯಕ್ಷ . ಕೆ. ಶಿವಕುಮಾರ್‌ ಅವರು ಟ್ವೀಟ್‌ ಮಾಡಿ ಹಂಚಿಕೊಂಡಿದ್ದು ಇಂತಹ ಪ್ರಶ್ನೆಗಳಿಗೆ ಕಾರಣವಾಗುತ್ತಿದೆ. ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಇಂತಹ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

Assembly Election:'ಕೈ' ಹಿಡಿಯಲಿದ್ದಾರಾ ಮಾಜಿ ಸಚಿವ ಮಾಲಕರೆಡ್ಡಿ? ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್

ಕಾಂಗ್ರೆಸ್‌ ಪಕ್ಷದಲ್ಲಿ ಹಿರಿಯ ನಾಯಕರೆಂದೇ ಪರಿಗಣಿಸಲ್ಪಟ್ಟಿದ್ದ ಡಾ. ಮಾಲಕರೆಡ್ಡಿ, ಕಳೆದ ಚುನಾವಣೆಯಲ್ಲಿ ವೆಂಕಟರೆಡ್ಡಿ ಮುದ್ನಾಳ್‌ ಅವರ ವಿರುದ್ಧ ಸೋಲಿನ ಕಹಿ ಉಂಡಿದ್ದರು. ತಮ್ಮ ಸೋಲಿಗೆ ಖರ್ಗೆಯವರೇ ನೇರ ಕಾರಣ ಎಂದು ಆರೋಪಿಸಿ, ಕೈಪಾಳೆಯ ತೊರೆದು ಬಿಜೆಪಿ ಸೇರಿದ್ದ ಡಾ. ರೆಡ್ಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜಕೀಯ ಚಟುವಟಿಕೆಗಳಿಂದ ಬಹು ದೂರವೇ ಇದ್ದವರು. ಲೋಕಸಭೆ ಚುನಾವಣೆಯ ವೇಳೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರದ ಮುಂಚೂಣಿಯಲ್ಲಿದ್ದುದು ವಿಶೇಷ.

‘‘ಮಾಜಿ ಸಚಿವರು ಹಾಗೂ ಹಿರಿಯ ನಾಯಕರಾದ ಶ್ರೀ ಮಾಲಕರೆಡ್ಡಿ ಅವರು ಇಂದು ನನ್ನನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ಹಲವು ವಿಚಾರಗಳ ಕುರಿತು ಮಾತನಾಡಿದರು’’ ಎಂಬುದಾಗಿ ಡಿಕೆಶಿ ಅವರು ಮೊನ್ನೆ ಮಾಡಿದ ಟ್ವೀಟ್‌ ಇಲ್ಲೀಗ ಸದ್ದು ಮಾಡುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ಕ್ಷೀಣಿಸುತ್ತಿರುವ ಕಾಂಗ್ರೆಸ್‌ಗೆ ಬಲ ತುಂಬಲು ಈ ಹಿಂದಿನ ಎಲ್ಲ ರಾಜಕೀಯ ವೈಷಮ್ಯಗಳ ಮರೆತು ಡಾ. ರೆಡ್ಡಿ ಮತ್ತೇ ವಾಪಸ್ಸಾಗಲಿದ್ದಾರೆಯೇ ? ಜೊತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗ್ಯೂ ಒಂದಿಷ್ಟುಪಕ್ಕಾ ಬೆಂಬಲಿಗರನ್ನು ಹೊಂದಿರುವ ಡಾ. ರೆಡ್ಡಿ ಅವರು ಪಕ್ಷಕ್ಕೆ ಮರಳಿದರೆ ಈ ಭಾಗದಲ್ಲಿ ಮತ್ತೇ ಕಾಂಗ್ರೆಸ್‌ಗೆ ಚೈತನ್ಯ ಮೂಡಲಿದೆಯೇ ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
 

click me!