ಸಿಎಂ ಬದಲಾವಣೆ ಕಪೋಲಕಲ್ಪಿತ: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವ್ಯಂಗ್ಯ

By Govindaraj SFirst Published Aug 11, 2022, 11:14 PM IST
Highlights

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಿನಿಂದಲೆ ಸಿಎಂ ಬದಲಾವಣೆ ಚರ್ಚೆ ಶುರು ಮಾಡಿದ್ದರು. ನೀವು ಹೇಳಿದ ವರದಿಯೇ ಸತ್ಯವಾಗಿದ್ದರೆ ಇಷ್ಟೊತ್ತಿಗೆ 10 ಸಲ ಸಿಎಂ ಬದಲಾಗಬೇಕಿತ್ತು. ಇದು ಕಪೋಲ ಕಲ್ಪಿತ ವರದಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು (ಆ.11): ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಿನಿಂದಲೆ ಸಿಎಂ ಬದಲಾವಣೆ ಚರ್ಚೆ ಶುರು ಮಾಡಿದ್ದರು. ನೀವು ಹೇಳಿದ ವರದಿಯೇ ಸತ್ಯವಾಗಿದ್ದರೆ ಇಷ್ಟೊತ್ತಿಗೆ 10 ಸಲ ಸಿಎಂ ಬದಲಾಗಬೇಕಿತ್ತು. ಇದು ಕಪೋಲ ಕಲ್ಪಿತ ವರದಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸಿಎಂ ಬದಲಾವಣೆ ಎಂದು ಹೇಳುವ ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯ: ಅಮಾವಸ್ಯೆ-ಹುಣ್ಣಿಮಿಗೆ ಯಾರ್ಯಾರಿಗೋ ಏನೇನೋ ಆಗುತ್ತೆ. ಅವರು ಸರಿ ಇದ್ದಾರೆ ಅನ್ನೋಕಾಗುತ್ತಾ. ಅದು ಅವರಿಗೆ ಇರುವ ರೋಗ ಎಂದು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂದು ಹೇಳುವ ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು: ಸಚಿವ ಮಾಧುಸ್ವಾಮಿ

ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಕೆರೆಗೆ ಬಾಗಿಣ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೂರು ತಿಂಗಳಿಂದಲೂ ಹೇಳುತ್ತಿದ್ದಾರೆ. ಅವರು ಹೇಳಿದಂತೆ ಅವರ ವರದಿಯೇ ನಿಜವಾಗಿದ್ದರೆ ಇಷ್ಟು ಹೊತ್ತಿಗೆ 10 ಸಲ ಮುಖ್ಯಮಂತ್ರಿ ಬದಲಾಗಬೇಕಿತ್ತು ಎಂದು ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. 

ಜಮೀರ್‌ಗೆ ಅಧಿಕಾರ ಕೊಟ್ಟವರ್ಯಾರು: ಬೆಂಗಳೂರಿನ ಈದ್ಗಾ ಜಾಗದಲ್ಲಿ ಗಣೇಶೋತ್ಸವ ಮಾಡಬೇಡಿ ಎಂದು ಹೇಳುವ ಅಧಿಕಾರ ಜಮೀರ್ ಅಹಮದ್‌ಗೆ ಕೊಟ್ಟವರ್ಯಾರು, ಅವರೇನಾದರೂ ವಿಶೇಷಾಧಿಕಾರಿನ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಈದ್ಗಾ ಮೈದಾನದಲ್ಲಿ ವಿವಾದ ಎಲ್ಲಿದೆ. ಅದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸಿ ಎಂದು ಹೇಳಿತ್ತು. ಅವರು ಸಲ್ಲಿಸಿಲ್ಲ. ಸರ್ಕಾರಿ ಆಸ್ತಿ ಎಂದು ಆದ ಮೇಲೆ ವಿವಾದ ಎಲ್ಲಿ ಬಂತು ಎಂದರು. 

ಗಣೇಶೋತ್ಸವಕ್ಕೆ ಅವಕಾಶ ಕೊಡಬೇಕೋ ಬೇಡವೋ ಎನ್ನುವುದನ್ನು ಅಲ್ಲಿರುವ ಜಿಲ್ಲಾಡಳಿತ ತೀರ್ಮಾನ ಮಾಡುತ್ತದೆ. ಉತ್ಸವ ಆಗಲೇಬೇಕು. ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭ ಮಾಡಿದರು. ಎಲ್ಲರೂ ಒಂದಾಗಿ ಜಾತಿಯತೆ, ಅಸ್ಪೃಶ್ಯತೆ, ಯಾವ ಭಾವ ಇಲ್ಲದೆ ಆಚರಿಸುವ ಹಬ್ಬ ಅದನ್ನು ಮಾಡಬೇಕೋ, ಬಿಡಬೇಕೋ ಎನ್ನುವುದಕ್ಕೆ ಜಮೀರ್ ಅವರ ಅಪ್ಪಣೆ ಪಡೆಯಬೇಕು ಎನ್ನುವುದೇ ದುರದೃಷ್ಠಕರ, ಅಲ್ಲದೆ ಜಮೀರ್ ಅಹಮದ್ ಉತ್ಸವಕ್ಕೆ ಬಿಡುವುದಿಲ್ಲ ಎನ್ನುವುದು ಅಸಹಿಷ್ಣುತೆ ಎಂದರು.

ಪ್ರತಿ ವರ್ಷ ಬೆರಟಿಕೆರೆ ತುಂಬಿಸಲು ಯೋಜನೆ: ಪ್ರತಿ ವರ್ಷವು ಬೆರಟಿಕೆರೆ ತುಂಬಲು ಹಲವು ಯೋಜನೆಗಳು ತಯಾರಾಗಿವೆ. ಗೋಂಧಿ ನಾಲೆ ಯೋಜನೆಯ ಜೊತೆಗೆ ಮಾದರಸಕೆರೆ, ದಾಸರಹಳ್ಳಿ ಕೆರೆ ಹಾಗೂ ಅಯ್ಯನಕೆರೆಯು ಕೋಡಿ ಬಿದ್ದ ನೀರನ್ನು ಬೆರಟಿಕೆರೆಗೆ ಹಾಯಿಸಲಾಗುತ್ತದೆ. ಜನರ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ಹುಲಿಕೆರೆಯ ಬೆರಟಿಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಹುಲಿಕೆರೆ ಗ್ರಾಮ ಪಂಚಾಯ್ತಿಗೆ 9.98 ಕೋಟಿ ರು. ವೆಚ್ಚದಲ್ಲಿ ಬೆರಟಿಕೆರೆ, ಕಂಚಗಾರನಹಳ್ಳಿ ಕೆರೆ, ನಾಗೇನಹಳ್ಳಿ ಕಟ್ಟೆ, ಕಾಶಮ್ಮನ ಕಟ್ಟೆಕೆರೆ ತುಂಬಿಸಲು ಹಣಕಾಸು ಮಂಜೂರು ಮಾಡಿ ಡಿಪಿಆರ್‌ ತಯಾರಿಸಲಾಗಿದೆ ಎಂದರು.

Chikkamagaluru: ರಾಷ್ಟ್ರಧ್ವಜಕ್ಕೆ ಅಪಮಾನ: ಮಾಜಿ ಸಿಎಂ ಸಿದ್ದು ವಿರುದ್ಧ ದೂರು

ಗೋಂಧಿ ನಾಲೆ ಯೋಜನೆಯಡಿ ಭದ್ರಾ ನದಿಯಿಂದ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು 1281 ಕೋಟಿ ರು. ವೆಚ್ಚದ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಅದರಿಂದ ಸಖರಾಯಪಟ್ಟಣ ಹೋಬಳಿಯ ಎಲ್ಲಾ ಕೆರೆಗಳು ಭರ್ತಿಯಾಗಲಿವೆ ಎಂದ ಅವರು, ಜಿಲ್ಲೆಯಲ್ಲಿ 1400 ಕೋಟಿ ರು. ವೆಚ್ಚದಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ಮನೆ ಮನೆಗೆ ನೀರು ಪೂರೈಸುವ ಕಾಮಗಾರಿ ಟೆಂಡರ್‌ ಕರೆಯಲಾಗಿದ್ದು, 15 ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

click me!