ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು: ಸಚಿವ ಮಾಧುಸ್ವಾಮಿ

By Govindaraj S  |  First Published Aug 11, 2022, 9:25 PM IST

ನಾವು ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು. ಆದರೆ, ಗೆದಿದ್ದು ಆರೇ ಸೀಟು ಎಂದು ಕಾನೂನು ಸಚಿವ ಮಾಧುಸ್ವಾಮಿ ಚಿಕ್ಕಮಗಳೂರಿನಲ್ಲಿ ಸಿದ್ದರಾಮೋತ್ಸವಕ್ಕೆ ಟಾಂಗ್ ಕೊಟ್ಟಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.11): ನಾವು ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು. ಆದರೆ, ಗೆದಿದ್ದು ಆರೇ ಸೀಟು ಎಂದು ಕಾನೂನು ಸಚಿವ ಮಾಧುಸ್ವಾಮಿ ಚಿಕ್ಕಮಗಳೂರಿನಲ್ಲಿ ಸಿದ್ದರಾಮೋತ್ಸವಕ್ಕೆ ಟಾಂಗ್ ಕೊಟ್ಟಿದ್ದಾರೆ. 

Tap to resize

Latest Videos

ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ: ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಜೊತೆ ದಾಸರಹಳ್ಳಿ ಕೆರೆಗೆ ಬಾಗಿಣ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಕೆಜೆಪಿ ಕಟ್ಟಿದಾಗ ಹಾವೇರಿ ಸಮಾವೇಶದಲ್ಲಿ ಸಿದ್ದರಾಮೋತ್ಸವಕ್ಕಿಂತ ಹೆಚ್ಚು ಜನ ಸೇರಿದ್ದರು. ಗೆದ್ದಿದ್ದು ಆರೇ ಸೀಟು. ಹಾವೇರಿ ಸಮಾವೇಶ ನೋಡಿ ಮುಗಿದೋಯ್ತು, ರಾಜ್ಯ ನಮ್ಮ ಕೈಗೆ ಬಂತು ಎಂದು ಭಾವಿಸಿದ್ದೇವು. ಅಷ್ಟು ಜನ ಸಿದ್ದರಾಮಯ್ಯ ಉತ್ಸವದಲ್ಲಿ ಇರಲಿಲ್ಲ. ಮುಖ್ಯಮಂತ್ರಿ ಆಗಿದ್ದವರು ಆ ಭಾಗದಲ್ಲಿ ಅಪರೂಪಕ್ಕೆ ಒಂದು ಸಮಾವೇಶ ಮಾಡಿದಾಗ ಜನ ಬರುತ್ತಾರೆ. ಅದೆಲ್ಲವೂ ಮತವಾಗಿ ಬದಲಾಗುತ್ತೆ ಎಂದು ಲೆಕ್ಕ ಮಾಡಲು ಆಗುವುದಿಲ್ಲ ಎಂದರು.

Chikkamagaluru: ರಾಷ್ಟ್ರಧ್ವಜಕ್ಕೆ ಅಪಮಾನ: ಮಾಜಿ ಸಿಎಂ ಸಿದ್ದು ವಿರುದ್ಧ ದೂರು

ಬೇರೆ ಪಕ್ಷದ ಬಗ್ಗೆ ಚರ್ಚೆ ಗೌರವ ತರಲ್ಲ: ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂದು ಕೆಪಿಸಿಸಿ ಟ್ವೀಟ್ ಮಾಡುತ್ತಂದ್ರೆ ಅವರು ಅವರ ಕೆಲಸವನ್ನ ಯಾವಾಗ ಮಾಡಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಂದು ಪಕ್ಷ ಅಥವ ನಾಯಕರ ಬಗ್ಗೆ ಬೇರೆ ಪಕ್ಷದವರು ಚರ್ಚೆ ಮಾಡುವುದು ರಾಜಕಾರಣದಲ್ಲಿ ಗೌರವ ತರಲ್ಲ. ಜನರ ದಡ್ಡರಲ್ಲ. ಎಲ್ಲವನ್ನೂ ನೋಡುತ್ತಿರುತ್ತಾರೆ ಎಂದರು. ಸಿದ್ದರಾಮಯ್ಯ ಸಿಎಂ ಆಗುತ್ತಾರಾ, ಶಿವಕುಮಾರ್ ಸಿಎಂ ಆಗುತ್ತಾರಾ ಎಂದು ನಾವು ಮಾತನಾಡಿಲ್ಲ. ಅವರ ಹಣೆಬರಹ ಎಂದು ಹೇಳುತ್ತೇವೆ. ಅವರು ಕೂಡ ಅದೇ ರೀತಿ ಅವರ ಹಣೆಬರಹ ಎಂದು ಬಿಡಬೇಕು ಎಂದರು. ಅವರಾಗುತ್ತಾರೆ, ಇವರಾಗುತ್ತಾರೆ ಎಂದು ಮಾತನಾಡಬಾರದು ಎಂದರು. 

ಮಲೆನಾಡಲ್ಲಿ ಮುಂದುವರೆದ ಗಾಳಿ-ಮಳೆ ಅಬ್ಬರ, ಅನಾಹುತಗಳ ಸರಣಿ

ಗಣೇಶೋತ್ಸವ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ: ಬೆಂಗಳೂರಿನ ಈದ್ಗಾ ಮೈದಾನದ ಸಂಬಂಧ ಮಾತನಾಡಿದ ಅವರು, ನಾವು ಮೊಹರಂ ಮಾಡಬೇಡಿ, ರಂಜಾನ್ ಮಾಡಬೇಡಿ ಎಂದು ಹೇಳಿಲ್ಲ. ಅದೇ ರೀತಿ ಗಣೇಶೋತ್ಸವ ಮಾಡಬೇಡಿ ಎಂದು ಹೇಳಲು ಆಗುವುದಿಲ್ಲ. ಇನ್ನು ಮೂರು ದಿನ ಕಳೆದಿಲ್ಲ. ನಾವು ಎಲ್ಲಿಯಾದ್ರು ಹೇಳಿದ್ವಾ ಮೊಹರಂ ಮಾಡಬೇಡಿ ಎಂದು ಪ್ರಶ್ನಿಸಿದ್ದಾರೆ. ಅವರವರಿಗೆ ಯಾವುದರ ಮೇಲೆ ನಂಬಿಕೆ-ವಿಶ್ವಾಸ-ಭಕ್ತಿ ಇದೆಯೋ ಅದನ್ನ ಅವರು ಮಾಡಲಿ. ಅದಕ್ಕೆ ನಾವು ಅವಕಾಶ ಮಾಡಿಕೊಡಬೇಕು. ನಮಗಿರುವ ಭಾವನೆಗಳನ್ನು ಇನ್ನೊಬ್ಬರ ಮೇಲೆ ಹೇರಲಾಗದು ಎಂದರು.

click me!