ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಆರಂಭ: ಸಿ.ಟಿ.ರವಿ

By Govindaraj S  |  First Published Aug 1, 2023, 1:00 AM IST

ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಆರಂಭವಾಗಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಸರ್ಕಾರದ ವಿರುದ್ದ ಕಿಡಿಕಿರಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು  ಹಾಲಿನ ದರ, ಅಬಕಾರಿ ಸುಂಕವನ್ನು ಸರ್ಕಾರ  ಏರಿಕೆ ಮಾಡಿದ್ದಾರೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.01): ರಾಜ್ಯದಲ್ಲಿ ಬೆಲೆ ಏರಿಕೆ ಪರ್ವ ಆರಂಭವಾಗಿದೆ ಎಂದು ಮಾಜಿ ಶಾಸಕ ಸಿ.ಟಿ ರವಿ ಸರ್ಕಾರದ ವಿರುದ್ದ ಕಿಡಿಕಿರಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು  ಹಾಲಿನ ದರ, ಅಬಕಾರಿ ಸುಂಕವನ್ನು ಸರ್ಕಾರ  ಏರಿಕೆ ಮಾಡಿದ್ದಾರೆ. ಹೋಟೆಲ್ ತಿಂಡಿ ದರ ಒಳಗೊಂಡು ಏರಿಕೆ ಪರ್ವ ಕಾಣುತ್ತಿದೆ ಎಂದರು. ಕಾಂಗ್ರೆಸ್ ಪಕ್ಷಕ್ಕೆ ಬೆಲೆ ಏರಿಕೆಯ ಬರೇ ಎಳೆಯಿರಿ ಎಂದು ರಾಜ್ಯದ ಜನ ಅಧಿಕಾರ ಕೊಟ್ಟಿಲ್ಲ , ಜನ ಅಧಿಕಾರ ಕೊಟ್ಟಿದ್ದು ನೀವು ಕೊಟ್ಟ ಗ್ಯಾರಂಟಿ ನಂಬಿ ಆದ್ರೆ ಬೆಲೆ ಏರಿಕೆಯ ಬರೇ ಎಳೆಯುತ್ತಾರೆ ಅಂತ ಯಾರು ಊಹಿಸಿರಲಿಲ್ಲ ಎಂದರು.

Tap to resize

Latest Videos

undefined

ರೈತರಿಗೆ ಸಹಾಯ ಮಾಡುವ ಸದುದ್ದೇಶ: ಚುನಾವಣೆ ವೇಳೆ ಕೇಂದ್ರ ಸಚಿವರಾದ ಅಮಿತ್ ಶಾ ಹೇಳಿಕೆಯನ್ನ ತಪ್ಪಾಗಿ ವ್ಯಾಪಕ ಪ್ರಚಾರ ಮಾಡಿದ್ರು. ಆದ್ರೆ ಅಮುಲ್ ಮತ್ತು ನಂದಿನಿ ತಾಂತ್ರಿಕ ಸಹಕಾರ ಪಡೆದು ಕೆಲಸ ಮಾಡಬೇಕು ಈ ನಿಟ್ಟಿಲ್ಲಿ ರೈತರಿಗೆ ಸಹಾಯ ಮಾಡುವ ಸದುದ್ದೇಶದಿಂದ ಅಮಿತ್ ಶಾ ಸಲಹೆ ನೀಡಿದ್ರು , ಆದ್ರೆ ಕಾಂಗ್ರೆಸ್ ನ ನಾಯಕರು ಇಡೀ ರಾಜ್ಯದಲ್ಲಿ ತಪ್ಪು ಅರ್ಥ ಬರುವ ರೀತಿ ಬಿಂಬಿಸುವ ಕೆಲಸ ಮಾಡಿದ್ರು. ತಿರುಪತಿಗೆ ನಂದಿನಿ ತುಪ್ಪ 50 ವರ್ಷದಿಂದ ಸರಬರಾಜು ಆಗುತ್ತಿದೆ. 

ನಂದಿ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು: ಟ್ರಾಫಿಕ್‌ ಕಿರಿಕಿರಿ

ಆದ್ರೆ ಚುನಾವಣೆ ಮುಗಿದ ಮೇಲೆ ತಿರುಪತಿಗೆ ನಂದಿನಿ ತುಪ್ಪ ಸರಬರಾಜು ನಿಲ್ಲಿಸಲಾಗಿದೆ ಎಂದು ಕೇಳಿ ದುಃಖವಾಗಿದ್ದು‌ ತಿರುಪತಿ ಪ್ರಸಾದದೊಂದಿಗೆ ನಮ್ಮ ರಾಜ್ಯದ ನಂದಿನಿ ತುಪ್ಪ ಸೇರುತ್ತೆ ಅನ್ನುವುದೇ ಹೆಮ್ಮೆ ಸಂಗತಿ ಎಂದರು. ಟಿ.ಟಿ.ಡಿ‌ ನಮ್ಮ ದೊಡ್ಡ ಕಸ್ಟಮರ್ ಅವರನ್ನು ಕಳೆದುಕೊಳ್ಳಬಾರದು ಈ ಹಿನ್ನಲೆಯಲ್ಲಿ ಕೆ.ಎಂ.ಎಫ್. ಅಧ್ಯಕ್ಷರು, ಸಹಕಾರ ಸಚಿವರು, ಶಾಸಕ ಭೀಮ ನಾಯಕ್ ಪ್ರತಿಷ್ಠೆ ಬಿಟ್ಟು ಮಾತನಾಡಬೇಕೆಂದು  ಸಲಹೆ ನೀಡುತ್ತೇನೆ ಎಂದರು.50 ವರ್ಷದ ವ್ಯವಹಾರಿಕ ಸಂಬಂಧವನ್ನು ಮುಂದುವರಿಸಬೇಕು ಈ ಸಲಹೆ ಸ್ವೀಕಾರ ಮಾಡದೆ ಇದ್ರೆ ಹಾಲು ಉತ್ಪಾದಕರಿಗೆ ನಷ್ಟವಾಗುತ್ತೆ ಎಂದು ಎಚ್ಚರಿಕೆ‌‌ ನೀಡಿದರು.

ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಒಂದು ಜವಾಬ್ದಾರಿ: ರಾಜ್ಯಾಧ್ಯಕ್ಷರ ಹುದ್ದಗೆಂದು ಸ್ಪರ್ಧೆ ಇಟ್ಟಿಲ್ಲ. ಹಾಗಾಗಿ ಸ್ಪರ್ಧೆಯಲ್ಲಿರುವ ಪ್ರಶ್ನೆ ಬರುವುದಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಎನ್ನುವುದು ಒಂದು ಜವಾಬ್ದಾರಿ ಅದನ್ನ ಕೇಳಿ ಪಡೆಯಬಾರದು. ಯಾವ ಕಾಲಕ್ಕೆ ಯಾರು ಸೂಕ್ತ ಎನ್ನುವುದನ್ನ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ತಿಳಿಸಿದರು.ನಮ್ಮ ಪಕ್ಷದಲ್ಲಿ ಯಾವುದೂ ಶಾಶ್ವತ ಇಲ್ಲ. ನಾನಂತು ರೇಸ್‌ನಲ್ಲಿ ಇಲ್ಲ. ಯಾವಾಗ ಅಧ್ಯಕ್ಷರ ನೇಮಕ ಮಾಡುತ್ತಾರೆ ಎನ್ನುವುದು ನನಗೆ ಸ್ಪಷ್ಟತೆ ಇಲ್ಲ. 

ಆಗಸ್ಟ್‌ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್‌

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿ ಬರಬೇಕು ಅದಕ್ಕಾಗಿ ದೆಹಲಿಗೆ ಹೋಗಿ ಬರುತ್ತೇನೆ ಎಂದರು. ದೆಹಲಿ ಜವಾಬ್ದಾರಿ ಮುಗಿದಿದೆ. ಮುಂಚೆಯೂ ಸಭೆ, ಅನಿವಾರ್ಯತೆ ಇರುವಾಗ ಮಾತ್ರ ದೆಹಲಿಗೆ ಹೋಗುತ್ತಿದ್ದೆ. ಉಳಿದಂತೆ ಜವಾಬ್ದಾರಿ ಕೊಟ್ಟ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದ್ದೆ. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪಕ್ಷ ನನ್ನನ್ನು ಮುಕ್ತ ಮಾಡಿರುವುದರಿಂದ ದೆಹಲಿಯಲ್ಲಿ ಏನೂ ಕೆಲಸ ಇಲ್ಲ. ಅಲ್ಲಿ ಕಚೇರಿ ತೆರವು ಮಾಡಿ ಬರುವುದಷ್ಟೇ ಬಾಕಿ ಇದೆ ಎಂದರು.

click me!