ಕಾಂಗ್ರೆಸ್ನ ಹೀನಾಯ ಸ್ಥಿತಿಗೆ ಬರಲು ಕಾರಣ ಏನು ಎನ್ನುವುದನ್ನು ಬಿಜೆಪಿ ರಾಷ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಚಿಕ್ಕಮಗಳೂರು (ಡಿ. 01): ದೇಶಕ್ಕೆ ಜೈಕಾರವನ್ನು ಬಿಜೆಪಿಯವವರು ಮಾತ್ರ ಹಾಕಬೇಕು ಎಂದು ಕಾಂಗ್ರೆಸಿಗರು ಭಾವಿಸಿದ್ದಾರೆ. ಹಾಗೆ ಅನ್ನಿಸಿದ್ದರಿಂದಲೇ ಕಾಂಗ್ರೆಸಿಗರು ಹೀನಾಯ ಸ್ಥಿತಿಗೆ ತಲುಪಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಬೀರೂರಿನಲ್ಲಿ ಮಾತನಾಡಿದ ಸಿ.ಟಿ. ರವಿ, ಇದರ ಜೊತೆಗೆ ಪಕ್ಷ ಸಂಘಟನೆ ಮಾಡದಿರುವುದು ಕೂಡ ಕಾಂಗ್ರೆಸ್ನ ಹೀನಾಯ ಸ್ಥಿತಿಗೆ ಕಾರಣ ಎಂದು ಎಂದರು.
ಬಿಎಸ್ ಯಡಿಯೂರಪ್ಪಗೆ ಮತ್ತೆ ಹೈಕಮಾಂಡ್ ಬಿಗ್ ಶಾಕ್...!
ಕಾಂಗ್ರೆಸ್ಸಿಗರು ಸಿದ್ಧಾಂತದ ಬದ್ಧತೆಗೆ ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಬೇಡಿ. ಹಾಗೆ ಕೂಗಿದರೆ ನೀವು ಬಿಜೆಪಿಯವರಾ? ಯಾಕೆ ಹಾಗೆ ಕೂಗುತ್ತೀರ? ಎಂದು ಕಾಂಗ್ರೆಸ್ ನಾಯಕರು ಕಾರ್ಯಕರ್ತರಿಗೆ ಗದರಿಸುತ್ತಾರೆ. ದೇಶಕ್ಕೆ ಜೈಕಾರ ಹಾಕೋದು ಅವರ ದೃಷ್ಟಿಯಲ್ಲಿ ಬಿಜೆಪಿಯವರು ಮಾತ್ರ ಮಾಡುವ ಮತ್ತು ಮಾಡಬೇಕಾದ ಕೆಲಸ. ಹಾಗೆ ಅನ್ನಿಸಿದ್ದರಿಂದ ಇಂದು ಹೀನಾಯ ಸ್ಥಿತಿಗೆ ಕಾಂಗ್ರೆಸಿಗರು ತಲುಪಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರು ಸೋತ ಕೂಡಲೇ ಇವಿಎಂ ಮೇಲೆ ಆರೋಪಿಸುತ್ತಾರೆ. ಆದರೆ, ನಾವು ಜನರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುತ್ತೇವೆ. ನಿರಂತರ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುತ್ತೇವೆ. ನಾವು ಸಂಘಟನೆ ಕಟ್ಟಿ, ಪಕ್ಷ ಬೆಳೆಸುವ ಕೆಲಸ ಮಾಡುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಕಿಡಿಕಾರಿದರು.