ಸಾರ್ವಕರ್ ಬಗ್ಗೆ ಎಸ್‌ಡಿಪಿಐ ಮಾತುಗಳು ಯಾವ ಹಂತದಲ್ಲಿಯೂ ಕ್ಷಮಿಸಲು ಅರ್ಹವಲ್ಲ: ಸಿ.ಟಿ.ರವಿ

By Govindaraj S  |  First Published Aug 14, 2022, 10:30 PM IST

ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದ ಎಂದ ಮಾತ್ರಕ್ಕೆ ಆತನ ಉಳಿದೆಲ್ಲವನ್ನೂ ಕ್ಷಮಿಸಬೇಕು ಎಂದರೆ ಅದು ಸಾಧ್ಯವಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. 


ಚಿಕ್ಕಮಗಳೂರು (ಆ.14): ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದ ಎಂದ ಮಾತ್ರಕ್ಕೆ ಆತನ ಉಳಿದೆಲ್ಲವನ್ನೂ ಕ್ಷಮಿಸಬೇಕು ಎಂದರೆ ಅದು ಸಾಧ್ಯವಿಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬ್ಯಾನರ್ ಹರಿದು ಹಾಕುವ ಮೂಲಕ ಆತನ ವ್ಯಕ್ತಿತ್ವ ಹರಿಯಬಹುದು ಅಂತಾ ನಾನು ಭಾವಿಸುವುದಿಲ್ಲ. ಟಿಪ್ಪು ಅಂದ ತಕ್ಷಣವೇ ನರಮೇಧ ಕಣ್ಣ ಮುಂದೆ ಬರುತ್ತೆ. ಆತ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಮಾಡಿದ ಅಂದರೆ ನೂರಕ್ಕೆ ನೂರು ಅಂಕ ಕೊಡಬಹುದು. 

ಟಿಪ್ಪು ಮತ್ತು ಅವರ ಅಪ್ಪ ಮೈಸೂರು ಮಹಾರಾಣಿಯನ್ನು ಸೆರೆಮನೆಯಲ್ಲಿಟ್ಟು ಮೋಸದಿಂದ ಸಾಮಾಜ್ಯವನ್ನು ಕಬಳಿಸಿದ್ದಕ್ಕೂ ಕೂಡ ಅಂಕ ಕೊಡಲೇ ಬೇಕಾಗುತ್ತೆ. ಅಫ್ಘಾನಿಸ್ತಾನದ ಸುಲ್ತಾನನನ್ನು ಭಾರತದ ಮೇಲೆ ಅಕ್ರಮಣ ಮಾಡು ಸಹಾಯ ಮಾಡ್ತೇನೆ ಅಂತಾ ಹೇಳಿದಕ್ಕೆ, ದೇಶದ್ರೋಹ, ರಾಜ್ಯ ದ್ರೋಹದ ಪಟ್ಟವನ್ನು ಕಟ್ಟಲೇ ಬೇಕಾಗುತ್ತದೆ ಎಂದರು. ಹಿಂದೂಗಳ ಮಾರಣ ಹೋಮ ಮಾಡಿದ್ದಕ್ಕೆ ರಕ್ತಪಿಪಾಸು ಅಂತಾ ಹೇಳಲೇ ಬೇಕಾಗುತ್ತೆ. ಕೊಡಗವರ ಮಾರಣ ಹೋಮ ಮಾಡಿದ್ದಕ್ಕೆ ನರಹಂತಕ ಅಂತಾ ಹೇಳದೆ ಬೇರೆನೂ ಹೇಳೋಕ್ಕಾಗುತೆ ? ಕೇರಳದಲ್ಲಿ ಮತಾಂತರ ಮಾಡಿದ್ದಕ್ಕೆ ಮತಾಂಧ ಅಂತಾ ಸರ್ಟಿಫಿಕೇಟ್ ಕೊಡಲೇ ಬೇಕಾಗುತ್ತೆ. ಬ್ರಿಟಿಷರ ವಿರುದ್ಧ ಹೋರಾಡಿದ ಕಾರಣಕ್ಕೆ ಇದೆಲ್ಲವನ್ನೂ ಕ್ಷಮಿಸಲು ಸಾಧ್ಯವಿಲ್ಲ ಎಂದರು.

Latest Videos

undefined

ಕಾಫಿನಾಡಲ್ಲಿ ಮಳೆಯ ಅಬ್ಬರಕ್ಕೆ ಸಾಲು-ಸಾಲು ಮನೆಗಳು ಕುಸಿತ

ದೇಶದಲ್ಲಿ ಇರಲು ಯೋಗ್ಯವಾದವರಲ್ಲ: ಶಿವಮೊಗ್ಗದಲ್ಲಿ ಸಾರ್ವಕರ್ ಭಾವ ಚಿತ್ರಕ್ಕೆ ಎಸ್‌ಡಿಪಿಐ ವಿರೋಧ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾರ್ವಕರ್ ಬಗ್ಗೆ ಎಸ್ಡಿಪಿಐ ಮಾತುಗಳು ಯಾವ ಹಂತದಲ್ಲಿಯೂ ಕ್ಷಮಿಸಲು ಅರ್ಹವಲ್ಲ. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಅನ್ನೋ ಗಾದೆ ಮಾತಿದೆ. ಸಾರ್ವಕರ್ ಅವರ ದೇಶ ಭಕ್ತಿ, ಕಾಳಜಿ, ಪ್ರಾಮಾಣಿಕತೆಗಳು ದೇಶ ವಿರೋಧಿ ಮನಸ್ಥಿತಿ ಇರುವ ಹಾಗೂ ದೇಶ ವಿಭಜಿಸುವ ಮಾನಸಿಕತೆ ಹೊಂದಿರುವ ಎಸ್‌ಡಿಪಿಐಗೆ ಅರ್ಥ ಅಗಲು ಸಾಧ್ಯವಿಲ್ಲ ಎಂದರು. ಎರಡು ಕರಿ ನೀರಿನ ಶಿಕ್ಷೆಗೆ ಒಳಗಾದ ದೇಶಭಕ್ತನನ್ನು ಹೀಗೆ ಅಪಮಾನಿಸುವ ಜನ ಈ ದೇಶದಲ್ಲಿ ಇರಲು ಯೋಗ್ಯವಾದವರಲ್ಲ. ಈ ತರಹದ ಮನಸ್ಥಿತಿಯನ್ನು ಮಟ್ಟ ಹಾಕಬೇಕು, ಅಂತಹ ನಿಟ್ಟಿನಲ್ಲಿ ಸರ್ಕಾರ ಅಲೋಚಿಸಬೇಕು ಎಂದರು.

ಸಿಎಂ ಬದಲಾವಣೆ ಕಪೋಲಕಲ್ಪಿತ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಿನಿಂದಲೆ ಸಿಎಂ ಬದಲಾವಣೆ ಚರ್ಚೆ ಶುರು ಮಾಡಿದ್ದರು. ನೀವು ಹೇಳಿದ ವರದಿಯೇ ಸತ್ಯವಾಗಿದ್ದರೆ ಇಷ್ಟೊತ್ತಿಗೆ 10 ಸಲ ಸಿಎಂ ಬದಲಾಗಬೇಕಿತ್ತು. ಇದು ಕಪೋಲ ಕಲ್ಪಿತ ವರದಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಚಿಕ್ಕಮಗಳೂರು: ಮಾಜಿ ಯೋಧನ ಜತೆ ಮಲೆನಾಡಿಗರ ತಿರಂಗಾ ಸಂಭ್ರಮ..!

ಸಿಎಂ ಬದಲಾವಣೆ ಎಂದು ಹೇಳುವ ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯ: ಅಮಾವಸ್ಯೆ-ಹುಣ್ಣಿಮಿಗೆ ಯಾರ್ಯಾರಿಗೋ ಏನೇನೋ ಆಗುತ್ತೆ. ಅವರು ಸರಿ ಇದ್ದಾರೆ ಅನ್ನೋಕಾಗುತ್ತಾ. ಅದು ಅವರಿಗೆ ಇರುವ ರೋಗ ಎಂದು ಚಿಕ್ಕಮಗಳೂರು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿಯಲ್ಲಿ ಸಿಎಂ ಬದಲಾವಣೆ ಎಂದು ಹೇಳುವ ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಕೆರೆಗೆ ಬಾಗಿಣ ಅರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೂರು ತಿಂಗಳಿಂದಲೂ ಹೇಳುತ್ತಿದ್ದಾರೆ. ಅವರು ಹೇಳಿದಂತೆ ಅವರ ವರದಿಯೇ ನಿಜವಾಗಿದ್ದರೆ ಇಷ್ಟು ಹೊತ್ತಿಗೆ 10 ಸಲ ಮುಖ್ಯಮಂತ್ರಿ ಬದಲಾಗಬೇಕಿತ್ತು ಎಂದು ಕಾಂಗ್ರೆಸ್ಸಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ. 

click me!