ವಿದೇಶಿಗರ ಸಹಾಯ ಕೇಳೋದು ದೇಶದ್ರೋಹದ ಕಾರ್ಯವಾಗಿದ್ದು, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದರು.
ಶಹಾಪುರ (ಮಾ.09): ಆಂಗ್ಲರು ನಮ್ಮ ದೇಶವನ್ನು 200 ವರ್ಷಗಳ ಕಾಲ ಕೊಳ್ಳೆ ಹೊಡೆದವರ ಬಳಿ ಸಹಾಯ ಕೇಳುವವರಿಗೆ ನಾಚಿಕೆಯಿಲ್ಲ. ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ನಮ್ಮ ದೇಶಕ್ಕೆ ಬಂದಿಲ್ಲ. ವಿದೇಶಿಗರ ಸಹಾಯ ಕೇಳೋದು ದೇಶದ್ರೋಹದ ಕಾರ್ಯವಾಗಿದ್ದು, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒತ್ತಾಯಿಸಿದರು.
ನಗರದ ಚರಬಸವೇಶ್ವರ ಗದ್ದುಗೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ದೇಶದ ಬಗ್ಗೆ ನಿಯತ್ತು ಇದ್ದರೆ ವಿದೇಶದಲ್ಲಿ ಭಾರತವನ್ನು ಟೀಕಿಸುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟಆಡಳಿತದಿಂದ ಭಾರತ ಸರ್ವ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್ಸಿನವರಿಗೆ ದೇಶಕ್ಕೆ ಬರುವ ಯೋಗ್ಯತೆ ಇಲ್ಲ. ಯಾವ ಮುಖ ಹೊತ್ತು ದೇಶಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದರು.
undefined
400 ರೂಪಾಯಿ ಕುಕ್ಕರ್‌ಗೆ 1400 ರೂಪಾಯಿ ಸ್ಟಿಕ್ಕರ್, ಮತದಾರರನ್ನ ಕುರಿ ಮಾಡಿದ್ರಾ ರಾಜೇಗೌಡ್ರು!
ಸಂಸತ್ತಿನಲ್ಲಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಅದೇ ನೋಡಿ ಭಾರತದಲ್ಲಿ ಮುಕ್ತ ಚರ್ಚೆಗೆ ಅವಕಾಶವಿಲ್ಲ ಎಂಬುದಾಗಿ ಹೇಳುತ್ತಾರೆ. ಸಾಕಷ್ಟು ಬಾರಿ ಪ್ರಧಾನ ಮಂತ್ರಿಯವರನ್ನು ನಿಂದಿಸಿದ್ದಾರೆ. ಮುಕ್ತ ಚರ್ಚೆಗೆ ಅವಕಾಶ ಇಲ್ಲ ಅಂದಿದ್ದರೆ ದೇಶದ ಪ್ರಧಾನಿ ಬಗ್ಗೆ ಮಾತಾಡೋಕೆ ಹೇಗೆ ಅವಕಾಶ ಸಿಗುತ್ತಿತ್ತು. ಆಫ್ಘಾನಿಸ್ತಾನದಲ್ಲಿ ಇದೇ ಮಾತನಾಡಿದ್ದರೆ ಅವರಿಗೆ ಗೊತ್ತಾಗುತ್ತಿತ್ತು. ಸಂವಿಧಾನಿಕ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡುವುದು ಕಾಂಗ್ರೆಸ್ ಕೆಲಸ. ಕಾಂಗ್ರೆಸ್ಸಿನವರ ಕೈಯಲ್ಲಿದ್ದರೆ ಮಾತ್ರ ಪ್ರಜಾಪ್ರಭುತ್ವ. ಇಲ್ಲದಿದ್ದರೆ ಅಲ್ಲ. ಅಧಿಕಾರ ಹಿಡಿಯಬೇಕೆಂಬ ಭ್ರಮೆಯಲ್ಲಿ ಏನೇನು ಮಾತನಾಡುವುದನ್ನು ದೇಶದ ಜನತೆ ಗಮನಿಸುತ್ತಿದ್ದಾರೆ ಎಂದರು.
ವಯಸ್ಸಿನಲ್ಲಿ, ಅನುಭವದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಿರಿಯರು. ಆದರೆ, ಅವರೊಬ್ಬ ಪವರ್‌ಲೆಸ್ ಅಧ್ಯಕ್ಷ. ಕುಟುಂಬ ರಾಜಕಾರಣದ ಹಿಡಿತದಲ್ಲಿದ್ದು, ಅವರ ತಾಳಕ್ಕೆ ಕುಣಿಯುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕುಕ್ಕರ್ ಬಾಂಬ್ ಬ್ಲಾಸ್ಟ್ ಹೆಚ್ಚಾಗುತ್ತವೆ. ಕುಕ್ಕರ್ ಬ್ಲಾಸ್ಟ್ ಮಾಡಿದವ ಇನೋಸೆಂಟ್ ಅಂತಾ ಡಿಕೆಶಿ ಹೇಳುತ್ತಾರೆ. ವಿದ್ವಂಸಕ ಕೃತ್ಯ ಎಸಗಿದವರು ಇವರ ದೃಷ್ಟಿಯಲ್ಲಿ ಇನೋಸೆಂಟ್. ಎಲ್ಲರಿಗೂ ಅಮಾಯಕರ ಪಟ್ಟಕಟ್ಟಿಬಿಡುಗಡೆ ಮಾಡೋದು ಗ್ಯಾರಂಟಿ ಎಂದು ಹರಿಹಾಯ್ದರು.
ಕಾಂಗ್ರೆಸ್ ಹಂಚುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ, ಫಾಲ್ಸ್ ಕಾರ್ಡ್. ಕಾಂಗ್ರೆಸ್ ಸದ್ಯ ಮುಳುಗುತ್ತಿರುವ ಹಡಗು. ಕಾಂಗ್ರೆಸ್ಸಿನವರಿಗೆ ನೀತಿ, ನಿಯತ್ತು ಇಲ್ಲದ ಕಾರಣಕ್ಕೆ ದೇಶದಲ್ಲಿ ಅಧೋಗತಿಗೆ ತಲುಪಿದೆ. ನಾನು ನನ್ನ ಕ್ಷೇತ್ರದಲ್ಲಿ ದತ್ತ ಜಯಂತಿಯಲ್ಲಿ ಆಚರಣೆಯಲ್ಲಿ ಮಾತ್ರ ಸೀರೆ ಹಂಚಿದ್ದೇನೆ. ಸೀರೆ ಸುಟ್ಟದ್ದು ನಮ್ಮ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಈ ರೀತಿ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಸೀರೆ ಸುಟ್ಟವ್ಯಕ್ತಿ ನಮ್ಮ ಪಕ್ಷದವನಲ್ಲ. ಕೈಗಳಲ್ಲಿ ಸೀರೆ ಹಿಡ್ಕೊಂಡು, ಫುಲ್ ಟೈಟಾಗಿ ಮಾತನಾಡಿದ್ದಾನೆ ಎಂದು ಸ್ಪಷ್ಟೀಕರಣ ನೀಡಿದರು.
ಸಚಿವ ವಿ. ಸೋಮಣ್ಣ, ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಉತ್ತರಿಸುವುದಿಲ್ಲ ಎಂದ ಅವರು, ಬಿಜೆಪಿ ಪಕ್ಷಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ ಮುಜುಗರ ತಂದಿರುವುದು ನಿಜ. ಆದರೆ, ನಾವು ಯಾರನ್ನು ರಕ್ಷಿಸುವುದಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತಿದೆ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಅನುಭವಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು. ಕಲ್ಯಾಣ ಕರ್ನಾಟಕದ ಅನುದಾನ 5000 ಕೋಟಿ ರು.ಗಳಿಗೆ ಹೆಚ್ಚಿಸಲಾಗಿದೆ. ಯಾವ ಪಕ್ಷಗಳಿಂದ ಆಗದ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಬಿಜೆಪಿ ಮಾಡಿದೆ.
ಉಜ್ವಲ ಭವಿಷ್ಯ ಬಯಸುವವರು ಮೋದಿಗೆ ಮತ ಹಾಕ್ತಾರೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
1,050 ಕೋಟಿ ರು.ಗಳ ವೆಚ್ಚದಲ್ಲಿ 4,500 ಸ್ಕಾಡಾ ಗೇಟ್‌ಗಳನ್ನು ಅಳವಡಿಸಿ ಕೊನೆ ಭಾಗದ ರೈತರಿಗೆ ನೀರು ಒದಗಿಸುವ ಕಾರ್ಯ ಮಾಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ 6 ಸಾವಿರ ಮತ್ತು ರಾಜ್ಯ ಸರ್ಕಾರದ 4 ಸಾವಿರ ರು.ಗಳು ಸೇರಿ 10 ಸಾವಿರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಂಸದ ರಾಜ ಅಮರೇಶ್ವರ ನಾಯಕ, ಶಾಸಕ ನರಸಿಂಹನಾಯಕ ರಾಜೂಗೌಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಗುರುಕಾಮಾ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ಇತರರಿದ್ದರು.