MLC Election: ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ: ಸತೀಶ ಸೈಲ್‌

By Kannadaprabha News  |  First Published Dec 2, 2021, 8:55 AM IST

*  ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆಳೆಯುತ್ತಿದೆ
*  ಧರ್ಮ ಯಾವ ಪಕ್ಷದ ಆಸ್ತಿಯೂ ಅಲ್ಲ: ದೇಶಪಾಂಡೆ
*  ಮನೆಯಿಂದ ಹೊರಗೆ ಬಂದ ಮೇಲೆ ಜಾತಿ ಪ್ರಭಾವ ಇರಬಾರದು
 


ಕಾರವಾರ(ಡಿ.02): ಬಿಜೆಪಿಯವರು ಹಿಂದುತ್ವ(Hindutva) ಎಂದು ಮತ ಕೇಳುತ್ತಿದ್ದಾರೆ. ಪರೇಶ ಮೇಸ್ತ ತಂದೆ ಕಾಂಗ್ರೆಸಿಗರು ಕೊಟ್ಟ ಹಣವನ್ನು ತಿರಸ್ಕರಿಸಿ ಹೇಳಿಕೆ ನೀಡಿದರು. ಆದರೆ ಹಣವನ್ನು ಮಾತ್ರ ಮರಳಿಸಲಿಲ್ಲ ಎಂದು ಮಾಜಿ ಶಾಸಕ ಸತೀಶ ಸೈಲ್‌(Satish Sail) ವ್ಯಂಗ್ಯವಾಡಿದ್ದಾರೆ.

ಕಾರವಾರದಲ್ಲಿ(Karwar) ಬುಧವಾರ ವಿಧಾನ ಪರಿಷತ್‌ ಅಭ್ಯರ್ಥಿ ಭೀಮಣ್ಣ ನಾಯ್ಕ(Bheemanna Naik) ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಹಿಂದುತ್ವ ಎಂದು ಹೇಳಿಕೊಂಡು ರಾಜಕಾರಣ ಮಾಡುವ(Politics) ಬಿಜೆಪಿ ಸರ್ಕಾರ(BJP) ಈ ಬಾರಿ ಪರೇಶ್‌ ಮೇಸ್ತಾ ತಂದೆಗೆ ಟಿಕೆಟ್‌ ನೀಡಬೇಕಿತ್ತು. ಆದರೆ ಅಂದು ಅವರನ್ನು ಬಳಸಿಕೊಂಡು ರಾಜಕಾರಣ ಮಾಡಿ ಇದೀಗ ಅವರ ಕುಟುಂಬ ಏನಾಗಿದೆ ಎಂಬುದನ್ನು ನೋಡುತ್ತಿಲ್ಲ ಎಂದು ಆರೋಪಿಸಿದರು.
ನಾವು ನಮ್ಮ ಮನೆಯಲ್ಲಿ ಅಲ್ಲಾ ಫೋಟೋ, ಏಸುವಿನ ಫೋಟೋ ಇಟ್ಟು ಪೂಜೆ ಮಾಡುವುದಿಲ್ಲ. ನಮ್ಮ ದೇವರ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಆಪಾದಿಸಿದರು.

Latest Videos

undefined

Karnataka Politics| ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ

ಸಾಗರ ಮಾಲಾ ಯೋಜನೆಯಿಂದ ಕಡಲತೀರಕ್ಕೆ ಧಕ್ಕೆಯಾಗುವುದರಿಂದ ಇದನ್ನು ಉಳಸಿಕೊಳ್ಳಲು ಈಗಾಗಲೇ ಸುಪ್ರೀಂಕೋರ್ಟ್‌ ಗೆ ಮೊರೆ ಹೋಗಲಾಗಿದೆ. ಆದರೆ ಎಲ್ಲಿಯೂ ಆಮದು ರಪ್ತಿಗೆ ವಿರೋಧ ಮಾಡಿಲ್ಲ. ಆದರೆ ಬಿಜೆಪಿ ಮಾತ್ರ ಈ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ ಎಂದು ಹೇಳಿದರು.

ಧರ್ಮ ಯಾವ ಪಕ್ಷದ ಆಸ್ತಿಯೂ ಅಲ್ಲ

ಧರ್ಮದ(Religion) ಬಗ್ಗೆ ಅಭಿಮಾನ ಇರಲಿ, ಅದು ತಪ್ಪಲ್ಲ. ಹಾಗಂತ ಇದು ಯಾವ ಪಕ್ಷದ ಆಸ್ತಿಯೂ ಅಲ್ಲ. ಆದರೆ ಈಚೆಗೆ ಬಿಜೆಪಿ ಪ್ರತಿ ಚುನಾವಣೆಯಲ್ಲೂ(Election) ಜಾತಿ(Caste), ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ(RV Deshpande) ಹೇಳಿದರು.

ನಗರದ ಖಾಸಗಿ ಹೊಟೇಲ್‌ ಆವರಣದಲ್ಲಿ ಬುಧವಾರ ವಿಧಾನ ಪರಿಷತ್‌(Vidhan Parishat) ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಪ್ರಚಾರ ನಡೆಸಿದ ಅವರು, ರಾಜಕೀಯ ಜೀವನದಲ್ಲಿ ಅದೆಷ್ಟೋ ಚುನಾವಣೆಯಲ್ಲಿ ಆಡಿದ್ದೇನೆ-ಆಡಿಸಿದ್ದೇನೆ. ಹಲವು ಕಡೆ ಸೋತು-ಗೆದ್ದಿದ್ದೇವೆ. ಆದರೆ ಎಲ್ಲಿಯೂ ಜಾತಿ, ಧರ್ಮದ ವಿಷಯದಲ್ಲಿ ರಾಜಕಾರಣ ಮಾಡಿಲ್ಲ. ಮನೆಯಿಂದ ಹೊರಗೆ ಬಂದ ಮೇಲೆ ಜಾತಿ ಪ್ರಭಾವ ಇರಬಾರದು. ಆದರೆ ಬಿಜೆಪಿ ಪ್ರತಿ ಚುನಾವಣೆಗೂ ಹಿಂದುತ್ವ ಎಂದು ಹೇಳಿಕೊಂಡು ಓಡಾಡುತ್ತಿದೆ ಎಂದು ಹೇಳಿದರು.

Jan Swaraj Yatra| 'ಪ್ರಿಯಾಂಕಾ ಎಂದರೆ ಹೆಣ್ಣಾ ಗಂಡಾ?: ಪ್ರತಾಪ್‌ ಸಿಂಹ

ಇನ್ನು ಬಿಜೆಪಿಗೆ ಪಂಚಾಯಿತಿ ವ್ಯವಸ್ಥೆಯನ್ನೆ ಸರಿಪಡಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಅವರಿಗೆ ಮತ ಕೇಳಲು ಅವಕಾಶ ಎಲ್ಲಿದೆ? ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಏನು ಕೇಳಿದರೂ ಇಲ್ಲ ಎಂದು ಹೇಳಿಲ್ಲ. ಆದರೆ ಇದೀಗ ಪ್ರತಿಯೊಂದಕ್ಕೂ ಕೊರೋನಾ(Coronavirus) ಕಾರಣ ನೀಡುತ್ತಿದ್ದಾರೆ. ಪ್ರವಾಹದ ಬಳಿಕ ಮುಖ್ಯಮಂತ್ರಿ ಬಂದು ಘೋಷಣೆ ಮಾಡಿದ ಯಾವ ಯೋಜನೆಗಳೂ ಸಂತ್ರಸ್ತರ ಕೈಗೆ ಸಿಗುತ್ತಿಲ್ಲ. ಬಿದ್ದ ಮನೆಗಳ ಪುನಃ ನಿರ್ಮಾಣಕ್ಕೆ ಸರ್ಕಾರದಿಂದ ಮನೆಗಳು ಸಿಗದೆ ಅರ್ಜಿಯ ಮೇಲೆ ಅರ್ಜಿ ಪಡೆದು ಜನರನ್ನು ಓಡಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕ ಸತೀಶ ಸೈಲ್‌, ನಮ್ಮದು ಬಡವರ ಪಕ್ಷ, ಬಡವರಿಗಾಗಿ ಹಲವು ಯೋಜನೆಗಳನ್ನು ತಂದಿದೆ. ಆದರೆ ಬಿಜೆಪಿಯವರು ಹಿಂದುತ್ವವನ್ನು ಮುಂದುಮಾಡಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಆಡಳಿತದಿಂದ ಅಭಿವೃದ್ಧಿ ಶೂನ್ಯ:

ಅಗತ್ಯ ವಸ್ತುಗಳ ಬೆಲೆ ಏರಿಕೆ, ಭ್ರಷ್ಟಾಚಾರ(Corruption), ಆಡಳಿತ ವೈಫಲ್ಯ, ರೈತ ಹಾಗೂ ಜನ ವಿರೋಧಿ ನೀತಿಗಳಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿವೆ. ಇವರಿಗೆ ಜನ ಏಕೆ ಆಶೀರ್ವಾದ ಮಾಡಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದರು.
 

click me!