ಬಿಜೆಪಿ ಸರ್ಕಾರ ರಾಜ್ಯ​ದಲ್ಲಿ ಎಲ್ಲಿಯೂ ಒಂದು ಮನೆ ಕೊಟ್ಟಿಲ್ಲ: ಈಶ್ವರ ಖಂಡ್ರೆ ಆರೋಪ

By Kannadaprabha News  |  First Published Apr 27, 2023, 8:51 AM IST

ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕು ವಷÜರ್‍ಗಳಲ್ಲಿ ವಸತಿ ರಹಿತರಿಗೆ ಸಿಂಗಲ್‌ ಮನೆ ನೀಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಆರೋಪಿಸಿದರು.


ಭಾಲ್ಕಿ (ಏ.27) : ರಾಜ್ಯದಲ್ಲಿ ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಳೆದ ನಾಲ್ಕು ವಷÜರ್‍ಗಳಲ್ಲಿ ವಸತಿ ರಹಿತರಿಗೆ ಸಿಂಗಲ್‌ ಮನೆ ನೀಡಲಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಆರೋಪಿಸಿದರು.

ತಾಲೂಕಿನ ಮದಕಟ್ಟಿಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿ, 2022ಕ್ಕೆ ಸೂರು ಇಲ್ಲದವರಿಗೆ ಸೂರು ಶಾಶ್ವತ ಸೂರು ಕೊಡುವುದಾಗಿ ಹೇಳಿದ ಬಿಜೆಪಿ ಭರವಸೆ ಹುಸಿಯಾಗಿದೆ. ವಸತಿ ರಹಿತ ಬಡ ಜನರಿಗೆ ಸೂರು ಕೊಡಬೇಕು. ಕ್ಷೇತ್ರವನ್ನು ಸಂಪೂರ್ಣ ಗುಡಿಸಲು ಮುಕ್ತ ಮಾಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ಮನೆ ಬಡವರಿಗೆ ನೀಡಿದ್ದೇನೆ. ಆದರೆ, ಬಿಜೆಪಿ ಪರಾಜಿತರು, ಕೇಂದ್ರದ ಸಚಿವ ಭಗವಂತ ಖೂಬಾ ನನ್ನ ವಿರುದ್ಧ ಷÜಡ್ಯಂತ್ರ ರೂಪಿಸಿ ಅರ್ಹರಿಗೆ ನೀಡಿದ ಮನೆಗಳನ್ನು ತಡೆದು ಬಡವರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡಿದ್ದಾರೆ.

Tap to resize

Latest Videos

undefined

Karnataka election 2023: ಮೇ 3ಕ್ಕೆ ಬೀದರ್‌ಗೆ ಪ್ರಿಯಾಂಕಾ ಗಾಂಧಿ : ಈಶ್ವರ ಖಂಡ್ರೆ

ಮೂರು ಅವಧಿ ಶಾಸಕನಾಗಿ ವಿವಿಧ ಯೋಜನೆಯಡಿ ಸಾವಿರಾರೂ ಕೋಟಿ ರು. ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಿದ್ದೇನೆ. ಬಿಜೆಪಿಯ ಹುಸಿ ಭರವಸೆಗಳನ್ನು ಜನ ನಂಬಬಾರದು ಮತ್ತೊಂದು ಅವಧಿಗೆ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ತಾಪಂ ಮಾಜಿ ಅಧ್ಯಕ್ಷೆ ರೇಖಾ ಪಾಟೀಲ್‌ ಸೇರಿದಂತೆ ಹಲವರು ಇದ್ದರು.

ಮದಕಟ್ಟಿಯಲ್ಲಿ ಅದ್ಧೂರಿ ಮೆರವಣಿಗೆ:

ಮದಕಟ್ಟಿಜಿಪಂ ಕ್ಷೇತ್ರಕ್ಕೆ ಪ್ರಚಾರ ನಿಮಿತ್ತ ಭೇಟಿ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಬಾಜೋಳಗಾ ಕ್ರಾಸ್‌ ಸಮೀಪ ಬರುತ್ತಿದ್ದಂತೆಯೇ ತೆರೆದ ವಾಹನದಲ್ಲಿ ಈಶ್ವರ ಖಂಡ್ರೆ ಅವರನ್ನು ನಿಲ್ಲಿಸಿ ಮದಕಟ್ಟಿಗ್ರಾಮದ ವರೆಗೂ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಸಾವಿರಾರೂ ಕಾರ್ಯಕರ್ತರು, ಅಭಿಮಾನಿಗಳು ಕಾಂಗ್ರೆಸ್‌ ಪರ ಘೋಷÜಣೆ ಕೂಗಿ ಜೋಶ್‌ ಹೆಚ್ಚಿಸಿದರು.

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ: ಒಟ್ಟು 3632 ಮಂದಿ ಕಣಕ್ಕೆ 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!