ಬಿಜೆಪಿ ಸರ್ಕಾರ ಆಂಜನೇಯ ದೇವರಿಗೆ ಅಪಮಾನ ಮಾಡಿದೆ: ವಿ.ಎಸ್‌. ಉಗ್ರಪ್ಪ

By Kannadaprabha News  |  First Published Jan 18, 2023, 8:06 AM IST

ಅಂಜನಾದ್ರಿ ಬೆಟ್ಟಅಭಿವೃದ್ಧಿಪಡಿಸದ ಬಿಜೆಪಿ ಸರ್ಕಾರ ಆಂಜನೇಯ ದೇವರು ಹಾಗೂ ಹನುಮನ ಭಕ್ತರಿಗೆ ಅಪಮಾನ ಮಾಡಿದೆ. ಆಂಜನಾದ್ರಿ ಬೆಟ್ಟಅಭಿವೃದ್ಧಿಗೆ ಸರ್ಕಾರ ಬಜೆಟ್‌ನಲ್ಲಿ .100 ಕೋಟಿ ಘೋಷಿಸಿದೆ. ಆದರೆ, ಇದುವರೆಗೆ ನಯಾಪೈಸೆ ಖರ್ಚು ಮಾಡಿಲ್ಲ.ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿಯಷ್ಟುಹೂಳು ತುಂಬಿದೆ. ಇನ್ನೂ ಸಮನಾಂತರ ಜಲಾಶಯ ನಿರ್ಮಿಸಿಲ್ಲ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ದೂರಿದರು.


ಹೊಸಪೇಟೆ (ಜ.18) : ಅಂಜನಾದ್ರಿ ಬೆಟ್ಟಅಭಿವೃದ್ಧಿಪಡಿಸದ ಬಿಜೆಪಿ ಸರ್ಕಾರ ಆಂಜನೇಯ ದೇವರು ಹಾಗೂ ಹನುಮನ ಭಕ್ತರಿಗೆ ಅಪಮಾನ ಮಾಡಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ದೂರಿದರು.

ಕಾಂಗ್ರೆಸ್‌ನ ಪ್ರಜಾಧ್ವನಿ(Prajadhwani) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಆಂಜನಾದ್ರಿ ಬೆಟ್ಟಅಭಿವೃದ್ಧಿ(Anjanadri temple)ಗೆ ಸರ್ಕಾರ ಬಜೆಟ್‌ನಲ್ಲಿ .100 ಕೋಟಿ ಘೋಷಿಸಿದೆ. ಆದರೆ, ಇದುವರೆಗೆ ನಯಾಪೈಸೆ ಖರ್ಚು ಮಾಡಿಲ್ಲ. ತುಂಗಭದ್ರಾ ಜಲಾಶಯದಲ್ಲಿ 37 ಟಿಎಂಸಿಯಷ್ಟುಹೂಳು ತುಂಬಿದೆ. ಇನ್ನೂ ಸಮನಾಂತರ ಜಲಾಶಯ ನಿರ್ಮಿಸಿಲ್ಲ. ಕಂಪ್ಲಿ, ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಮುಚ್ಚಿವೆ. .6 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡಿದ್ದಾರೆ. ಇದು 40 ಪರ್ಸೆಂಟ್‌ ಕಮಿಷನ್‌ಗಾಗಿ ಮಾಡಿರುವ ಕಾಮಗಾರಿ ಎಂದು ಆರೋಪಿಸಿದರು. ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಭೀಮಾ ನಾಯ್ಕ, ಜೆ.ಎನ್‌. ಗಣೇಶ, ಮುಖಂಡರಾದ ಕುರಿಶಿವಮೂರ್ತಿ, ವಿ. ಸೋಮಪ್ಪ ಮತ್ತಿತರರಿದ್ದರು.

Latest Videos

undefined

Koppala: ಹನುಮನ ಜನ್ಮಸ್ಥಳದಲ್ಲಿ ಹನುಮ ಮಾಲೆಗಳಿಗಿಲ್ಲ ಗೌರವ!

ಕಪ್ಪು ಹಣ ತಂದು,ಬಡವರ ಬ್ಯಾಂಕ್‌ ಖಾತೆಗೆ ಜಮೆ ಮಾಡಿಲ್ಲ:ಎಚ್‌.ಕೆ. ಪಾಟೀಲ್‌

ಪ್ರಧಾನಿ ನರೇಂದ್ರ ಮೋದಿ(Narendra Modi) ಕಪ್ಪು ಹಣ ತಂದು ಬಡವರ ಬ್ಯಾಂಕ್‌ ಖಾತೆಗೆ .15 ಲಕ್ಷ ಜಮೆ ಮಾಡುತ್ತೇವೆ ಎಂದಿದ್ದರು. ಜಮೆ ಮಾಡಿದ್ದಾರೆಯೇ? ನೋಟು ಅಮ್ಯಾನೀಕರಣ ಮಾಡಿದ್ದರೂ ಕಪ್ಪು ಹಣ ನಿಂತಿಲ್ಲ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ದೂರಿದರು. ಕಾಂಗ್ರೆಸ್‌(Congresss)ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದರು. ಯುವಕರಿಗೆ ಎಲ್ಲಿ ಉದ್ಯೋಗ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಕಲ್ಪಿಸಿದ್ದು, ಕಾಂಗ್ರೆಸ್‌ ಸರ್ಕಾರ. ಈ ಭಾಗದ 41 ಸ್ಥಾನಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಬೇಕೆಂಬ ಪಣತೊಡಬೇಕು ಎಂದರು.

Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಪ್ರಕಾಶ ರಾಠೋಡ್‌, ಮುಖಂಡರಾದ ಮಂಜುನಾಥ, ರಾಜಶೇಖರ ಹಿಟ್ನಾಳ್‌, ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ, ಮುಖಂಡರಾದ ದೀಪಕ್‌ ಸಿಂಗ್‌, ವೆಂಕಟರಾವ್‌ ಘೋರ್ಪಡೆ, ಕುರಿ ಶಿವಮೂರ್ತಿ, ಎಚ್‌ಎನ್‌ಎಫ್‌ ಇಮಾಮ್‌, ಎಲ್‌. ಸಿದ್ದನಗೌಡ, ಗುಜ್ಜಲ ರಘು, ಐಗೋಳ್‌ ಚಿದಾನಂದ ಮತ್ತಿತರರಿದ್ದರು.

click me!