Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

Kannadaprabha News   | Asianet News
Published : Nov 20, 2021, 02:43 PM ISTUpdated : Nov 20, 2021, 02:45 PM IST
Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಸಾರಾಂಶ

*   ಪೊಲೀಸರ ವಿರುದ್ಧ ಅಪಪ್ರಚಾರ ಸಲ್ಲದು  *   ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಗೃಹ ಸಚಿವ ಜ್ಞಾನೇಂದ್ರ *   ಮುಂಬರುವ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ ಎರಡು ಹೋಳಾಗಲಿದೆ 

ಯಾದಗಿರಿ(ನ.20): ಬಿಟ್‌ ಕಾಯಿನ್‌(Bitcoin) ಪ್ರಕರಣದಲ್ಲಿನ ಆರೋಪಿ, ಹ್ಯಾಕರ್‌(Hacker) ಶ್ರೀಕಿಗೆ(Shreeki) ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಮಕ್ಕಳೊಡನೆ ಸಂಪರ್ಕವಿತ್ತು. ಕಾಂಗ್ರೆಸ್‌ ಪಕ್ಷದ ಕೆಲವು ಪ್ರಭಾವಿಗಳ ಮಕ್ಕಳಿಗೆ ಶ್ರೀಕಿಯಿಂದ ಡ್ರಗ್‌ ಸಪ್ಲೈ ಆಗ್ತಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.

ವಿಧಾನ ಪರಿಷತ್ತಿನ ಚುನಾವಣಾ(Vidhan Parishat Election) ಪ್ರಚಾರ(Campaign) ಹಿನ್ನೆಲೆಯಲ್ಲಿ ಆಯೋಜನೆಗೊಂಡ ಜನ ಸ್ವರಾಜ್‌(JanSwaraj) ಸಮಾವೇಶ ಅಂಗವಾಗಿ, ಶುಕ್ರವಾರ ಸಂಜೆ ಯಾದಗಿರಿ ನಗರದ ವನಿಕೇರಿ ಲೇಔಟಿನಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಕಾಂಗ್ರೆಸ್‌(Congress) ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಾದಕ ದ್ರವ್ಯಗಳ ಸಾಗಾಟದ ದಂಧೆ(Drugs Mafia) ಮಾಡುತ್ತಿದ್ದ ಆತನನ್ನು ಯುಬಿ ಸಿಟಿಯಲ್ಲಿ ಬಂಧಿಸಿದಾಗ, ಕಾಂಗ್ರೆಸ್‌ ಮುಖಂಡರುಗಳ ಪುತ್ರರೂ ಅಲ್ಲಿದ್ದರು. ಆಗಿನ ದೂರಿನಲ್ಲಿ ಆತನ ಮೂರನೇ ಆರೋಪಿಯಾಗಿದ್ದರೂ 2018ರಲ್ಲಿ ಆಗ ಕಾಂಗ್ರೆಸ್‌ ಸರ್ಕಾರ ಏನೂ ಮಾಡಲಿಲ್ಲ. ಈಗ, ಶ್ರೀಕಿಯನ್ನು ಅರೆಸ್ಟ್‌ ಮಾಡಿದ್ದು ಬಿಜೆಪಿ(BJP) ಸರ್ಕಾರ. ಚಾರ್ಜ್‌ಶೀಟ್‌(Chargesheet) ಹಾಕಿ, ಅಂತಾರಾಷ್ಟ್ರೀಯ ಮಟ್ಟದ ಆರೋಪವಾಗಿದ್ದರಿಂದ ಇಂಟರ್‌ಪೋಲ್‌ಗೂ ಮಾಹಿತಿ ನೀಡಲಾಗಿದೆ. ಎಂದ ಅವರು, ಕಾಂಗ್ರೆಸ್‌ ಪಕ್ಷ ತನ್ನ ಅಧಿಕಾರದವಧಿಯಲ್ಲಿ ಏನೂ ಮಾಡದೇ, ಈಗ ಪಕ್ಷ ಹಾಗೂ ಪೊಲೀಸರ(Police) ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಪ್ರಿಯಾಂಕ ಖರ್ಗೆ(Priyank Kharge) ಅವರ ಆರೋಪದಲ್ಲಿ ಹುರುಳಿಲ್ಲ, ಕಾಂಗ್ರೆಸ್‌ ಸರ್ಕಾರವಿದ್ದಾಗ ಪ್ರಿಯಾಂಕ ಖರ್ಗೆ ಏನ್ಮಾಡ್ತಿದ್ರು ? ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಅನುಮಾನಿಸುತ್ತಿರುವ ಮೂಲಕ ಇಲಾಖೆಯ ಹೆಸರಿಗೆ ಕಳಂಕ ತರುವಂತಿದೆ ಎಂದು ಟೀಕಿಸಿದರು.

MLC Election ಜೆಡಿಎಸ್‌ ಅತಂತ್ರ - ಕಾದು ನೋಡುವ ತಂತ್ರ! ಅಚ್ಚರಿಯ ಅಭ್ಯರ್ಥಿಗಾಗಿ ಕಸರತ್ತು

ಡಿಕೆಶಿಗೇ ಖುದ್ದು ಹುಚ್ಚು ಹಿಡಿದಂತಿದೆ:

ತಮ್ಮನ್ನು ಹುಚ್ಚ ಎಂದು ಟೀಕಿಸಿರುವ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರಿಗೇ ಖುದ್ದು ಹುಚ್ಚು ಹಿಡಿದಿದೆ. ಏಕೆಂದರೆ, ಹುಚ್ಚು ಹಿಡಿದವರಿಗೆ ಉಳಿದೆಲ್ಲರೂ ಹುಚ್ಚರಂತೆ ಕಾಣಿಸುತ್ತಾರೇನೋ ಎಂಬಂತೆ, ಮಾನಸಿಕವಾಗಿ ಅಸ್ವಸ್ಥಗೊಂಡ ಡಿಕೆಶಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದೆ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತಿನ ಎದಿರೇಟು ನೀಡಿದ್ದಾರೆ.

ಶುಕ್ರವಾರ ಸಂಜೆ ಯಾದಗಿರಿ(Yadgir) ನಗರದ ವನಿಕೇರಿ ಲೇಔಟಿನಲ್ಲಿ ನಡೆದ ಜನ ಸ್ವರಾಜ್‌ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ತಮ್ಮ ವಿರುದ್ಧ ಟೀಕಿಸಿದ್ದ ಡಿಕೆಶಿಗೆ ಮಾತಿನಲ್ಲೇ ಎದಿರೇಟು ನೀಡಿದರು. ಜಲಿಯನ್‌ ವಾಲಾ ಬಾಗ್‌ ಎಂದು ಉದ್ಗಾರ ಮಾಡಲಿಕ್ಕಾಗದಷ್ಟೂ ಜ್ಞಾನದ ಕೊರತೆ ಹೊಂದಿರುವ ಡಿ.ಕೆ. ಶಿವಕುಮಾರ್‌, ಇಲ್ಲಸಲ್ಲದ ಟೀಕಿಸುತ್ತಿರುವುದು ವಿಷಾದನೀಯ ಎಂದರು.

ಕಾಂಗ್ರೆಸ್‌ ಶಾಪಗ್ರಸ್ಥ ಪಕ್ಷ: ಕಟೀಲ್‌ ವ್ಯಂಗ್ಯ

ಗಾಂಧೀಜಿ, ಅಂಬೇಡ್ಕರ್‌ ಹಾಗೂ ಗೋಮಾತೆ ಹೆಸರಲ್ಲಿ ಮತಗಳ ಪಡೆದ ಕಾಂಗ್ರೆಸ್‌ ನಡೆಸಿದ್ದ ಆಡಳಿತ ಯುಗ ಅಂತ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದ್ದು, ಹೊಸ ಶಕೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌(Nalin Kumar Kateel) ಟೀಕಿಸಿದ್ದಾರೆ.

ವಿಧಾನ ಪರಿಷತ್ತಿನ ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಆಯೋಜನೆಗೊಂಡ ಜನ ಸ್ವರಾಜ್‌ ಸಮಾವೇಶ ಅಂಗವಾಗಿ, ಶುಕ್ರವಾರ ಸಂಜೆ ಯಾದಗಿರಿ ನಗರದ ವನಿಕೇರಿ ಲೇಔಟಿನಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿ ಕಾಂಗ್ರೆಸ್‌ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಮಹಾತ್ಮಾ ಗಾಂಧೀಜಿ ಹೆಸರಲ್ಲಿ ಕಾಂಗ್ರೆಸ್‌ ಈವರೆಗೆ ಆಡಳಿತ ಮಾಡಿದೆ, ಅವರ (ಕಾಂಗ್ರೆಸ್‌) ಬಣ್ಣ ಬಯಲಾಗಿದೆ. ಆಂತರಿಕ ಕಲಹದಿಂದಾಗಿ ಮುಂಬರುವ ಚುನಾವಣೆಗೂ ಮುನ್ನವೇ, ಕಾಂಗ್ರೆಸ್‌ ಪಕ್ಷ ಎರಡು ಹೋಳಾಗಲಿದೆ ಎಂದು ಭವಿಷ್ಯ ನುಡಿದರು.

Karnataka Politics| ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ: ಯಡಿಯೂರಪ್ಪ

ಜನಪರ ಯೋಜನೆಗಳು, ಆರ್ಥಿಕ ಪರಿಸ್ಥಿತಿ ಸುಧಾರಣೆ ಮುಂತಾದವುಗಳಿಂದಾಗಿ ಜನರು ಪ್ರಧಾನಿ ಮೋದಿ ಆಡಳಿತ ಶ್ಲಾಘಿಸುತ್ತಿದ್ದರೆ, ಮೋದಿ ಸರ್ಕಾರವನ್ನು ವಿನಾಕಾರಣ ಟೀಕಿಸುತ್ತಿರುವ ಕಾಂಗ್ರೆಸ್‌ಗೆ ನೆಲೆಯಿಲ್ಲದಂತಾಗಿದೆ ಎಂದರು. ಕೋವಿಡ್‌ ಸೋಂಕು ತಡೆಗಟ್ಟುವಲ್ಲಿ ಹಾಗೂ ಲಸಿಕಾಕರಣ ವಿಚಾರದಲ್ಲಿ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದ ಇಲ್ಲಿನ ಯೋಜನೆಗಳು ಜಗತ್ತಿನಾದ್ಯಂತ ಶ್ಲಾಘಿಸಲ್ಪಿಟ್ಟಿವೆ ಎಂದ ಅವರು, ಲಸಿಕೆ ಟೀಕಿಸಿದವರೇ ಕಳ್ಳತನದಿಂದ ಹೋಗಿ ಲಸಿಕೆ ಹಾಕಿಸಿಕೊಂಡು ಬಂದರು ಎಂದು ಕಾಂಗ್ರೆಸ್‌ ನಾಯಕರುಗಳ ವಿರುದ್ಧ ವ್ಯಂಗ್ಯವಾಡಿದರು.

ದೇಶಕ್ಕೆ ಕಾಂಗ್ರೆಸ್‌ ಪಕ್ಷದ ಕೊಡುಗೆ ಎಂದರೆ, ಭಯೋತ್ಪಾದನೆ(Terrorism), ಭ್ರಷ್ಟಾಚಾರ(Corruption), ಬಡತನ ಹಾಗೂ ನಿರುದ್ಯೋಗ ಸಮಸ್ಯೆ ಎಂದು ಕಟಕಿಯಾಡಿದ ನಳೀನ್‌, ಕೇಂದ್ರದಲ್ಲಿ ಮೋದಿ(Narendra Modi) ಹಾಗೂ ರಾಜ್ಯದಲ್ಲಿ ಬೊಮ್ಮಾಯಿ(Basavaraj Bommai) ಆಡಳಿತವನ್ನು ಜನ ಮೆಚ್ಚಿದ್ದಾರೆ ಹಾಗೂ ಒಪ್ಪಿದ್ದಾರೆ. ಕಾಂಗ್ರೆಸ್‌ ಮುಕ್ತ ರಾಷ್ಟ್ರ ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿ ದೇಶವನ್ನು ಸುರಕ್ಷಿತರ ಕೈಗೆ ನೀಡಬೇಕಿದೆ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸಬೇಕಿದೆ ಎಂದು ಗ್ರಾಮ ಪಂಚಾಯತ್‌ ಸದಸ್ಯರಲ್ಲಿ ಮನವಿ ಮಾಡಿದ ಕಟೀಲ್‌, ಪ್ರತಿ ಸದಸ್ಯರಿಗೆ 10 ಸಾವಿರ ರು.ಗಳ ಗೌರವಧನ ಹಾಗೂ ಪಂಚಾಯ್ತಿಗೆ 2 ಕೋಟಿ ರು.ಗಳ ಅನುದಾನ ಇವೆಲ್ಲವನ್ನೂ ನೀಡಲಾಗುವುದು ಎಂದ ಅವರು, ವಿವಿಧ ವಸತಿ ಯೋಜನೆಗಳಡಿ 5 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ