ಸಿದ್ದರಾಮಯ್ಯ ದೊಡ್ಡ ಸಮಾವೇಶ ಮಾಡ್ತಾರೆ; ಬಳ್ಳಾರೀಲಿ ಬಾಣಂತಿಯರ ಸರಣಿ ಸಾವಾದ್ರೂ ಬರೋಕೆ ಪುರುಸೊತ್ತಿಲ್ಲ: ಶ್ರೀರಾಮುಲು ಕಿಡಿ

By Ravi Janekal  |  First Published Dec 6, 2024, 4:30 PM IST

ಸಿದ್ದರಾಮಯ್ಯ ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.


ಬಳ್ಳಾರಿ (ಡಿ.6): ಸಿದ್ದರಾಮಯ್ಯ ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವುದಕ್ಕೆ ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ನಡೆದ ಕಾಂಗ್ರೆಸ್ ಜನಕಲ್ಯಾಣ ಸಮಾವೇಶ ವಿಚಾರವಾಗಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಮಾವೇಶ ಜನರ ಬಗ್ಗೆ ಯಾವುದೇ ಕಾಳಜಿಯಿಂದ ಮಾಡಿದ್ದಲ್ಲ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಮಾಡುತ್ತಿರುವ ಕಸರತ್ತು. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ 700 ಕೋಟಿ ಅವ್ಯವಹಾರ ಮಾಡಿದ್ದಾರೆ. ಮುಡಾ ಸೈಟ್ ಹಂಚಿಕೆಯಲ್ಲೂ ಅವ್ಯವಹಾರ ಮಾಡಿದ್ದಾರೆ. ಈ ಬಗ್ಗೆ ED ರಿಪೋರ್ಟ್ ನೀಡಿದೆ. ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರಿಗೆ ಇಡಿ ಸಿಬಿಐ ತನಿಖೆ ಭೀತಿ ಶುರುವಾಗಿದೆ. ಹೀಗಾಗಿ ತನಿಖೆ ಮಾಡಬಾರದು ಎಂಬ ಕಾರಣಕ್ಕೆ ಶಕ್ತಿ ಪ್ರದರ್ಶನ ಸಮಾವೇಶ ಮಾಡಿದ್ದಾರೆ. ಆ ಮೂಲಕ ನನ್ನ ಹಿಂದೆ ಇಷ್ಟೊಂದು ಜನಶಕ್ತಿ ಇದೆ ಎಂದು ಸಿಬಿಐ, ಇಡಿಯವರು ಮುಟ್ಟೋಕೆ ಆಗೊಲ್ಲ ನನ್ನಿಂದ ಇಷ್ಟೊಂದು ಜನಬೆಂಬಲ ಇದೆ ಎಂದು ತೋರಿಸಲು ಸಮಾವೇಶ ಮಾಡಿದ್ದಾರೆ ಎಂದು ಟೀಕಿಸಿದರು.

Tap to resize

Latest Videos

'ಸಿದ್ದರಾಮಯ್ಯ ನನ್ನಿಂದ ಬೆಳೆದ' ಅಂತಾರೆ' ನಾನು ಇಲ್ಲಂದಿದ್ರೆ ದೇವೇಗೌಡರು ಸಿಎಂ ಆಗ್ತಿರಲಿಲ್ಲ: ಸಿಎಂ ವಾಗ್ದಾಳಿ

ಸಿಎಂ ಏನೋ ಸಮಾವೇಶ ಮಾಡ್ತಾರೆ, ದೊಡ್ಡ ದೊಡ್ಡ ಸಮಾವೇಶ ಮಾಡ್ತಾರೆ. ಆದ್ರೆ ಸಚಿವರು ಮಾತ್ರ ಬಾಣಂತಿಯರ ಸಾವಾದ್ರೂ ಬರುವಷ್ಟು ಪುರುಸೊತ್ತಿಲ್ಲ. ಜಿಲ್ಲಾ ಮಂತ್ರಿಯೂ ಸಹ ಬಂದಿಲ್ಲ. ಈ ಸರ್ಕಾರ ಸತ್ತ ಬಾಣಂತಿಯರ ಪರ ನಿಂತಿಲ್ಲ. ಕನಿಷ್ಟ ಸಾಂತ್ವನ ಹೇಳೋಕೆ ಪುರುಸೊತ್ತಿಲ್ಲದ ಮಂತ್ರಿಗಳು. ಅಲ್ಲಿ ಸಮಾವೇಶದಲ್ಲಿ ಶಕ್ತಿ ಪ್ರದರ್ಶನ ಮಾಡ್ತಾರೆ. ಬಡಜನರ ಬಗ್ಗೆ ಇವರಿಗೆ ಯಾವ ಕಾಳಜಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.

ಎಲ್ಲರೂ ಒಟ್ಟಾಗಿದ್ರೆ ಪಕ್ಷ ಗಟ್ಟಿ:

ಯತ್ನಾಳ್ ಸದನಕ್ಕೆ ಗೈರಾಗೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು. ಎಲ್ಲರೂ ಒಟ್ಟಾಗಿದ್ರೆ ಪಕ್ಷ ಗಟ್ಟಿಯಾಗುತ್ತದೆ. ಯತ್ನಾಳ್, ವಿಜಯೇಂದ್ರ ಎಲ್ಲರೂ ಸೇರಿದ್ರೆ ಮಾತ್ರ ಪಕ್ಷಕ್ಕೆ ಬಲ. ಹೈಕಮಾಂಡ್ ಮುಂದೆ ಯತ್ನಾಳ ಉತ್ತರ ಕೊಟ್ಟಿದ್ದಾರೆ. ಯತ್ನಾಳ ಬಿಜೆಪಿಯಲ್ಲಿ ಉಳಿಯಬೇಕು. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ  ಹೋರಾಟ ಮಾಡಲು ಭಿನ್ನಾಭಿಪ್ರಾಯ ಬದಿಗಿಟ್ಟು ಒಂದಾಗಬೇಕಿದೆ ಎಂದು ಸಲಹೆ ನೀಡಿದರು. ಇದೇ ವೇಳೆ ವಕ್ಫ್ ಆಸ್ತಿ ವಿರುದ್ಧ ಕಿಡಿಕಾರಿದ ಶ್ರೀರಾಮುಲು, ಜನರು, ರೈತರು, ಮಠ-ಮಂದಿರಗಳ ಆಸ್ತಿ ವಕ್ಫ್ ಆಸ್ತಿ ಆಗುತ್ತಿದೆ. ಇದೆಲ್ಲ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಉಪಟಳ ಶುರುವಾಗಿದೆ. ಜಮೀರ್ ಆಸ್ತಿ ದೊಡ್ಡದಿದೆ ಬೇಕಾದ್ರೆ ಅದನ್ನು ವಕ್ಫ್‌ಗೆ ಕೊಡಲಿ, ಡಿಕೆಶಿ ಆಸ್ತಿ ದೊಡ್ಡಮಟ್ಟದಲ್ಲಿದೆ ಅದ್ಯಾಕೆ ವಕ್ಫ್‌ಗೆ ಹೋಗಲ್ಲ ಎಂದು ತಿರುಗೇಟು ನೀಡಿದರು.

ಸಾಯೋವರೆಗೂ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇನೆ: ಜನಕಲ್ಯಾಣ ಸಮಾವೇಶದಲ್ಲಿ ಡಿಕೆಶಿ ಶಪಥ!

click me!