* ಕುತೂಹಲ ಕೆರಳಿಸಿದ ಗದಗ- ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ
* ಜನವರಿ ಕೊನೆಯ ವಾರದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯುವ ಸಾಧ್ಯತೆ
* ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು
ಶಿವಕುಮಾರ ಕುಷ್ಟಗಿ
ಗದಗ(ಜ.17): ಗದಗ-ಬೆಟಗೇರಿ(Gadag-Betageri) ನಗರಸಭೆ ಚುನಾವಣೆಯಲ್ಲಿ(City Muncipal Election) 14 ವರ್ಷಗಳ ನಂತರ ಬಿಜೆಪಿ(BJP) ಸ್ಪಷ್ಟಬಹುಮತ ಪಡೆದಿದ್ದು, ಅಧಿಕಾರ ಗದ್ದುಗೆ ಏರುವ ತಯಾರಿ ಮಾಡಿಕೊಂಡಿದೆ. ಆದರೆ ಬಹುಮತಕ್ಕೆ ಕೇವಲ 2 ಸ್ಥಾನಗಳನ್ನು ಕಡಿಮೆ ಪಡೆದಿರುವ ಕಾಂಗ್ರೆಸ್(Congress) ಸಹ ಗದ್ದುಗೆ ವಶಕ್ಕೆ ತೆರೆಮರೆಯ ಕಸರತ್ತು ನಡೆಸಿದೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿಯೇ ಕೇಳಿ ಬರುತ್ತಿವೆ.
undefined
ಡಿ. 27ರಂದು ಗದಗ- ಬೆಟಗೇರಿ ನಗರಸಭೆಯ 35 ವಾರ್ಡ್ಗಳಿಗೆ ಮತದಾನ ನಡೆದಿದ್ದು, ಡಿ. 30ರಂದು ನಡೆದ ಮತ ಎಣಿಕೆಯಲ್ಲಿ ಬಿಜೆಪಿ 18 ಸ್ಥಾನಗಳನ್ನು, ಕಾಂಗ್ರೆಸ್ 15 ಸ್ಥಾನಗಳನ್ನು ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. 18 ಸ್ಥಾನಗಳನ್ನು ಪಡೆದ ಬಿಜೆಪಿ ಸ್ಪಷ್ಟಬಹುಮತ ಹೊಂದಿದೆ. 2 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಪಕ್ಷೇತರರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿದ್ದು, ಅವರಲ್ಲಿ ಈಗಾಗಲೇ ಓರ್ವ ಮಹಿಳಾ ಸದಸ್ಯೆ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಇನ್ನೋರ್ವ ಪಕ್ಷೇತರರ ಕಾಂಗ್ರೆಸ್ ಬೆಂಬಲಿಸಿದಲ್ಲಿ ಕಾಂಗ್ರೆಸ್ ಒಟ್ಟು 17 ಸ್ಥಾನದ ಬಲದಿಂದ ಸ್ಪಷ್ಟಬಹುಮತಕ್ಕೆ ಕೇವಲ ಒಂದು ಸ್ಥಾನ ಮಾತ್ರ ಕಡಿಮೆ ಬೀಳುವ ಹಿನ್ನೆಲೆ ಕೊನೆಯ ಕ್ಷಣದಲ್ಲಿ ಏನಾದರೂ ಬೆಳವಣಿಗೆ ನಡೆದರೂ ಆಶ್ಚರ್ಯ ಪಡುವಂತಿಲ್ಲ.
Local Body Election Result: : ಬಿಜೆಪಿ ಪಾಲಿಗೆ ಅದೃಷ್ಟ ಲಕ್ಷ್ಮಿಯಾದ ಉಷಾ..!
ಮಹಿಳೆಯರಿಗೆ ಮೀಸಲು:
ಜನವರಿ ಕೊನೆಯ ವಾರದಲ್ಲಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ(Election of President-Vice President) ನಡೆಯುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ(woman) ಮೀಸಲಾಗಿದೆ.
ಶಾಸಕರು, ಸಂಸದರಿಗೆ ಮತದಾನದ ಹಕ್ಕು
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಗದಗ ಶಾಸಕರಾದ ಎಚ್.ಕೆ. ಪಾಟೀಲ(HK Patil) ಹಾಗೂ ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ(Shivakumar Udasi) ಮತದಾನದ ಹಕ್ಕನ್ನು ಹೊಂದಿದ್ದು, ಇಬ್ಬರು ತಮ್ಮ ತಮ್ಮ ಪಕ್ಷದ ಪರವಾಗಿ ಮತದಾನ ಮಾಡಿದರೂ ಬಿಜೆಪಿಗೆ 19 ಸ್ಥಾನ, ಕಾಂಗ್ರೆಸ್‌ಗೆ 18 ಸ್ಥಾನದ ಬಲ ಬಂದಂತಾಗುತ್ತದೆ. ಹಾಗಾಗಿ ಕಾಂಗ್ರೆಸ್ ಅಧಿಕಾರ ಹಿಡಿಯಬೇಕಾದಲ್ಲಿ ಒಬ್ಬರೇ ಒಬ್ಬ ಬಿಜೆಪಿ ಸದಸ್ಯರನ್ನು ಸೆಳೆದರೂ ಅವಳಿ ನಗರದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ.
ಬಿಜೆಪಿ ಸದಸ್ಯರು ಗೈರಾದಲ್ಲಿ ಅಪಾಯ
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದಲ್ಲಿ ಬಿಜೆಪಿಯ ಒಬ್ಬರ ಸದಸ್ಯರನ್ನು ಸೆಳೆಯಬೇಕಾದ ಅನಿವಾರ್ಯತೆ ಇರುವುದು ಒಂದೆಡೆಯಾದರೆ, ಇನ್ನೊಂದೆಡೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಬಿಜೆಪಿಯ ಒಬ್ಬರು ಅಥವಾ ಇಬ್ಬರು ಸದಸ್ಯರು ಗೈರಾದರೂ ಸಾಕು ಕಾಂಗ್ರೆಸ್ ಮತ್ತೆ ನಗರಸಭೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡುತ್ತದೆ. ವಿಪ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಪಾಲ್ಗೊಂಡು ಪಕ್ಷ ವಿರೋಧಿಯಾಗಿ ನಡೆದುಕೊಂಡರೆ ಅವರ ಸದಸ್ಯತ್ವ ರದ್ದಾಗುತ್ತದೆ. ಆದರೆ ವಿಪ್ ಸ್ವೀಕರಿಸಿ, ಮತದಾನದಿಂದ ದೂರ ಉಳಿದರೆ ಬಿಜೆಪಿಗೆ ತೀವ್ರ ತೊಂದರೆಯಾಗುವುದು ಪಕ್ಕಾ.
ಆಸ್ಸಾಂ ಪ್ರವಾಸ...
ಹಲವಾರು ವರ್ಷಗಳಿಂದ ನಂತರ ನಗರಸಭೆಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಯಾವುದೇ ಕಾರಣಕ್ಕೂ ಅಧಿಕಾರ ಕೈ ತಪ್ಪದಂತೆ ಎಚ್ಚರ ವಹಿಸುತ್ತಿದೆ. ಅದರ ಭಾಗವಾಗಿಯೇ ಎಲ್ಲ ನೂತನ ಸದಸ್ಯರು ಸೇರಿದಂತೆ ನಗರಸಭೆ ಚುನಾವಣೆಯಲ್ಲಿ ಶ್ರಮಿಸಿದವರನ್ನೆಲ್ಲಾ ದೂರದ ಅಸ್ಸಾಂಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಬಂದಿದೆ. ಆದರೆ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಣತಂತ್ರಕ್ಕೆ ಬಿಜೆಪಿ ಜಾಣ್ಮೆಯ ನಡೆ ಅನುಸರಿಸಿ ಅಧಿಕಾರ ಹಿಡಿಯುತ್ತಾ ಎನ್ನುವುದನ್ನು ಕಾಯ್ದು ನೋಡಬೇಕು.
Gadag-Betageri: ಒಗ್ಗಟ್ಟಿನಿಂದ ನಗರಸಭೆ ಗೆದ್ದುಕೊಂಡ ಬಿಜೆಪಿ: ಕಾಂಗ್ರೆಸ್‌ಗೆ ನಿರ್ಲಕ್ಷ್ಯಕ್ಕೆ ಪಾಠ
ನಗರಸಭೆ ಚುನಾವಣೆಯಲ್ಲಿ ಜನತೆ ನಮಗೆ ಕೊಟ್ಟ ತೀರ್ಪನ್ನು ಸ್ವಾಗತಿಸುತ್ತೇವೆ. ಪ್ರಬಲ ವಿರೋಧ ಪಕ್ಷವಾಗಿ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ. ಯಾರನ್ನು ಸೆಳೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಂತ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.
ನಮ್ಮ ಪಕ್ಷದ ಎಲ್ಲ ನೂತನ ಸದಸ್ಯರು ಸುಶಿಕ್ಷಿತರು, ಯುವಕರು, ಪಕ್ಷ ನಿಷ್ಠರಾಗಿದ್ದಾರೆ. ವಿರೋಧ ಪಕ್ಷದವರು ಏನೇ ಪ್ರಯತ್ನ ಮಾಡಿದರೂ ಅದಕ್ಕೆ ಅವರೇ ಅವಕಾಶ ನೀಡುವುದಿಲ್ಲ. ನಮಗೆ ಸ್ಪಷ್ಟವಾದ ಬಹುಮತವಿದೆ ಅಂತ ಗದಗದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದ್ದಾರೆ.