Karnataka election 2023: ಚಿಕ್ಕಮಗಳೂರಿನಲ್ಲಿ ಒಂದೇ ದಿನ ಬಿಜೆಪಿ- ಕಾಂಗ್ರೆಸ್‌ ಬೈಕ್‌ Rally!

Published : Feb 22, 2023, 08:13 AM ISTUpdated : Feb 22, 2023, 08:14 AM IST
Karnataka election 2023: ಚಿಕ್ಕಮಗಳೂರಿನಲ್ಲಿ ಒಂದೇ ದಿನ ಬಿಜೆಪಿ- ಕಾಂಗ್ರೆಸ್‌ ಬೈಕ್‌ Rally!

ಸಾರಾಂಶ

ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಮಾಡುವ ದಿನಾಂಕ ಸಮೀಪಿಸುತ್ತಿದೆ. ಇತ್ತ ರಾಜಕೀಯ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಒಂದೇ ದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ Rally ಡೆಯಿತು.

ಚಿಕ್ಕಮಗಳೂರು (ಫೆ.22) : ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಮಾಡುವ ದಿನಾಂಕ ಸಮೀಪಿಸುತ್ತಿದೆ. ಇತ್ತ ರಾಜಕೀಯ ಚಟುವಟಿಕೆಗಳು ಭರದಿಂದ ನಡೆಯುತ್ತಿವೆ. ಚಿಕ್ಕಮಗಳೂರು ನಗರದಲ್ಲಿ ಮಂಗಳವಾರ ಒಂದೇ ದಿನ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ Rally ನಡೆಯಿತು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ(JP Nadda) ಅವರು ಚಿಕ್ಕಮಗಳೂರಿಗೆ(Chikkamagaluru) ಆಗಮಿಸಿದ ಹಿನ್ನಲೆಯಲ್ಲಿ ಬಿಜೆಪಿ Rallyಯಲಿ ಆಯೋಜನೆ ಮಾಡಿದ್ದರೆ, ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಫೆ. 19 ರಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಶಾಸಕ ಸಿ.ಟಿ. ರವಿ ಅವರ ಆಪ್ತ ಎಚ್‌.ಡಿ.ತಮ್ಮಯ್ಯ ಇದೇ ದಿನದಂದು Rally ನಡೆಸಿದರು.

ಮೋದಿ ನಾಯಕತ್ವದಿಂದ ದೇಶದ ಗೌರವ ಹೆಚ್ಚಳ: ಜೆ.ಪಿ. ನಡ್ಡಾ

ಶಾಸಕ ಸಿ.ಟಿ.ರವಿ(CT Ravi) ನಿವಾಸದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಬೆಳಿಗ್ಗೆ 11 ಗಂಟೆಗೆ ಬೈಕ್‌ Rallyಯಲ್ಲಿ ಹೊರಟರು. ಈ Rallyಯಲಿ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ, ಅಂಚೆ ಕಚೇರಿ ರಸ್ತೆಯ ಮೂಲಕ ಐಜಿ ರಸ್ತೆಯಲ್ಲಿ ಮುಕ್ತಾಯಗೊಂಡಿತು.

ಇತ್ತ ಎಚ್‌.ಡಿ. ತಮ್ಮಯ್ಯ ಹಾಗೂ ಬೆಂಬಲಿಗರು ಬೇಲೂರು ರಸ್ತೆಯ ಕರ್ತಿಕೆರೆ ಗ್ರಾಮದಿಂದ 12.15ಕ್ಕೆ ಬೈಕ್‌ ರಾರ‍ಯಲಿಯಲ್ಲಿ ಹೊರಟರು. ಈ ರಾರ‍ಯಲಿ ಆಜಾದ್‌ ಪಾರ್ಕ್, ಐಜಿ ರಸ್ತೆ ಮೂಲಕ ಟೌನ್‌ ಕ್ಯಾಂಟಿನ್‌ ಸರ್ಕಲ್‌, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂಜಿ ರಸ್ತೆ, ಅಂಚೆ ಕಚೇರಿ ರಸ್ತೆಯ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಚೇರಿ ತಲುಪಿತು.ಬಳಿಕ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್‌, ತಮ್ಮಯ್ಯ ಅವರನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಕೆ. ಮಹಮದ್‌, ಮಂಜೇಗೌಡ, ಶಾದಾಬ್‌, ಖಲಂದರ್‌, ಜಾವೀದ್‌, ತನೋಜ್‌ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಎಲೆಕ್ಷನ್‌ ಚಿತ್ರಣ:

ಚಿಕ್ಕಮಗಳೂರಿನಲ್ಲಿ ಮಂಗಳವಾರ ನಡೆದ ರಾಜಕೀಯ ಪಕ್ಷಗಳ ರಾರ‍ಯಲಿಗಳು ಚುನಾವಣೆ ಪ್ರಚಾರದ ಚಿತ್ರಣ ಮರುಕಳಿಸುವಂತೆ ಮಾಡಿತು. ಬೈಕ್‌ ರಾರ‍ಯಲಿಯಲ್ಲಿ ಭಾ ಗವಹಿಸಿದ್ದ ಜನರ ನೋಡಿದರೆ, ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ನಾಯಕರು ಶಕ್ತಿ ಪ್ರದರ್ಶನ ಮಾಡುವಂತಿತ್ತು. ನೂರಾರು ಬೈಕ್‌ಗಳು ರಾರ‍ಯಲಿಯಲಿ ್ಲ ಪಾಲ್ಗೊಂಡಿದ್ದವು. ಪ್ರಮುಖ ರಸ್ತೆಗಳಲ್ಲಿ ಚುನಾವಣಾ ಪ್ರಚಾರದ ಕಾವು ಕಂಡು ಬಂತು.

ಲಿಂಗಾಯಿತ ಮಠಾಧೀಶರ ಭೇಟಿ

ಶೃಂಗೇರಿಯಲ್ಲಿ ವಾಸ್ತವ್ಯ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌(Arun singh), ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌(Nalin kumar kateel) ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಶಾಸಕ ಸಿ.ಟಿ. ರವಿ ಅವರ ನಿವಾಸದಲ್ಲಿ ಮಂಗಳವಾರ ವ್ಯವಸ್ಥೆ ಮಾಡಲಾಗಿದ್ದ ಉಪಹಾರಕ್ಕೆ ಬೆಳಿಗ್ಗೆ 10ಕ್ಕೆ ಬಿಜೆಪಿ ನಾಯಕರು ಸಿ.ಟಿ. ರವಿ ನಿವಾಸಕ್ಕೆ ಆಗಮಿಸಿದರು.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಿಂಗಾಯಿತ ಸಮುದಾಯದ ಮಠಾಧೀಶರಾದ ಚಿಕ್ಕಮಗಳೂರಿನ ಬಸವತತ್ವ ಪೀಠದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ, ಹುಲಿಕೆರೆಯ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಹ ಆಗಮಿಸಿದರು.

ಲಿಂಗಾಯಿತ ಸಮುದಾಯದ ಎಚ್‌.ಡಿ.ತಮ್ಮಯ್ಯ, ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್‌ಗೆ ಸೇರಿದ್ದಾರೆ. ಇತ್ತ ಲಿಂಗಾಯಿತ ಮಠಾಧೀಶರು ಬಿಜೆಪಿ ಮುಖಂಡರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಉಂಡ ಮನೆಗೆ ದ್ರೋಹ

ರಾಣಿ ಚನ್ನಮ್ಮನಿಗೆ ಮಲ್ಲಪ್ಪ ಶೆಟ್ಟಿಮೋಸ ಮಾಡಿದಂತೆ ಕೆಲವರು ರಾಜಕೀಯದಲ್ಲೂ ಮೋಸ ಮಾಡಬೇಕೆನ್ನುವ ಜನ ಇರುತ್ತಾರೆ. ಎಲ್ಲ ಅನುಭವಿಸಿ, ಉಂಡ ಮನೆಗೆ ದ್ರೋಹ ಬಗೆಯುವ ಜನ ಇದ್ದಾರೆ. ಎಲ್ಲಿಯವರೆಗೆ ನಿಮ್ಮ ಪ್ರೀತಿಯ ರಕ್ಷಾ ಕವಚ ಇರುತ್ತದೊ ಅಲ್ಲಿಯವರೆಗೂ ಯಾರೂ ಏನನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಆಶೀರ್ವಾದ ನಮ್ಮನ್ನು ಕಾಪಾಡುತ್ತದೆ ಎಂದರು.

Chikkamagaluru: ಹಳೇ ದೋಸ್ತಿಗಳ ಹೊಸ ಜಗಳ, 18 ವರ್ಷದ ಆಪ್ತಮಿತ್ರ ತಮ್ಮಯ್ಯ ವಿರುದ್ಧ ತಿರುಗಿಬಿದ್ದ ಸಿ.ಟಿ. ರವಿ

ರಿಪೋರ್ಟ್ ಕಾರ್ಡ್‌ನೊಂದಿಗೆ ನಿಮ್ಮ ಮನೆಗೆ ಬರುತ್ತೇವೆ. ನಮ್ಮ ಕೆಲಸದ ಸಮಗ್ರ ವರದಿ ನಿಮ್ಮ ಮುಂದಿಡುತ್ತೇವೆ. ನಮ್ಮ ಒಳ್ಳೆ ಕೆಲಸಕ್ಕೆ ಒಳ್ಳೆ ನಡವಳಿಕೆಗೆ ಮಾರ್ಕ್ಸ್ ಕೊಡಬೇಕಾದವರು ನೀವು ಅದನ್ನು ಕೊಡುತ್ತೀರೆಂಬ ವಿಶ್ವಾಸವಿದೆ.

- ಸಿ.ಟಿ. ರವಿ

ಸಿ.ಟಿ.ರವಿ ಆತ್ಮವನ್ನು ಮುಟ್ಟಿನೋಡಿಕೊಳ್ಳಲಿ

ಸಿ.ಟಿ.ರವಿ ಒಮ್ಮೆ ಅವರ ಆತ್ಮವನ್ನು ಮುಟ್ಟಿನೋಡಿಕೊಳ್ಳಲಿ ಅವರು ನನ್ನ ಜೊತೆ ಬಹಳ ವಿಷಯ ಹಂಚಿಕೊಂಡಿದ್ದಾರೆ. ನಾನು ಅವನ್ನೆಲ್ಲಾ ಈಗ ಹೇಳಲ್ಲ, ಅವರು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ.

2004, 2008, 2018ರಲ್ಲಿ ಯಾರ ಹೆಸರು ಹೇಳಿಕೊಂಡು ನೀವು ಗೆದ್ದದ್ದು, ನೀವು ಯಡಿಯೂರಪ್ಪ(Yadiyurappa) ಹೆಸರು ಹೇಳಿಕೊಂಡು ಗೆದ್ದು, ಈಗ ನೀವು ಯಾರನ್ನ ಲೇವಡಿ ಮಾಡ್ತಿರೋದು.ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಈ ರಾಜ್ಯ ಕಂಡ ಮಹಾನ್‌ ನಾಯಕರು, ಅವರ ಬಗ್ಗೆ ಮಾತನಾಡಬೇಡಿ ಎಂದು ಅಂದೂ ಹೇಳಿದ್ದೆ, ಇಂದೂ ಹೇಳ್ತೀನಿ, ಈ ಮೂವರು ನಾಯಕರ ಬಗ್ಗೆ ಕೇವಲವಾಗಿ ಏಕೆ ಮಾತನಾಡ್ತೀರಾ, ಯಡಿಯೂರಪ್ಪರ ಹೆಸರೇಳಿ ಗೆದ್ದಿಲ್ಲ ಎಂದು ಹೇಳಲಿ ನೋಡೋಣ ಯಡಿಯೂರಪ್ಪ, ಕಾರ್ಯಕರ್ತರನ್ನ ಯಾವುದಕ್ಕೆ ಹೋಲಿಸಿದ್ದೀರಾ ನೀವು.

ಮೊನ್ನೆ ನಿಮ್ಮ ಫಾಮ್‌ರ್‍ ಹೌಸ್‌ಸಭೆಯಲ್ಲಿ ಕಾರ್ಯಕರ್ತರನ್ನ ಯಾವುದಕ್ಕೆ ಹೋಲಿಸಿದ್ದೀರಾ, ಕತ್ತೆ ಅಡ್ಡೆ ಹೊತ್ಕಂಡು ಹೋಗ್ತಿದ್ರೆ ಕತ್ತೆಗೆ ಗೌರವ ಕೊಡ್ತಾರೆ, ಅಡ್ಡೆಗಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ರಿ ನಮ್ಮ ಕಾರ್ಯಕರ್ತರಿಗೂ ಅದೇ ರೀತಿ ಹೇಳಿದ್ದೀರಾ, ಕಾರ್ಯಕರ್ತರಿಗೆ ಧೈರ್ಯ ಇಲ್ಲ ಸುಮ್ಮನೇ ಕೂತಿದ್ದಾರೆ.

ಈ ಊರಲ್ಲಿ ಪ್ರಜಾಪ್ರಭುತ್ವ ಒಮ್ಮೆ ಗೆಲ್ಲಲಿ ಓರ್ವ ಅಧಿಕಾರಿ, ಗುತ್ತಿಗೆದಾರ ಈ ಊರಿಗೆ ಬರಲು ರೆಡಿ ಇಲ್ಲ... ಯಾಕೆ ಎಷ್ಟುಗುತ್ತಿಗೆದಾರರು ಊರು ಬಿಟ್ಟಿದ್ದಾರೆ, ನಮ್ಮ ಹಳೇ ನಾಯಕರು ಸಾರ್ವಜನಿಕವಾಗಿ ಬರಲಿ ಉತ್ತರ ನೀಡುತ್ತೇನೆ.

- ಎಚ್‌.ಡಿ. ತಮ್ಮಯ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್