ರಾಜ್ಯದ ಜನತೆಗೆ ಮೀಸಲಾತಿ ನಾಮ ಹಾಕಿದ ಬಿಜೆಪಿ: ಮಧು ಬಂಗಾರಪ್ಪ ಆರೋಪ

By Sathish Kumar KH  |  First Published Apr 5, 2023, 6:41 PM IST

ಅನುಷ್ಠಾನಗೊಳ್ಳದ ಮೀಸಲಾತಿ ತುಪ್ಪವನ್ನು ಬಿಜೆಪಿ ಜನರ ಮೂಗಿಗೆ ಸವರುತ್ತಿದೆ
ಜಾತಿ ಧರ್ಮಗಳ ಜಗಳದ ಮೂಲಕ ಸಮಾಜ ಹೊಡೆಯುತ್ತಿದೆ


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.05): ಚುನಾವಣೆಗಾಗಿ ಬಿಜೆಪಿ ಮೀಸಲಾತಿಯನ್ನು ನೀಡುತ್ತಿದ್ದು, ಅದು ಅನುಷ್ಠಾನಗೊಳ್ಳುವುದಿಲ್ಲ. ಆದರೆ ಚುನಾವಣೆ ಹೊಸ್ತಿನಲ್ಲಿ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾನ, ಮರ್ಯಾದೆ ಇಲ್ಲದ ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಮಧು ಎಸ್ ಬಂಗಾರಪ್ಪ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗದ ವಿಭಾಗದ ಸಮಾವೇಶದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಮೀಸಲಾತಿಯನ್ನು ನೀಡಬೇಕಾದರೆ ಜಾತಿ ಜನಗಣತಿಗಳ ವರದಿಯನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಜಾರಿ ಮಾಡಬೇಕಾಗುತ್ತದೆ. ಆದರೆ ಅದ್ಯಾವುದನ್ನು ಪರಿಗಣಿಸದೆ ಕೇವಲ ಚುನಾವಣೆಗಾಗಿ ಮೀಸಲಾತಿ ನೀಡುವುದಾಗಿ ಘೋಷಿಸುತ್ತಾ ಸಾಮಾಜಿಕ ಅನ್ಯಾಯ ಎಸಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Tap to resize

Latest Videos

undefined

ನನ್ನ ಬೆಂಬಲ ಸಿಎಂ ಬೊಮ್ಮಾಯಿಗೆ: ಕಿಚ್ಚ ಸುದೀಪ ಬಹಿರಂಗ ಹೇಳಿಕೆ

 

ರಾಜ್ಯದ ಫಲಿತಾಂಶ ದೇಶಕ್ಕೆ ಮಾದರಿ: ಸ್ವಾತಂತ್ರ್ಯದ ಕಾಲದಿಂದಲೂ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸವನ್ನು ಕಾಂಗ್ರೆಸ್ ಮಾತ್ರವೇ ಮಾಡಿದೆ. ಆದರೆ ಬಿಜೆಪಿ ಜನರಿಗೆ ಮೂರು ನಾಮ ಹಾಕಿ ಜಾತಿ, ಧರ್ಮಗಳ ನಡುವೆ ಜಗಳ ತಂದು ಹಾಕಿ, ಅಣ್ಣ ತಮ್ಮಂದಿರ ರೀತಿ ಇದ್ದ ಜನರನ್ನು ಹೊಡೆದು ಹಾಕಿ ದೇಶದಲ್ಲಿ ಸಮಾಜವನ್ನೇ ಹೊಡೆದು ಹಾಕಿದೆ. ಇದಕ್ಕೆ ಜನರು ಮುಂದೆ ಸರಿಯಾದ ಉತ್ತರ ನೀಡಲಿದ್ದಾರೆ. ಅದು ಈ ರಾಜ್ಯದಿಂದಲೇ ಆರಂಭವಾಗಲಿದ್ದು, ಇದು ದೇಶಕ್ಕೆ ಪಾಠವಾಗಲಿದೆ ಎಂದು ಎಚ್ಚರಿಸಿದರು. 

ಇಡಿ- ಐಟಿ ದಾಳಿ ಮೂಲಕ ಬೆದರಿಕೆ: ಇನ್ನು ಕಾಂಗ್ರೆಸ್ ನಾಯಕರುಗಳ ಮನೆ ಮೇಲೆ ಐಟಿ ದಾಳಿ ಆಗಲಿದೆ ಎನ್ನುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಹೇಳಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ ಅವರು ಬಿಜೆಪಿಯವರು ತಮ್ಮ ತಲೆಯಲ್ಲಿ ಮಾತ್ರವೆ ಇಂಟೆಲಿಜೆನ್ಸಿ ರಿಪೋರ್ಟ್ ಇದೆ ಎಂದುಕೊಂಡಿದ್ದಾರೆ. ಆದರೆ ನಮ್ಮ ಜೇಬಿನಲ್ಲೂ ಇಂಟೆಲಿಜೆನ್ಸಿ ವರದಿ ಇದೆ ಇನ್ನುವುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು. ಆದರೆ ಐಟಿ, ಇಡಿ ಸಂಸ್ಥೆಗಳಿಗೆಲ್ಲಾ ನಾವು ಹೆದರುವುದಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಚುನಾವಣೆಗಳ ಸಂದರ್ಭದಲ್ಲಿ ಈ ರೀತಿಯ ದಾಳಿ ಮಾಡಿಸುವುದು ನಮ್ಮ ನಾಯಕರನ್ನು ಕಟ್ಟಿಹಾಕಿ ಕೂರಿಸುವುದು ಬಿಜೆಪಿಯವರ ಕೆಟ್ಟ, ದುರ್ಬುದ್ಧಿ ಎನ್ನುವುದು ಗೊತ್ತೇ ಇದೆ ಎಂದರು.

ಸರ್ಕಾರದ ಆಸ್ತಿ ಮಾರಾಟ ಮಾಡುವ ಬಿಜೆಪಿ: ಬಿಜೆಪಿ ಎಂದರೆ ಜನತಾ ಪಾರ್ಟಿ ಅಲ್ಲ, ಬಿಜೆಪಿ ಎಂದರೆ ಬ್ಯುಜಿನೆಸ್ ಪಾರ್ಟಿ. ಅವರನ್ನು ಜನರು ಆಯ್ಕೆ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರವಲ್ಲ. ವ್ಯಾಪಾರ ಮಾಡಿ ಅಧಿಕಾರಕ್ಕೆ ಬಂದವರು. ಈಗಲೂ ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿ ಮಜಾ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಸಿದ್ದಾಪುರ ಪಟ್ಟಣದ ಅಯ್ಯಪ್ಪ ದೇವಸ್ಥಾನದ ಬಳಿಯಿಂದ ನೂರಾರು ಜನರು ಮೆರವಣಿಗೆ ನಡೆಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ನೂರಾರು ಕಾಂಗ್ರೆಸ್ ಪರವಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ಸ್ವರ್ಣ ಮಾಲ ಸಭಾಂಗಣದಲ್ಲಿ ಸಮಾವೇಶ ನಡೆಯಿತು. 

ಕೊಟ್ಟಮಾತು ಉಳಿಸಿಕೊಳ್ಳುವ ನಾಯಕ ಎಚ್‌ಡಿಕೆ: ರೇವಣ್ಣ ಗುಣಗಾನ

ಸಮಾವೇಶದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ನಿಮ್ಮ ಮನೆ ಬಾಗಿಲಿನಲ್ಲಿ ಹೋರಾಟ ಮಾಡುತ್ತಾ ಬೆಳೆದವನು ನಾನು, ಮುಂದೆಯೂ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಬಿಜೆಪಿಯನ್ನು ತೊಲಗಿಸಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ಹಲವರು ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

click me!