ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಪ್ರತಾಪ್ ಗೌಡ ಪಾಟೀಲ್| ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ| ಅಂಕಲಿಮಠ, ಮಸ್ಕಿಯ ಗಚ್ಚಿನಮಠದಲ್ಲಿ ದರ್ಶನ ಪಡೆದ ಪ್ರತಾಪಗೌಡ|
ರಾಯಚೂರು(ಮಾ.24): ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು(ಬುಧವಾರ) ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸುದಕ್ಕೂ ಮೊದಲು ಪ್ರತಾಪ್ ಗೌಡ ಪಾಟೀಲ್ ಅವರು ಅಂಕಲಿಮಠ, ಮಸ್ಕಿಯ ಗಚ್ಚಿನಮಠದಲ್ಲಿ ದರ್ಶನವನ್ನ ಪಡಿದಿದ್ದಾರೆ ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಬಿಜೆಪಿ ಕಚೇರಿ ಆಗಮಿಸಿ ಮುಖಂಡರೊಂದಿಗೆ ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಪ್ರಾರಂಭಿಸಿರುವ ಆರ್.ಓ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಹಾಗೂ ಲಿಂಗಸುಗೂರಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ ಅವರಿಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.
undefined
ಮಸ್ಕಿ ಉಪಚುನಾವಣೆ ಕದನ: ಆರಂಭದಲ್ಲಿ ಬಿಜೆಪಿಗೆ ಬಿಗ್ ಶಾಕ್!
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೇ. 29 ರಂದು ಕಾರ್ಯಕರ್ತರೊಂದಿಗೆ ಆಗಮಿಸಿ ಮತ್ತೊಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಮಾ. 23 ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಮಾ.30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.3 ನಾಮಪತ್ರ ವಾಪಸ್ ಕೊನೆಯ ದಿನವಾಗಿದ್ದು, ಏ.17 ಮತದಾನ ನಡೆಯಲಿದೆ. ಮೇ.2ಕ್ಕೆ ಫಲಿತಾಂಶ ಹೊರಬೀಳಲಿದೆ.