RR ನಗರದಲ್ಲಿ ಗೆಲುವು ಸಾಧಿಸಿದ ಮುನಿರತ್ನ: ಕಾಂಗ್ರೆಸ್ ತಂತ್ರಗಳು ಉಲ್ಟಾ..!

By Suvarna News  |  First Published Nov 10, 2020, 2:10 PM IST

ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಭಾರೀ ಮುಖಭಂಗವಾಗಿದೆ.


ಬೆಂಗಳೂರು, (ನ.10) : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆಯ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸುತ್ತ ಮುನ್ನುಗ್ಗಿದ ಮುನಿರತ್ನ ಅದನ್ನ ಕೊನೆ ಹಂತದ ವರೆಗೂ ಅದನ್ನೇ ಮುನ್ನಡೆ ಸಾಧಿಸಿಕೊಂಡು ಬಂದಿರುವುದು ವಿಶೇಷ.

Latest Videos

undefined

 ಈ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.  ಎಷ್ಟು ಮತದಿಂದ ಗೆದ್ದಿದ್ದಾರೆ? ಒಟ್ಟು ಪಡೆದ ಮತಗಳೆಷ್ಟು? ಎನ್ನುವ ಅಂಕಿ-ಸಂಖ್ಯೆಗಳೊಂದಿಗೆ ಚುನಾವಣೆ ಆಯೋಗ ಅಧಿಕೃತವಾಗಿ ಮುನಿರತ್ನ ಗೆಲುವನ್ನು ಘೋಷಣೆ ಮಾಡಬೇಕಿದೆ.

ಬೈ ಎಲೆಕ್ಷನ್ ಮತ ಎಣಿಕೆ ಪ್ರಕ್ರಿಯೆ: ಇತ್ತ ಸಿಎಂ ನಿವಾಸಕ್ಕೆ ಅಶೋಕ್ ದಿಢೀರ್ ಭೇಟಿ

 ಚುನಾವಣೆಯ 2013, 2018 (ಸುಮಾರು 26 ಸಾವಿರ) ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಅವರು ಗೆಲುವು ಸಾಧಿಸಿದ್ದರು. ಆದ್ರೆ, ಬದಲಾದ ರಾಜಕೀಯ ವಿದ್ಯಾಮನಗಳಿಂದ ಮುನಿರತ್ನ ಅವರು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು.

ಈ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರಕ್ಕೆ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಅವರು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಇದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಮುಖಭಂಗವಾಗಿದೆ.

ಅಚ್ಚರಿ ಎಂಬಂತೆ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಅವರನ್ನ ಕಾಂಗ್ರೆಸ್‌ಗೆ ಕರೆತಂದು ಆರ್‌ಆರ್‌ ನಗರ ಅಖಾಡಕ್ಕಿಳಿಸಿದ್ರು, ಆದ್ರೆ, ಡಿಕೆ ಬ್ರದರ್ಸ್ ಪ್ಲಾನ್‌ಗಲೆಲ್ಲಾ ಉಲ್ಟಾ ಆಗಿದೆ.

click me!