ಈ ಬಾರಿ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತವನ್ನು ತನ್ನ ತೆಕ್ಕೆಗೆ ಪಡೆಯುವ ಸಲುವಾಗಿ ಇಂಥದ್ದೊಂದು ತಂತ್ರವನ್ನು ಪಕ್ಷ ಪ್ರಯೋಗಿಸುತ್ತಿದೆ.
ನವದೆಹಲಿ: ಈ ಬಾರಿ 370ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಭಾರತೀಯ ಜನತಾ ಪಕ್ಷ ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮೊರೆ ಹೋಗಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತವನ್ನು ತನ್ನ ತೆಕ್ಕೆಗೆ ಪಡೆಯುವ ಸಲುವಾಗಿ ಇಂಥದ್ದೊಂದು ತಂತ್ರವನ್ನು ಪಕ್ಷ ಪ್ರಯೋಗಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ 129 ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ 29. ಅದರಲ್ಲೂ ಬಹುಪಾಲು ಕರ್ನಾಟಕದಿಂದ ಬಂದಿತ್ತು.
ಹೀಗಾಗಿ ಈ ಬಾರಿ ಕರ್ನಾಟಕ ಜೊತೆಗೆ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಜನರ ಮನ ಗೆಲ್ಲಲು ಬಿಜೆಪಿ ಕೃತಕ ಬುದ್ದಿಮತ್ತೆ ಮೊರೆ ಹೋಗಿದೆ. ಅಂದರೆ ಪ್ರಧಾನಿ ನರೇಂದ್ರ ಮೋದಿ ಈ ರಾಜ್ಯಗಳಿಗೆ ಭೇಟಿ ನೀಡಿದ ವೇಳೆ ಅವರ ಭಾಷಣವನ್ನು ಆಯಾ ರಾಜ್ಯಗಳ ಭಾಷೆಗಳಿಗೆ ತತ್‌ಕ್ಷಣದಲ್ಲಿ ತರ್ಜುಮೆ ಮಾಡಿ ಪ್ರಸಾರ ಮಾಡಲಾಗುವುದು. ಇದರಿಂದ ಜನರನ್ನು ಹೆಚ್ಚುಸುಲಭವಾಗಿ ತಲುಪಬಹುದಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ವಾರ್ನಿಂಗ್, ಪೌನತಿ, ಜೇಬುಗಳ್ಳ ಹೇಳಿಕೆಗೆ ಗರಂ!
ದಕ್ಷಿಣದ ಈ ರಾಜ್ಯಗಳ ಜೊತೆ ಪಂಜಾಬ್, ಒಡಿಶಾ, ಮಹಾರಾಷ್ಟ್ರದಲ್ಲೂ ಇದೇ ತಂತ್ರ ಅಳವಡಿಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎನ್ನಲಾಗಿದೆ. ಇತ್ತೀಚೆಗೆ ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಕಾಶಿ-ತಮಿಳು ಸಂಗಮ ಕಾರ್ಯಕ್ರಮ ಉದ್ದೇಶಿಸಿ ಮೋದಿ ಮಾತನಾಡುವ ವೇಳೆ ಅವರ ಭಾಷಣವನ್ನು ತತ್‌ಕ್ಷಣದಲ್ಲೇ ಭಾಷಿಣಿ ತಂತ್ರಜ್ಞಾನ ಬಳಸಿ ತಮಿಳಿಗೂ ಭಾಷಾಂತರಿಸಿ ಪ್ರಸಾರ ಮಾಡಲಾಗಿತ್ತು. ಈ ತಂತ್ರಜ್ಞಾನ ನಾನು ನಿಮ್ಮನ್ನು ಹೆಚ್ಚು ಸುಲಭವಾಗಿ ತಲುಪಲು ನೆರವಾಗಲಿದೆ ಎಂದು ಮೋದಿ ಬಣ್ಣಿಸಿದ್ದರು.
RTI ಮಾಹಿತಿ, 1520 ಕೋಟಿ ಹೂಡಿಕೆ ಮಾಡಿ 8 ವರ್ಷದಲ್ಲಿ ಕೇರಳ ಸರ್ಕಾರ ನೀಡಿದ್ದು ಬರೀ 5839 ಜಾಬ್!
ದಕ್ಷಿಣದಲ್ಲೇಕೆ ಈ ತಂತ್ರ
• ಕಳೆದ ಬಾರಿ ದಕ್ಷಿಣದ 129 ಲೋಕಸಭಾ ಕ್ಷೇತ್ರಗಳ ಪೈಕಿ 29ರಲ್ಲಿ ಮಾತ್ರ ಬಿಜೆಪಿಗೆ ಗೆಲುವು
• ಗೆದ್ದಿದ್ದರಲ್ಲೂ ಬಹುಪಾಲು ಬಂದಿದ್ದು ಕರ್ನಾಟಕವೊಂದರಿಂದಲೇ
• ಹೀಗಾಗಿ ಉಳಿದ ರಾಜ್ಯಗಳ ಜನರ ಗಮನ ಸೆಳೆಯಲು ಪ್ರಾದೇಶಿಕ ಭಾಷೆಗಳಿಗೆ ಮೊರೆ