'B ಟೀಂ ಯಾರಾದರೇನು, ಬಿಜೆಪಿ A ಟೀಮ್ ಎನ್ನುವುದು ಖಾತ್ರಿ ಆಯ್ತು'

By Suvarna News  |  First Published Jun 11, 2022, 3:14 PM IST

* ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ B ಗುದ್ದಾಟ
* ಸಿದ್ದರಾಮಯ್ಯ ಮತ್ತು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಿಎಂ
* B ಟೀಂ ಯಾರಾದರೇನು, ಬಿಜೆಪಿ A ಟೀಮ್ ಎನ್ನುವುದು ಖಾತ್ರಿ ಆಯ್ತು ಎಂದ ಬೊಮ್ಮಾಯಿ


ಬೆಳಗಾವಿ, (ಜೂನ್.11): ಎಚ್.ಡಿ. ಕುಮಾರಸ್ವಾಮಿ ಮತ್ತು‌ ಸಿದ್ದರಾಮಯ್ಯ ಮಧ್ಯೆ ನಾನು ಹೋಗುವುದಿಲ್ಲ. ಭಾರತೀಯ ಜನತಾ ಪಾರ್ಟಿ A ಟೀಂ ಎನ್ನುವುದು ಖಾತ್ರಿಯಾಗಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳಗಾವಿಯಲ್ಲಿ ಇಂದು(ಶನಿವಾರ) ಡಾ.‌ಪ್ರಭಾಕರ ಕೋರೆ ಅವರ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ ಟೀಂ ಯಾವುದಾದರೇನು. ಕುಮಾರಸ್ವಾಮಿ ವ್ಯಖ್ಯಾನ ಬಗ್ಗೆ ನಾನು ಮಾತನಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ, ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಬಿ ಟೀಂ ಎನ್ನುತ್ತಿದೆ.‌ ಹೀಗಾಗಿ ಎ ಟೀಂ ಎನ್ನುವುದು ಬಿಜೆಪಿ ಪಕ್ಕಾ ಆಗಿದೆ ಎಂದರು.

Tap to resize

Latest Videos

ನನ್ನ ವಿರುದ್ಧವೇ ಸಿದ್ದರಾಮಯ್ಯ ಹೆಚ್ಚು ಮಾತನಾಡುತ್ತಾರೆ. ಅವರು ಬಳಸುವ ಪದಗಳು ನನ್ನ ಬಗ್ಗೆ ಜಾಸ್ತಿ ಇರುತ್ತದೆ. ಬೆಳಗಾವಿಗೆ ಬಂದಾಗ ನೀವೇ ನೋಡಿದೀರಲ್ಲ ಎಂದು ಹೇಳಿದರು.

Rajya Sabha Election: ಕಾಂಗ್ರೆಸ್ಸೇ ಬಿಜೆಪಿ ಬಿ ಟೀಂ: ಎಚ್‌ಡಿಕೆ ವಾಗ್ದಾಳಿ

ಬೆಳಗಾವಿಯ ಎಲ್ಲ‌ ಸಾಹುಕಾರರೂ ಒಗ್ಗಟ್ಟಿದ್ದಾರೆ. ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.‌ಪ್ರಭಾಕರ ಕೋರೆ ಮುನಿಸಿಕೊಂಡಿಲ್ಲ. ಅವರನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ನಮ್ಮ ಹಿರಿಯರು, ಮಾರ್ಗದರ್ಶಕರು. ಅವರದ್ದೇ ಆದ ಸ್ಥಾನ ಇದೆ. ನಾವು ಅವರನ್ನು ಅಲ್ಲಗಳೆದಿಲ್ಲ. ಪೂರ್ವಭಾವಿಯಾಗಿ ಆರು ತಿಂಗಳ ಮುಂಚೆಯೇ ಅವರು ಡಾಕ್ಟರೇಟ್ ಪಡೆಯಲು ಹೋಗಿದ್ದರು. ನನಗೆ ಹೇಳಿ ಹೋಗಿದ್ದರು. ನಾಲ್ಕು ದಶಕಗಳ ಸುದೀರ್ಘ ಅವಧಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ಮಾಡಿರುವ ಸೇವೆಯನ್ನು ಪಕ್ಷ ಹಾಗೂ ನಾವು ಗುರುತಿಸುತ್ತೇವೆ ಎಂದು ತಿಳಿಸಿದರು.

ನಾಲ್ಕೂ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಇಬ್ಬರು ವಾಯವ್ಯ ಕ್ಷೇತ್ರದಲ್ಲಿ ಅರುಣ ಶಹಾಪುರ ಹಾಗೂ ಹನುಮಂತ ನಿರಾಣಿ ಹೆಚ್ಚಿನ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಬಿಜೆಪಿಯ ಬಿ ಟೀಮ್‌ ಕಾಂಗ್ರೆಸ್‌
ಇನ್ನು ಮುಂದೆ ಕಾಂಗ್ರೆಸ್‌ ಮತ್ತು ಆ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಅಲ್ಲದೆ, ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ ಟೀಮ್‌ ಎಂದು ಕರೆಯುವಂತಿಲ್ಲ. ಬಿಜೆಪಿಯ ಬಿ ಟೀಮ್‌ ಕಾಂಗ್ರೆಸ್‌ ಪಕ್ಷ ಎಂದೂ ಅವರು ಆಪಾದಿಸಿದ್ದಾರೆ.

click me!