ಮಾಜಿ ಶಾಸಕರೋರ್ವರ ಪುತ್ರ ಸೈಕ್ಲಿಂಗ್ಗೆ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟ ಘಟನೆ ನಡೆದಿದೆ.ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಬಾಗಲಕೋಟೆ, (ಸೆ.13): ಬೀಳಗಿ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್ ಪಾಟೀಲ್ ಪುತ್ರ ಸೈಕ್ಲಿಂಗ್ಗೆ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮೃತಟ್ಟಿದ್ದಾರೆ.
ಇವರು ಪ್ರತಿದಿನವೂ ಸುಮಾರು 50 ಕಿಮೀ ದೂರ ಸೈಕ್ಲಿಂಗ್ಗೆ ಹೋಗುತ್ತಿದ್ದರು. ಹಾಗೇ ಇಂದು (ಭಾನುವಾರ) ಕೂಡ ಸ್ನೇಹಿತರೊಂದಿಗೆ ಬಾಗಲಕೋಟೆಯಿಂದ ಬಾದಾಮಿ ತಾಲೂಕಿನ ಕೆರೂರ ಬಳಿ ಹೋಗಿದ್ದ ವಿನೋದ್ ಅವರಿಗೆ ಅಲ್ಲಿಯೇ ತೀವ್ರ ಹೃದಯಾಘಾತವಾಗಿದೆ.
ಬಿಜೆಪಿ ಮಾಜಿ ಶಾಸಕರ ಪುತ್ರ ಆತ್ಮಹತ್ಯೆಗೆ ಶರಣು
ಕೂಡಲೇ ಅವರನ್ನ ಸೈಕ್ಲಿಂಗ್ ತಂಡದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆಯೇ ವಿನೋದ ಅವರು ಮೃತಪಟ್ಟಿದ್ದಾರೆ.
ವಿನೋದ್ ಅವರು ಎರಡು ದಿನಗಳ ಹಿಂದಷ್ಟೇ 70.ಕಿ.ಮೀ. ದೂರ ಸೈಕ್ಲಿಂಗ್ ಮಾಡಿದ್ದರು. ಹಾಗೇ ಮುಂದೆ 100 ಕಿ.ಮೀ. ಸೈಕ್ಲಿಂಗ್ ಮಾಡುವ ಗುರಿಯನ್ನೂ ಹೊಂದಿದ್ದರು. ಅಲ್ಲದೇ ಅವರು ಬಾಗಲಕೋಟೆ ಸೈಕ್ಲಿಂಗ್ ಕ್ಲಬ್ ಸದಸ್ಯ, ಅಮೆಚೂರ್ ಸೈಕ್ಲಿಸ್ಟ್ ಕೂಡ ಹೌದು.